ಪಾಲಿಬೆಟ್ಟ, ಅ. ೨: ಪಾಲಿಬೆಟ್ಟ ಜುಮ್ಮಾ ಮಸೀದಿಯಲ್ಲಿ ಈದ್ಮಿಲಾದ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ, ವಿವಿಧ ಧರ್ಮಗಳು, ವಿವಿಧ ಆಚಾರಗಳು, ವಿವಿಧ ಉಡುಪುಗಳು, ವಿವಿಧತೆಯಲ್ಲಿ ಏಕತೆಯನ್ನು ಕಂಡರೆ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯ. ಎಲ್ಲಾ ಧರ್ಮದವರು ಪ್ರೀತಿಯಿಂದ, ಸಂತೋಷದಿAದ ಇರಬೇಕು. ಇದ್ದಲ್ಲಿ ನಾವು ಭವ್ಯ ಭಾರತವನ್ನು ಕಟ್ಟಬಹುದು ಎಂದರು.
ಜುಮ್ಮಾ ಮಸೀದಿಯಿಂದ ಆರ್ಕಾಡ್ ಪಾಠಾಣ್ ಬಾಬಾ ಶಾವಲಿ ದರ್ಗಾದವರೆಗೆ ಹಾಗೂ ಪಾಲಿಬೆಟ್ಟದ ಮುಖ್ಯ ಬೀದಿಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಯಿತು. ಈ ಸಂದರ್ಭ ಹಿಂದೂ ಬಾಂಧವರು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುಸಲ್ಮಾನ ಬಾಂಧವರಿಗೆ ತಂಪು ಪಾನೀಯ ಹಾಗೂ ಸಿಹಿಯನ್ನು ಹಂಚಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಕೆ. ಇಸ್ಮಾಯಿಲ್ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನ, ಕಾರ್ಯದರ್ಶಿ ಎ.ಕೆ. ಸಮೀರ್, ಖಜಾಂಚಿ ಟಿ.ಕೆ. ಮುಸ್ತಫ, ಗ್ರಾ.ಪಂ. ಸದಸ್ಯರಾದ ಅಬ್ದುಲ್ ನಾಸಿರ್ ಮತ್ತಿತರರು ಇದ್ದರು.