ಸಿದ್ದಾಪುರ, ಸೆ. ೧೦: ನೆಲ್ಲಿಹುದಿಕೇರಿ ಗ್ರಾಮದ ಬಹುಸಂಖ್ಯಾತ ಹಿಂದುಗಳ ಸ್ಮಶಾನವು ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷವು ಹೋರಾಟ ನಡೆಸಿದ್ದರೂ ಕೂಡ ನೆಲ್ಲಿಹುದಿಕೇರಿ ಗ್ರಾ.ಪಂ. ಕ್ರಮಕ್ಕೆ ಮುಂದಾಗದೇ ಓಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಪಕ್ಷದ ಮುಖಂಡ ಪಿ.ಆರ್. ಭರತ್ ಆರೋಪಿಸಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಹುದಿಕೇರಿ ಗ್ರಾಮದಲ್ಲಿ ಶೇ. ೪೫ಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದುಗಳು ವಾಸವಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಬಾಡಿಗೆ ಮನೆ, ಲೈನ್ ಮನೆಗಳಲ್ಲಿ ವಾಸವಿದ್ದಾರೆ. ಉಳಿದಂತೆ ಕೇವಲ ಮೂರು ಸೆಂಟ್ ಜಾಗದಲ್ಲಿ ಮನೆ ಮಾಡಿ ವಾಸವಿರುವವರು ಹೆಚ್ಚಾಗಿದ್ದಾರೆ. ಇಲ್ಲಿನ ಬಡ ಹಿಂದು ಕುಟುಂಬಗಳಲ್ಲಿ ಯಾರಾದರು ಮೃತಪಟ್ಟರೆ ಅವರ ಅಂತ್ಯಕ್ರಿಯೆಗೆ ಕಳೆದ ಹಲವಾರು ವರ್ಷಗಳಿಂದ ಕಾವೇರಿ ನದಿ ತೀರವನ್ನೇ ಅವಲಂಭಿಸಿದ್ದಾರೆ. ಆದರೆ ಇತ್ತೀಚೆಗೆ ಕಾವೇರಿ ನದಿ ದಡವು ಕುಸಿದ ಪರಿಣಾಮ ಇರುವ ಸ್ಮಶಾನದ ಬಹುಪಾಲು ನದಿ ಪಾಲಾಗಿದೆ. ಉಳಿದ ಜಾಗದಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ನದಿ ದಡದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸಜ್ಜಾಗುತ್ತಿದ್ದ ಸಂಧರ್ಭದಲ್ಲಿ ತೆಗೆದ ಗುಂಡಿ ಕುಸಿದು ಅಂತ್ಯಕ್ರಿಯೆಗೆ ಅಡ್ಡಿಯಾದ ಘಟನೆಗಳು ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ನೆಲ್ಲಿಹುದಿಕೇರಿ ಗ್ರಾಮದ ವ್ಯಾಪ್ತಿಯಲ್ಲಿ ಜಾಗವು ಸ್ಮಶಾನ ಜಾಗ ಎಂಬ ದಾಖಲೆಗಳಿದ್ದು ಅದನ್ನು ಹಿಂದುಗಳಿಗೆ ಹಸ್ತಾಂತರಿಸಬೇಕೆAದು ನೆಲ್ಲಿಹುದಿಕೇರಿ ಗ್ರಾ.ಪಂ. ಮನವಿ ಮಾಡಿದ ಪರಿಣಾಮ ಗ್ರಾ.ಪಂ. ಆಡಳಿತ ಮಂಡಳಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಭೆ ಸೇರಿದ್ದರು. ಆದರೆ ಸಭೆಯಲ್ಲಿ ಯಾವುದೇ ವಿಷಯವು ಪ್ರಸ್ತಾಪಿಸದೆ ಓಲೈಕೆ ಹಾಗೂ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ದಾಖಲೆಗಳಲ್ಲಿ ಸ್ಮಶಾನ ಎಂಬ ಹೆಸರಿನಲ್ಲಿರುವ ಜಾಗವು ಒತ್ತುವರಿಯಾಗಿದ್ದು ಕೂಡಲೇ ಒತ್ತುವರಿದಾರರಿಂದ ಬಿಡಿಸಿ ಸ್ಮಶಾನಕ್ಕೆ ನೀಡಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ನಿರ್ಲಕ್ಷö್ಯ ತೋರಿದ್ದಲ್ಲಿ ಗ್ರಾಮ ಪಂಚಾಯಿತಿ ಎದುರು ಹಾಗೂ ಸಂಬAಧಿಸಿದ ಅಧಿಕಾರಿಗಳ ಕಚೇರಿಯ ಎದುರು ಅಣಕು ಶವಸಂಸ್ಕಾರವನ್ನು ನಡೆಸುವ ಮೂಲಕ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಪಕ್ಷದ ಪ್ರಮುಖ ಉದಯ ಮಾತನಾಡಿ ಕಾವೇರಿ ನದಿ ದಡದಲ್ಲಿ ಶವಸಂಸ್ಕಾರ ಮಾಡಿದರೆ ನದಿ ಕಲುಷಿತವಾಗುತ್ತದೆ ಎಂಬ ಅರಿವು ಅಧಿಕಾರಿಗಳಿಗಿದ್ದರೂ ಬದಲಿ ವ್ಯವಸ್ಥೆಗೆ ಮುಂದಾಗದೇ ಇರುವುದು ವಿಪರ್ಯಾಸವಾಗಿದೆ. ನದಿ ದಡ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಮುಂದಿನ ಕೆಲವು ವರ್ಷಗಳಲ್ಲಿ ಹಿಂದುಗಳಿಗೆ ಶವಸಂಸ್ಕಾರ ನಡೆಸಲು ಜಾಗ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಕೂಡಲೇ ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಚಂದ್ರನ್, ಮುಸ್ತಫಾ, ಶಿವರಾಮನ್, ಜೋಸೆಫ್ ಹಾಜರಿದ್ದರು.