ಕೂಡಿಗೆ, ಅ. ೧: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್‌ನ ವತಿಯಿಂದ ವರ್ಷಂಪ್ರತಿಯAತೆ ನೀಡುವ ಕೃಷಿ ಪತ್ತಿನ ಸಹಕಾರದ ಸಂಘಗಳಿಗೆ ನೀಡುವ ಬಹುಮಾನ ದೊರಕಿದೆ.
ಸಹಕಾರ ಸಂಘ ಮಾನದಂಡದ ಆಧಾರದ ಮೇಲೆ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯವಹಾರ, ನಿರ್ವಹಣೆ, ಸಾಲ ಮರುಪಾವತಿ ಸೇರಿದಂತೆ ಆಡಳಿತ ವ್ಯವಸ್ಥೆ ಆಧಾರ ಮೇಲೆ ನೀಡಲಾಗುವ ಪ್ರಶಸ್ತಿಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಪ್ರಥಮ ಬಹುಮಾನ, ಮತ್ತು ಜಿಲ್ಲಾ ಕೇಂದ್ರ ಬ್ಯಾಂಕ್‌ನ ದ್ವಿತೀಯ ಬಹುಮಾನವನ್ನು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಪಡೆದುಕೊಂಡಿದ್ದಾರೆ.
ಬಹುಮಾನವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಬಾಂಡ್ ಗಣಪತಿ ಅವರು ವಿತರಣೆ ಮಾಡಿದರು. ಈ ಸಂದರ್ಭ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಪಿ. ರಾಜು, ಎಸ್.ಆರ್. ಅರುಣ್ ರಾವ್ ಹಾಜರಿದ್ದರು.