ಚೆಯ್ಯಂಡಾಣೆ, ಸೆ. ೧೦ : ಕೊಡಗಿನ ಅನಿವಾಸಿ ಸಂಘಟನೆ ಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಶಿಯೇಷನ್ ಯುಎಇ ಸಮಿತಿ ವತಿಯಿಂದ ದುಬೈಯಲ್ಲಿ ಆಯೋಜಿಸಲಿರುವ ಬೃಹತ್ ಮೀಲಾದ್ ಸಮಾವೇಶಕ್ಕೆ ಇತ್ತೀಚಿಗೆ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ತಾ.೨೨ ರಂದು ದುಬೈಯ ವಿಂಡಮ್ ಹೊಟೇಲ್ ಸಭಾಂಗಣದಲ್ಲಿ "ವಿಶ್ವ ವಿಮೋಚನೆಯ ಹಾದಿ ಪ್ರವಾದಿ(ಸ.ಅ)"ಎಂಬ ಧ್ಯೇಯ ವಾಕ್ಯದಲ್ಲಿ ಬೃಹತ್ ಮಿಲಾದ್ ಸಮಾವೇಶ ನಡೆಯಲಿದ್ದು ಇದಕ್ಕೆ ಸ್ವಾಗತ ಸಮಿತಿಯನ್ನು ಲ್ಯಾಂಡ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ರಫೀಕ್ ಹಾಜಿ ಚಾಮಿಯಾಲ ವಹಿಸಿದ್ದರು. ಜಲೀಲ್ ನಿಝಾಮಿ ಸಭೆಯನ್ನು ಉದ್ಘಾಟಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಕಾರ್ಯಾಧ್ಯಕ್ಷರಾಗಿ ಹಮೀದ್ ನಾಪೋಕ್ಲು, ಹಮೀದ್ ಚಾಮಿಯಾಲ, ಕೋಶಾಧಿಕಾರಿಯಾಗಿ ರಫೀಕ್ ಗುಂಡಿಗೆರೆ, ಸಂಚಾಲಕರಾಗಿ ಶಫೀಕ್ ಎಮ್ಮೆಮಾಡು, ಸಹ ಸಂಚಾಲಕರಾಗಿ ನಯಾಜ್ ನಾಪೋಕ್ಲು, ಜಮಾಲ್ ಕುಂಜಿಲ ಹಾಗೂ ೩೦ ಮಂದಿಯನ್ನು ವಿವಿಧ ಘಟಕಗಳ ನಿರ್ವಾಹಕರಾಗಿ ಆಯ್ಕೆ ಮಾಡಲಾಯಿತು. ಜಲೀಲ್ ನಿಝಾಮಿ ಪ್ರಾರ್ಥಿಸಿ, ನಿಸಾರ್ ಗುಂಡಿಕೆರೆ ಸ್ವಾಗತಿಸಿ, ರಫೀಕ್ ಗುಂಡಿಕೆರೆ ವಂದಿಸಿದರು.