ಪೊನ್ನಂಪೇಟೆ, ಸೆ. ೧೦: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಗೂರು, ಮತ್ತೂರು, ಕೋಟೂರು ಗ್ರಾಮಗಳ ತೋಟದ ಮಾಲೀಕರ ಲೈನ್ ಮನೆಗಳಲ್ಲಿ ವಾಸವಾಗಿರುವ ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರ ನೋಂದಣಿ ಕಾರ್ಯವನ್ನು ತಾ. ೧೨ ರಿಂದ ಸೆ. ೩೦ ರವರೆಗೆ ಕಿರುಗೂರು ಗ್ರಾಮ ಪಂಚಾಯಿತಿಯಲ್ಲಿ ನಡೆಸಲಾಗುತ್ತದೆ.
ಆದ್ದರಿಂದ ತೋಟದ ಮಾಲೀಕರು ತಮ್ಮ ತೋಟದ ಲೈನ್‌ಮನೆಗಳಲ್ಲಿ ವಾಸವಾಗಿರುವ ಹೊರರಾಜ್ಯಗಳಿಂದ ಬಂದಿರುವ ಕಾರ್ಮಿಕರ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಜೊತೆಗೆ ರೇಷನ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ಕುಟುಂಬದ ಗ್ರೂಪ್ ಫೋಟೋ ಅಥವಾ ಕುಟುಂಬದ ಪ್ರತಿಯೊಬ್ಬರ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಕಿರುಗೂರು
ಗ್ರಾಮ ಪಂಚಾಯಿತಿಗೆ ನೀಡಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವAತೆ ಕಿರುಗೂರು ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.