ಮರಗೋಡು, ಸೆ. ೧೦: ವಿವೇಕಾನಂದ ಯುವಕ ಸಂಘ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ೫೩ನೇ ವರ್ಷದ ಆಟೋಟ ಸ್ಪರ್ಧೆಗಳನ್ನು ಮರಗೋಡಿನಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕಾನಡ್ಕ ಪ್ರಸಾದ್, ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಸಂಘದ ನಿಕಟ ಪೂರ್ವ ಅಧ್ಯಕ್ಷ ಬಡುವಂಡ್ರ ಲಕ್ಷಿö್ಮಪತಿ ಸಾಂಪ್ರದಾಯಿಕವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಪರಿಚನ ಶರತ್, ಸರಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಜಯ, ನಿವೃತ್ತ ಸುಬೆದಾರ್ ಪೇರಿಯನ ವಸಂತ್ ಇವರುಗಳು ಉಪಸ್ಥಿತರಿದ್ದರು.
ನಂತರ ಸಾರ್ವಜನಿಕರಿಗೆ ವಿವಿಧ ಗ್ರಾಮಾಂತರ ಆಟೋಟ ಸ್ಪರ್ಧೆಗಳು ನಡೆದು ವಿಜೇತರಾದ ಕ್ರೀಡಾ ಪಟುಗಳಿಗೆ ಹಾಗೂ ತಂಡಗಳಿಗೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಡುವಂಡ್ರ ಕವಿತ ಬೆಳ್ಯಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿಶನ್ ಉತ್ತಪ್ಪ, ಕಾನಡ್ಕ ಹನಿಶ್ ಮಾಧ್ಯಮ ವರದಿಗಾರ ಗೋಪಾಲ್ ಸೋಮಯ್ಯ, ಮುಖ್ಯ ಶಿಕ್ಷಕಿ ಕೆದಂಬಾಡಿ ಚಂದ್ರಕಲಾ ಕಾರ್ಯಕ್ರಮದಲ್ಲಿ, ಸಂಘದಲ್ಲಿ ಸುದೀರ್ಘ ೨೭ ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿದ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಬಡುವಂಡ್ರ ಲಕ್ಷಿö್ಮಪತಿ, ಕಾರ್ಯದರ್ಶಿಯಾಗಿದ್ದ ಕಾನಡ್ಕ ಹನಿಶ್, ಮಗೇರನ ಬೆಳ್ಯಪ್ಪ, ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ ಹಿರಿಯರನ್ನು ಸಂಘದ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾನಡ್ಕ ಭರತ್ ಪ್ರಾರ್ಥಿಸಿದರು. ಕಾನಡ್ಕ ಹನಿಶ್ ಸ್ವಾಗತಿಸಿದರು. ಮಗೇರನ ಬೆಳ್ಯಪ್ಪ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾಳಿಗೆ ಮನೆ ವೆಂಕಟೇಶ್ ಸ್ವಾಗತಿಸಿದರು, ಸಂಘದ ಕಾರ್ಯದರ್ಶಿ ಬಡುವಂಡ್ರ ದುಷ್ಯಂತ್ ವಂದಿಸಿದರು. ವಿವೇಕಾನಂದ ಯುವಕ ಸಂಘದ ಸರ್ವ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರಾಮಸ್ಥರು, ಕ್ರೀಡಾಭಿಮಾನಿಗಳು ಧಾನಿಗಳು ಹಾಜರಿದ್ದರು.