- ಅನಿಲ್ ಎಚ್.ಟಿ.
ಮಡಿಕೇರಿ, ಅ. ೧: ಗಾಂಧೀಜಿ ವಿಚಾರಧಾರೆಗಳನ್ನು ಸಾರುವ ಸುಂದರ ಭವನವೊಂದು ಮಡಿಕೇರಿಯಲ್ಲಿದ್ದು ಪ್ರವಾಸಿಗರೂ ಭೇಟಿ ನೀಡುವಂತಹ ಭವ್ಯ ಭವನ ಇದಾಗಿದೆ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಸುದರ್ಶನ್ ಸರ್ಕಲ್ ಮೇಲ್ಬದಿ ರಸ್ತೆಯಲ್ಲಿ ಸಾಗಿದರೆ ವಿಶಾಲವಾದ ಆವರಣದಲ್ಲಿ ಗಾಂಧಿ ಭವನ ಕಂಗೊಳಿಸುತ್ತದೆ.
ಗಾAಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕೇಂದ್ರದಲ್ಲಿ ಈ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ.
ಮಡಿಕೇರಿ ಗಾಂಧಿ ಭವನಕ್ಕೆ ಸುತ್ತು ಬಂದರೆ ನಿಜಕ್ಕೂ ಗಾಂಧೀಜಿ ಜೀವನದ ಅನೇಕ ಪ್ರಮುಖ ಘಟ್ಟಗಳನ್ನು ನೋಡಿದಂತಾಗುತ್ತದೆ. ಭವನದ ಮುಂಭಾಗದಲ್ಲಿಯೇ ತನ್ನ ಬಿರುಸಿನ ನಡಿಗೆಯಲ್ಲಿನ ಗಾಂಧೀಜಿಯ ಕರಿಶಿಲಾ ಕಂಚಿನ ಮೂರ್ತಿ ಗಮನ ಸೆಳೆಯುತ್ತದೆ. ಭವನದ ಒಳ ಪ್ರವೇಶಿಸುತ್ತಿದ್ದಂತೆಯೇ ಮುಂಭಾಗದಲ್ಲಿಯೇ ಮಹಾತ್ಮನ ಶ್ವೇತಶಿಲಾ ಮೂರ್ತಿ ಕಣ್ಮನ ಸೆಳೆಯುತ್ತದೆ. ಭವನದ ಸುತ್ತಲೂ ಅಲ್ಲಲ್ಲಿ, ಬಾಪುವಿನ ವಿವಿಧ ಭಂಗಿಗಳ ಪ್ರತಿಮೆಯನ್ನು ರೂಪಿಸಲಾಗಿದ್ದು ಪ್ರತಿಯೊಂದು ಶಿಲ್ಪವೂ ಉತ್ತಮ ಗುಣಮಟ್ಟದಿಂದ ಗಮನ ಸೆಳೆಯುವಂತಿದೆ
ಮಗುವಿನೊAದಿಗೆ ಮಗುವಿನ ಮುಗ್ದ ನಗುವಿನಲ್ಲಿ ಕಂಗೊಳಿಸುವ ಗಾಂಧಿ ಪ್ರತಿಮೆ, ಚರಕ ನೇಯುತ್ತಿರುವ ಗಾಂಧಿ ತಾತಾ, ಗ್ರಂಥ ಓದುವಿಕೆಯಲ್ಲಿ ತಲ್ಲೀನರಾಗಿರುವ ಮಹಾತ್ಮನ ಮೂರ್ತಿಯೂ ಮನಸೆಳೆಯುತ್ತಿವೆೆ. ಭವನದಲ್ಲಿ ೧೦೦ ಮಂದಿ ಕೂರಬಹುದಾದ ಕಿರು ಸಭಾಂಗಣವಿದ್ದು, ಉತ್ತಮ ವೇದಿಕೆಯೂ ಇದೆ.
ತತ್ವ ರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ನೀತಿ ಹೀನ ವಾಣಿಜ್ಯ ಶೀಲವಿಲ್ಲದ ಶಿಕ್ಷಣ, ಆತ್ಮಸಾಕ್ಷಿ ರಹಿತ ಭೋಗ, ಮಾನವತಾ ಶೂನ್ಯ ವಿಜ್ಞಾನ, ತ್ಯಾಗವಿಲ್ಲದ ಪೂಜೆ ಎಂಬ ಏಳು ಸಾಮಾಜಿಕ ಪಾಪಗಳ ಬಗ್ಗೆ ಗಾಂಧೀಜಿ ಹೇಳಿದ್ದ ಮಾತುಗಳು ಕೂಡ ಧ್ವಾರದಲ್ಲಿಯೇ ಸಂದೇಶ ಫಲಕವಾಗಿ ಕಂಡು ಬರುತ್ತದೆ, ಚಾರ್ಲಿ ಚಾಪ್ಲಿನ್ ಜೊತೆ ಗಾಂಧೀಜಿ ಇರುವ ಫೋಟೋ ಮಾತ್ರವಲ್ಲದೇ ಕೊಡಗಿಗೆ ಗಾಂಧೀಜಿ ೧೯೩೪ರ ಫೆಬ್ರವರಿಯಲ್ಲಿ ಭೇಟಿ ನೀಡಿದ್ದಾಗ ಮಹಾತ್ಮ ತೆರಳಿದ್ದ ಸುಂಟಿಕೊಪ್ಪ ಬಳಿಯ ಗುಂಡುಕುಟ್ಟಿ ಮಂಜುನಾಥಯ್ಯ ಅವರ ಬಂಗಲೆ, ಮಂಜುನಾಥಯ್ಯ ಅವರ ಫೋಟೋ, ಗಾಂಧೀಜಿಯವರ ಸ್ವಾತಂತ್ರö್ಯ ಸಂಗ್ರಾಮಕ್ಕೆ ಕೊಡುಗೆಯಾಗಿ ತಾನು ಧರಿಸಿದ್ದ ಚಿನ್ನಾಭರಣಗಳನ್ನೇ ನೀಡಿದ್ದ ಕಥೆಗಾರ್ತಿ ಕೊಡಗಿನ ಗೌರಮ್ಮ, ಗಾಂಧೀಜಿ ಪ್ರಭಾವದಿಂದ ಸ್ವಾತಂತ್ರö್ಯ ಚಳವಳಿಗೆ ಧುಮ್ಮಿಕ್ಕಿದ್ದ ಸೀತಮ್ಮ ಅವರ ಸ್ಮರಣೆಯ ಭಾವಚಿತ್ರಗಳೂ ಗಮನ ಸೆಳೆಯುತ್ತಿವೆ. ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಪ್ರತೀ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ೨೦೧೬-೧೭ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಘೋಷಿಸಿದ್ದರು. ಅದರಂತೆ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ೮೦ ಸೆಂಟ್ ಜಾಗವನ್ನು ಮೀಸಲಿರಿಸಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
(ಮೊದಲ ಪುಟದಿಂದ) ವೃತ್ತದ ಬಳಿ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಅಂದಾಜು ೩ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಭವನಕ್ಕೆ ೨೦೧೮ರಲ್ಲಿ ಆಅಂದಿನÀ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ೨೦೨೩ ರ ಮಾರ್ಚ್ ೧೮ ರಂದು ಗಾಂಧಿ ಭವನ ಕಟ್ಟಡವನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದ್ದರು.
ಇತರೆಲ್ಲಾ ಗಾಂಧಿ ಭವನಗಳಂತೆ ಮಡಿಕೇರಿಯ ಗಾಂಧೀ ಭವನ ಕೂಡ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳು, ಯುವಕರು, ಗಾಂಧಿವಾದಿಗಳು ಹಾಗೂ ವಿಚಾರವಾದಿಗಳು ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ತಾಣವಾಗಿದೆ. ಉಪನ್ಯಾಸ, ವಸ್ತು ಪ್ರದರ್ಶನ, ಸಾಹಿತ್ಯಿಕ ಚಟುವಟಿಕೆಗಳು, ಗ್ರಾಮ ಸೇವಾ ತರಬೇತಿ ಶಿಬಿರಗಳು, ಸ್ವಯಂ ಉದ್ಯೋಗ ತರಬೇತಿ ಶಿಬಿರಗಳು, ಸರ್ಕಾರದ ಕಾರ್ಯಕ್ರಮಗಳೂ ಸೇರಿದಂತೆ ಖಾಸಗಿಯವರೂ ಇಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಗಾಂಧಿ ಭವನ ಸೂಕ್ತವಾಗಿದೆ.
ಗಾಂಧಿ ಭವನ ಚಟುವಟಿಕೆ ಸಂಬAಧಿಸಿದAತೆ ಕೊಡಗು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು, ಪ್ರಮುಖ ಇಲಾಖೆಗಳ ಅಧಿಕಾರಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಚಿನ್ನಸ್ವಾಮಿ ಮಾಹಿತಿ ನೀಡಿದರು.
ಮಡಿಕೇರಿಗೆ ಬರುವ ಅನೇಕ ಪ್ರವಾಸಿಗರಿಗೆ ಹೊಸ ತಾಣವಾಗಿಯೂ ಈ ಗಾಂಧಿ ಭವನದ ಭೇಟಿಯ ನಿಟ್ಟಿನಲ್ಲಿ ಸೂಕ್ತ ಪ್ರಚಾರವಾಗಬೇಕಾಗಿದೆ. ಪ್ರತ್ಯೇಕ ಸಿಬ್ಬಂದಿ, ಜನರೇಟರ್ ವ್ಯವಸ್ಥೆ, ಕುಡಿಯುವ ನೀರಿನ ಸೌಕರ್ಯ ಕೂಡ ಇಲ್ಲಿಗೆ ಬೇಕಾಗಿದೆ. ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳೂ ಗಾಂಧಿ ಭವನಕ್ಕೆ ಭೇಟಿ ನೀಡಿ ಮಹಾತ್ಮನ ಧ್ಯಾನದಲ್ಲಿ ಕೆಲಹೊತ್ತಾದರೂ ಇರುವಂತಾದರೆ ಭವನ ನಿರ್ಮಾಣದ ಉದ್ದೇಶ ಸಾರ್ಥಕವಾಗುತ್ತದೆ. ಮೌನ, ಧ್ಯಾನ ಬಯಸುವ, ಗಾಂಧೀಜಿ ಅನುಯಾಯಿಗಳಿಗೂ ಮಡಿಕೇರಿಯ ಗಾಂಧಿ ಭವನ ಸಂದರ್ಶನ ಯೋಗ್ಯ ತಾಣವಾಗಿದೆ. ಸೂರ್ಯಸ್ತಮಾನವಂತೂ ಈ ಭವನದಿಂದ ಬಹಳ ಸುಂದರವಾಗಿ ಕಾಣುತ್ತದೆ. ಮಂಜು ಮುಸುಕಿದ ಆಹ್ಲಾದಕರ ವಾತಾವರಣ ಕೂಡ ಗಾಂಧಿ ಭವನದ ಆಕರ್ಷಣೆಯಲ್ಲೊಂದು. ಸುತ್ತಲಲ್ಲಿ ಪುಪ್ಪವನ ರೂಪಿಸಿ ಕಲ್ಲುಬೆಂಚುಗಳನ್ನು ಅಳವಡಿಸಿದರೆ ಮಡಿಕೇರಿಯ ಮತ್ತೊಂದು ಪ್ರಮುಖ ಸಂದರ್ಶನಾ ಯೋಗ್ಯ ತಾಣವಾಗುವ ಎಲ್ಲಾ ಸಾಧ್ಯತೆಗಳು ಈ ಗಾಂಧಿ ಭವನಕ್ಕಿದೆ.