ಕುಶಾಲನಗರ, ಅ. ೨ : ಕುಶಾಲನಗರ ಸಮೀಪ ಕೂಡಿಗೆ ವ್ಯಾಪ್ತಿಯಲ್ಲಿ ಮಕ್ಕಳ ಆಟಿಕೆ ನೋಟುಗಳು ಬ್ಯಾಂಕುಗಳ ಮೂಲಕ ಹರಿದಾಡಿ ಹಣಕಾಸು ವಹಿವಾಟಿನಲ್ಲಿ ಗೊಂದಲ ಮೂಡಿಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ಬಳಿ ಇರುವ ರಾಷ್ಟಿçÃಕೃತ ಬ್ಯಾಂಕ್ ಒಂದಕ್ಕೆ ಸೋಮವಾರ ೫೦ ಲಕ್ಷಕ್ಕೂ ಅಧಿಕ ಮೊತ್ತದ ಹಣ ಡೆಪಾಸಿಟ್ ಆಗಿದೆ.

ನಂಬಿಕೆ ಹಿನ್ನೆಲೆಯಲ್ಲಿ ಬಂಡಲ್‌ಗಳನ್ನು ಸೂಕ್ಷö್ಮವಾಗಿ ಪರಿಶೀಲನೆ ನಡೆಸದೆ ಅಲ್ಲಿನ ವ್ಯವಸ್ಥಾಪಕರು, ಸಿಬ್ಬಂದಿಗಳು ನೇರವಾಗಿ ಮಡಿಕೇರಿಯ ಕೇಂದ್ರ ಬ್ಯಾಂಕ್‌ಗೆ ರವಾನಿಸಿದ್ದಾರೆ. ಬ್ಯಾಂಕ್‌ಗಳ ಶಾಖೆಯಲ್ಲಿ ಹಣವನ್ನು ಇಡುವ ಮಿತಿ ಇರುವ ಹಿನ್ನೆಲೆಯಲ್ಲಿ ಅಧಿಕ ಮೊತ್ತವನ್ನು ಪ್ರತಿದಿನ ಸಂಜೆ ಭದ್ರತಾ ವ್ಯವಸ್ಥೆಯೊಂದಿಗೆ ಕೇಂದ್ರ ಸ್ಥಾನದ ಬ್ಯಾಂಕ್‌ಗಳಿಗೆ ರವಾನಿಸಬೇಕಾಗುತ್ತದೆ.

ಮಡಿಕೇರಿ ಕೇಂದ್ರ ಬ್ಯಾಂಕಿನಲ್ಲಿ ಪರಿಶೀಲಿಸಿದ ಸಂದರ್ಭ ೫೦೦ ನೋಟಿನ ಬಂqಲ್‌ಗಳÀಲ್ಲಿ ಸುಮಾರು ೮೦ಕ್ಕೂ ಅಧಿಕ ಮಕ್ಕಳ ಆಟಿಕೆ ನೋಟುಗಳನ್ನು ತುರುಕಿರುವುದು ಪತ್ತೆಯಾಗಿದೆ. ಒಂದೊAದು ಬಂಡಲ್‌ಗಳÀಲ್ಲಿ ೫೦೦ರ ಎರಡು ಮೂರು ಆಟಿಕೆ ನೋಟುಗಳನ್ನು ಸೇರಿಸಿರುವುದು ಖಚಿತಗೊಂಡಿದೆ.

ತಕ್ಷಣ ಮಡಿಕೇರಿಯಿಂದ ಬ್ಯಾಂಕ್ ಅಧಿಕಾರಿಗಳು ಕೂಡಿಗೆ ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದರು. ಆ ದಿನ ೫೦೦ರ ಅಧಿಕ ಬ್ಯಾಂಕ್‌ಗೆ ಬಂಡಲ್‌ಗಳನ್ನು ಕಳುಹಿಸಿಕೊಟ್ಟ ಅಲ್ಲಿನ ಉದ್ಯಮ ಘಟಕಕ್ಕೆ ತೆರಳಿ ಈ ಬಗ್ಗೆ ಚರ್ಚಿಸಿದಾಗ ಅಲ್ಲಿಂದ ಯಾವುದೇ ಸಕಾರಾತ್ಮಕ ಉತ್ತರ ದೊರೆತಿಲ್ಲ. ಈ ಸಂದರ್ಭ ಬ್ಯಾಂಕಿಗೆ ಹಣದ ಬಂಡಲ್‌ಗಳನ್ನು ಕಳುಹಿಸಿಕೊಟ್ಟ ಸಂಸ್ಥೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲು ಬ್ಯಾಂಕ್ ಅಧಿಕಾರಿಗಳು ಮುಂದಾಗಿದ್ದಾರೆ.

ಆದರೆ ಆ ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸದೆ ಇದ್ದ ಹಿನ್ನೆಲೆಯಲ್ಲಿ ಪ್ರಕರಣದ ನಿಗೂಢತೆ ಇನ್ನೂ ಗೊಂದಲಕ್ಕೆ ಎಡೆ ಮಾಡಿದೆ.

ಪ್ರಕರಣದ ಬಗ್ಗೆ ಕೂಡಿಗೆ, ಕುಶಾಲನಗರ ಸುತ್ತಮುತ್ತ ಗುಸು ಗುಸು ಸುದ್ದಿ ಆಗುತ್ತಿದ್ದು, ಇದರ ಬೆನ್ನಲ್ಲಿಯೇ ಮಡಿಕೇರಿಯ ಬ್ಯಾಂಕಿನ ಹಿರಿಯ ಅಧಿಕಾರಿಗಳು ಕೂಡ ಬಂದು ಮಕ್ಕಳ ಆಟಿಕೆ ನೋಟು ಬಂಡಲ್‌ಗೆ ಸೇರ್ಪಡೆಗೊಂಡಿರುವ ಬಗ್ಗೆ ಪತ್ತೆ ಹಚ್ಚಲು ಆಂತರಿಕವಾಗಿ ಉನ್ನತ ಮಟ್ಟದ ತನಿಖೆ ಕೈಗೊಂಡಿರುವ ಬಗ್ಗೆ ಸುಳಿವು ದೊರೆತಿದೆ.

ಈ ನಡುವೆ ಆಟಿಕೆ ನೋಟುಗಳ ಬದಲಾಗಿ ಬ್ಯಾಂಕ್ ಅಧಿಕಾರಿ ತನ್ನ ವೈಯಕ್ತಿಕ ಖಾತೆಯಿಂದ ಸಾವಿರಾರು ರೂಪಾಯಿಗಳನ್ನು ತಮ್ಮ ಬ್ಯಾಂಕಿಗೆ ತುಂಬುವ ಮೂಲಕ ಮಕ್ಕಳ ಆಟಿಕೆ ನೋಟು ಪ್ರಕರಣಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ ಎಂದು ತಿಳಿದು ಬಂದಿದೆ.

ಬ್ಯಾAಕಿಗೆ ಬಂದ ೫೦೦ ರ ಬಂಡಲ್‌ನಲ್ಲಿ ಆಟಿಕೆ ನೋಟುಗಳನ್ನು ತುರುಕಿಸಿದ ಮೂಲದ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಲ್ಲಿ ಈ ದಂಧೆಯಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.

ವರದಿ-ಸಿಂಚು