ವೀರಾಜಪೇಟೆ, ಅ. ೧: ಅಗ್ನಿಶಾಮಕ ಸೇವೆಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ರೂಪದಲ್ಲಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಗೋಣಿಕೊಪ್ಪದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ವೀರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿರುವ ಲಿಟಲ್ ವುಡ್ ಮಾಂಟೆಸ್ಸರಿ ಶಾಲೆಯಲ್ಲಿ ಅಗ್ನಿ ಅವಘಡಗಳಿಗೆ ಸಂಬAಧಿಸಿದAತೆ ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಿ ಅಗ್ನಿ ಅನಾಹುತ ಸಂಭವಿಸಿದರೆ ತಕ್ಷಣ ಯಾವ ರೀತಿಯಲ್ಲಿ ಅಗ್ನಿ ನಂದಿಸಬಹುದು ಎಂದು ಇಲಾಖೆಯ ಹನುಮಂತ ಕೊಠಾರಿ ಅವರು ಸವಿವರವಾದ ಮಾಹಿತಿಯನ್ನು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ತಿಳಿಸಿದರು.

ಅಗ್ನಿಯಿಂದ ಯಾವ ರೀತಿಯಲ್ಲಿ ರಕ್ಷಿಸಿಕೊಳ್ಳುವುದು, ಮನೆ ಹಾಗೂ ಕಟ್ಟಡಗಳಲ್ಲಿ ಬೆಂಕಿ ಹೇಗೆ ಹತ್ತಿಕೊಳ್ಳುತ್ತದೆ, ಮನೆಯಲ್ಲಿ ಗ್ಯಾಸ್ ಸೋರಿಕೆಯಾದರೆ ಯಾವ ರೀತಿ ಸಿಲಿಂಡರ್‌ಅನ್ನು ಬಂದ್ ಮಾಡುವುದು ಎಂದು ಇಲಾಖೆಯ ಸುನಿಲ್‌ಕುಮಾರ್ ಮಾಹಿತಿ ನೀಡಿದರು.

ಲಿಟಲ್ ವುಡ್ ಶಾಲೆಯ ಶಿಕ್ಷಕಿ ಮಲ್ಲಿಕಾ ಅಪ್ಪಯ್ಯ ಮಾತನಾಡಿ, ಮಕ್ಕಳಿಗೆ ಈ ಸಣ್ಣ ವಯಸ್ಸಿನಲ್ಲಿ ಅಗ್ನಿಶಾಮಕ ಇಲಾಖೆ ಪ್ರಯೋಜನ ಹಾಗೂ ತಕ್ಷಣ ಬೆಂಕಿ ಹಿಡಿದಾಗ ಯಾವ ರೀತಿಯಲ್ಲಿ ನಂದಿಸಬಹುದು, ಬಾವಿ ಮತ್ತು ಕೆರೆಗಳಲ್ಲಿ ಬಿದ್ದ ಶವವನ್ನು ತೆಗೆದು ಸಾಗಿಸುವ ಬಗ್ಗೆ ಮಾಹಿತಿ ನೀಡಲಾಯಿತು.

ಲಿಟಲ್ ವುಡ್ ಶಾಲೆಯ ಮುಖ್ಯಸ್ಥೆ ಸುಧಾ ಉತ್ತಪ್ಪ, ಶಿಕ್ಷಕರಾದ ಜೊತ್ಸ, ದೀಪಿಕಾ, ಸೌಮ್ಯ, ಚಿನ್ನು, ಅಗ್ನಿ ಶಾಮಕ ಇಲಾಖೆಯ ಠಾಣಾಧಿಕಾರಿ ಡಿ.ಜಿ. ಮಂಜೆಗೌಡ, ಇಲಾಖೆಯ ಪೊನ್ನಪ್ಪ, ಹನುಮಂತ ಕೊಠಾರಿ, ಶೆಟ್ಟಪ್ಪ ಪೂಜಾರಿ ಭಾಗವಹಿಸಿದ್ದರು.