* ಗೋಣಿಕೊಪ್ಪ, ಅ. ೧: ಜಮಾಹತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ನೈತಿಕತೆಯ ಸ್ವಾತಂತ್ರ‍್ಯ ಅಭಿಯಾನ ನಡೆಸ ಲಾಯಿತು. ಗೋಣಿಕೊಪ್ಪ ಸ್ಥಾನೀಯ ಸಮಿತಿ ಮಹಿಳಾ ಸಂಚಾಲಕಿ ಸನೀರ ತನ್ವೀರ್ ನೇತೃತ್ವದಲ್ಲಿ ಬಸ್ ನಿಲ್ದಾಣದಲ್ಲಿ ಮಹಿಳೆಯರಲ್ಲಿ ಸ್ವಾತಂತ್ರö್ಯ ಜಾಗೃತಿ ಮೂಡಿಸಲಾಯಿತು.

ಸೌಂದರ್ಯಕ್ಕಾಗಿ ನಗ್ನತೆಯ ಪ್ರದರ್ಶನಗಳು ಮಾಡದೇ ಉತ್ತಮ, ಸಾಂಪ್ರದಾಯಿಕ ಬದುಕು ಕಟ್ಟಿಕೊಳ್ಳುವುದು ಉತ್ತಮ ಎಂದು ಸಂದೇಶ ಸಾರಲಾಯಿತು. ಮಾನಸಿಕವಾಗಿ ಗುಲಾಮ ರಾಗುವುದು, ಮಾದಕ ವ್ಯಸನಕ್ಕೆ ಒಳಪಟ್ಟು ಬದುಕನ್ನು ನಾಶದೆಡೆಗೆ ಕೊಂಡೊಯ್ಯುವುದು ಮತ್ತು ವಿವಾಹಿತ ಸಂಬAಧಗಳು, ಲೈಂಗಿಕ ವಿಚಾರಗಳ ಬಗ್ಗೆ ಮಹಿಳೆಯರ ಗಂಭೀರ ಸಮಸ್ಯೆಗಳ ಪರಿಹಾರ ಅರಿವು ಮೂಡಿಸಲಾಯಿತು. ಜಮಾಹತ್ ನಿರ್ವಹಕಿ ನಸೀರ ರಶೀದ್, ರಸೀನ ಜುಬೈರ್ ಸೇರಿದಂತೆ ಜಮಾಹತೆ ಇಸ್ಲಾಮಿ ಹಿಂದ್ ಸಮಿತಿ ಸದಸ್ಯರುಗಳು ಇದ್ದರು.