x
ಪೊನ್ನಂಪೇಟೆ, ಸೆ. ೧೦ : ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ಮಂಡಲ ವ್ಯಾಪ್ತಿಯ ಹಾತೂರು ಶಕ್ತಿ ಕೇಂದ್ರದ ಪ್ರಮುಖರಾಗಿ ಮುರುವಂಡ ಸವನ್ ಸೋಮಣ್ಣ ಹಾಗೂ ಪಡಿಕಲ್ ಯದುಕುಮಾರ್ ಆಯ್ಕೆ ಯಾಗಿದ್ದಾರೆ.
ಹಾತೂರಿನಲ್ಲಿ ನಡೆದ ಪಕ್ಷದ ಶಕ್ತಿ ಕೇಂದ್ರದ ಪುನರ್ ರಚನಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಹಾತೂರು ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖರಾಗಿ ತೀತಮಾಡ ತಿಮ್ಮಯ್ಯ ಹಾಗೂ ಕಾಡ್ಯಮಾಡ ವಿನೋದ್ ಅವರನ್ನು ಆಯ್ಕೆಗೊಳಿಸಲಾಯಿತು.
ಸಭೆಯಲ್ಲಿ ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷರಾದ ಮಾಚಿಮಂಡ ಸುವಿನ್ ಗಣಪತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಗುಮ್ಮಟ್ಟಿರ ಕಿಲನ್ ಗಣಪತಿ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮುದ್ದಿಯಡ ಮಂಜು ಗಣಪತಿ, ಅಜಿತ್ ಕರುಂಬಯ್ಯ, ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ, ತಾಲೂಕು ಉಪಾಧ್ಯಕ್ಷರಾದ ಕಬೀರ್ ದಾಸ್, ಮಲ್ಲಂಡ ಮಧು ಸೇರಿದಂತೆ ಪಕ್ಷದ ಹಿರಿಯರು, ಹಾತೂರು ಶಕ್ತಿ ಕೇಂದ್ರದ ಪದಾಧಿಕಾರಿಗಳು, ವಿವಿಧ ಬೂತ್ ಸಮಿತಿ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಸಮಿತಿ ಪ್ರಮುಖರು, ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಮತ್ತು ಸಹಕಾರಿ ಸಂಘಗಳ ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಜರಿದ್ದರು.