ಶನಿವಾರಸಂತೆ, ಅ. ೧: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನ ದಲ್ಲಿ ತಾ. ೩ ರಿಂದ ತಾ. ೧೨ ರವರೆಗೆ ಶರನ್ನವರಾತ್ರಿ ಪ್ರಯುಕ್ತ ದುರ್ಗಾ ಪೂಜೆ ಹಾಗೂ ವಿವಿಧ ಸೇವಾ ರಾಧನೆಗಳು ನಡೆಯಲಿವೆ.

ತಾ. ೩ ರಂದು ಬೆಳಿಗ್ಗೆ ೧೦.೪೫ ರ ಧನುರ್ ಲಗ್ನದಲ್ಲಿ ವ್ರತಸಂಕಲ್ಪ, ಅಖಂಡ ನಂದಾದೀಪ ಸ್ಥಾಪನೆ, ಧ್ವಜಸ್ಥಾಪನೆ, ದುರ್ಗಾ ಕಲಶ ಸ್ಥಾಪನಾ ವಿಧಿ ಹಾಗೂ ಸಂಜೆ ೬ ಗಂಟೆಗೆ ಬಿಂಬಶುದ್ಧಿ, ಸಾಮೂಹಿಕ ಅಭಿಷೇಕ, ದುರ್ಗಾ ಪೂಜಾವಿಧಿ. ತಾ. ೪ ರಂದು ಸಂಜೆ ೬ ಗಂಟೆಗೆ ದುರ್ಗಾ ಕಲ್ಪೋಕ್ತಪೂಜೆ, ಪಂಚದುರ್ಗಾ ದೀಪ ನಮಸ್ಕಾರ, ತಾ. ೫ ರಂದು ಸಂಜೆ ದುರ್ಗಾ ಕಲ್ಪೋಕ್ತಪೂಜೆ, ಪುಷ್ಪಾಂಜಲಿ, ಶತದೀಪಾರತಿ. ತಾ. ೬ ರಂದು ಸಂಜೆ ದುರ್ಗಾ ಕಲ್ಪೋಕ್ತಪೂಜೆ, ಸಾಮೂಹಿಕ ಲಲಿತಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ. ತಾ. ೭ ರಂದು ಸಂಜೆ ದುರ್ಗಾ ಕಲ್ಪೋಕ್ತಪೂಜೆ, ದೀಪಾರಾಧನೆ, ತಾ. ೮ ರಂದು ಸಂಜೆ ದುರ್ಗಾ ಕಲ್ಪೋಕ್ತಪೂಜೆ, ದುರ್ಗಾರತಿ. ತಾ. ೯ ರಂದು ದುರ್ಗಾ ಕಲ್ಪೋಕ್ತಪೂಜೆ, ಸರಸ್ವತ್ಯವಾಹನಂ. ತಾ. ೧೦ ರಂದು ಸಂಜೆ ದುರ್ಗಾ ಕಲ್ಪೋಕ್ತಪೂಜೆ, ರಂಗಪೂಜೆ. ತಾ. ೧೧ ರಂದು ದುರ್ಗಾ ಕಲ್ಪೋಕ್ತಪೂಜೆ, ದುರ್ಗಾ ಹೋಮ, ಕನ್ಯಾಪೂಜೆ, ಸುವಾಸಿನೀ ಆರಾಧನೆ ನಡೆಯಲಿದೆ.

ತಾ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ದುರ್ಗಾ ಕಲಶ ವಿಸರ್ಜನೆ, ವ್ರತಸಮಾಪ್ತಿ, ಸಂಜೆ ೫ ಗಂಟೆಗೆ ಬಲಿಹರಣ, ಶಮೀಪೂಜಾ, ಕಲಶಶೋಧಕ ಮಾರ್ಜನಂ ಹಾಗೂ ಚೌಡೇಶ್ವರಿ ಉತ್ಸವ ಮೆರವಣಿಗೆ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ರಾತ್ರಿ ೮ ಕ್ಕೆ ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಇರುತ್ತದೆ.

ಎಲ್ಲಾ ಪೂಜಾ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಜೋಷಿ ಅವರ ಪೌರೋಹಿತ್ಯದಲ್ಲಿ ನಡೆಯುತ್ತವೆ ಎಂದು ದೇವಾಲಯ ಸೇವಾ ಸಮಿತಿ ಆಡಳಿತ ಮಂಡಳಿ ಹಾಗೂ ಚೌಡೇಶ್ವರಿ ಮಹಿಳಾ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.ಗಂಟೆಗೆ ದುರ್ಗಾ ಕಲಶ ವಿಸರ್ಜನೆ, ವ್ರತಸಮಾಪ್ತಿ, ಸಂಜೆ ೫ ಗಂಟೆಗೆ ಬಲಿಹರಣ, ಶಮೀಪೂಜಾ, ಕಲಶಶೋಧಕ ಮಾರ್ಜನಂ ಹಾಗೂ ಚೌಡೇಶ್ವರಿ ಉತ್ಸವ ಮೆರವಣಿಗೆ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ರಾತ್ರಿ ೮ ಕ್ಕೆ ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಇರುತ್ತದೆ.

ಎಲ್ಲಾ ಪೂಜಾ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಜೋಷಿ ಅವರ ಪೌರೋಹಿತ್ಯದಲ್ಲಿ ನಡೆಯುತ್ತವೆ ಎಂದು ದೇವಾಲಯ ಸೇವಾ ಸಮಿತಿ ಆಡಳಿತ ಮಂಡಳಿ ಹಾಗೂ ಚೌಡೇಶ್ವರಿ ಮಹಿಳಾ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.