ವೀರಾಜಪೇಟೆ, ಅ. ೨: ಭಾರತ ದೇಶವು ಭಿನ್ನ ಭಿನ್ನ ಸಂಸ್ಕೃತಿ, ಭಾಷೆ ಕಲೆ ಸಾಹಿತ್ಯ ಬರಿತವಾದ ದೇಶವಾಗಿದ್ದು ಧೀಮಂತ ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಸರ್ವರು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ವತಿಯಿಂದ ೧೬ ನೇ ವರ್ಷದ ಓಣಂ ಆಚರಣೆಯು ನಗರದ ಮೀನುಪೇಟೆಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸುಜಾ ಕುಶಾಲಪ್ಪ ಅವರು, ಸಮುದಾ ಯದ ಬಾಂಧವರ ಒಗ್ಗೂಡುವಿಕೆ ಯಿಂದ ಮಾತ್ರ ಸಂಘಟನೆಯು ಶಕ್ತವಾ ಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ಹಬ್ಬ ಹರಿದಿನಗಳ ಆಚರಣೆ ಯಾಗುತ್ತಿದೆ. ಆಚರಣೆಯು ವ್ಯಕ್ತಿಗೆ ಮಾತ್ರ ಸೀಮಿತವಾಗದೆ ಸಮುದಾಯದ ಭಾಗವಾಗಬೇಕು. ಸರ್ಕಾರವು ಸಮು ದಾಯಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸವಲತ್ತುಗಳನ್ನು ಪಡೆಯಲು ಸಂಘಟ ನೆಯು ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆಯ ಬೇಡಿಕೆಯಂತೆ ರೂ. ೧೦ ಲಕ್ಷಗಳನ್ನು ಅಭಿವೃದ್ಧಿಗಾಗಿ ಬಿಡುಗಡೆ ಗೋಳಿಸುವ ಭರವಸೆಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಅವರು ದೇಶವು ಪ್ರಾಂತವಾರು, ಭಾಷವಾರು ವಿಂಗಡಣೆ ಗೊಂಡರು ಪೂರ್ವ ಇತಿಹಾಸದ ಚರಿತ್ರೆ ಮರೆಯಲು ಅಸಾಧ್ಯ ಎಂದರು.
ಹಿAದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ವಿ.ಎಂ. ವಿಜಯನ್ ಅವರು ಮಾತನಾಡಿ ಕೇರಳ ರಾಜ್ಯದಲ್ಲಿ ಓಣಂ ಆಚರಣೆಯು ಕೆಲವು ದಿನಗಳಿಗೆ ಮಾತ್ರ ಸಿಮಿತವಾದರು ಕರ್ನಾಟಕ ರಾಜ್ಯದಲ್ಲಿ ಆಚರಣೆಯು ತಿಂಗಳವರೆಗೆ ಆಚರಣೆಯಾಗುತ್ತಿದೆ. ಸಮುದಾಯ ದಿಂದ ಆಚರಣೆಯಾಗುವ ಸಂಸ್ಕಾರಗಳು, ಕಲಚಾರಗಳ ಸಂರಕ್ಷಣೆ ಮಾಡುವ ಧ್ಯೇಯ ನಮ್ಮದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಗೋಣಿಕೊಪ್ಪ ನಾಯರ್ ಸೊಸೈಟಿ ಅಧ್ಯಕ್ಷ ಕೆ. ವೇಣುಗೋಪಾಲ್ ಮತ್ತು ಡಿ.ಡಿ.ಪಿ.ಐ. ಜಿಲ್ಲಾ ಕಛೇರಿಯ ವಿಷಯ ಪರಿವೀವಿಕ್ಷಕ ಕೆ. ಬಿಂದು ಅವರು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಹುಭಾಷಾ ಕವಯತ್ರಿಯಾದ ಉಳುವಂಡ ಕಾವೇರಿ ಉದಯ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ವಿಶೇಷ ಸಾಧನೆಗೈದ ವಿಧ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ-ಕಿರಿಯ ಸಮುದಾಯ ಬಾಂಧವರನ್ನು ಗುರುತಿಸಿ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ತಿರುವಾದಿರ ನೃತ್ಯ ಮತ್ತು ಕಣ್ಣೂರು ಜಿಲ್ಲೆಯ ಕಲಾ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು. ಸಮಿತಿಯ ಕಾರ್ಯದರ್ಶಿಗಳಾದ ಸಿ.ಆರ್. ಬಾಬು ಅವರು ಸಮಿತಿಯಿಂದ ನಡೆಸಲಾದ ಜನಪರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಸುಮೇಶ್. ಪಿ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುತ್ತಪ್ಪನ್ ದೇಗುಲದ ಅಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ. ರಾಜನ್, ಪ್ರಮುಖರಾದ ಶಾರದ ರಾಮನ್ ಉಪಸ್ಥಿತರಿದ್ದರು.
ಓಣಂ ಹಬ್ಬದ ಪ್ರಯುಕ್ತ ಬೆಳಿಗ್ಗೆ ದೇಗುಲದ ಆವರಣದಿಂದ ಬಲಿ ಚಕ್ರವರ್ತಿ (ಮಾವೇಲಿ) ಯನ್ನು ಬರಮಾಡಿಕೊಳ್ಳಲಾಯಿತು. ದೇಗುಲದಲ್ಲಿ ದೀಪ ಬೆಳಗಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇಗುಲದಿಂದ ಹೊರಟ ಮೇರವಣಿಗೆಯು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ದೇಗುಲಕ್ಕೆ ಆಗಮಿಸಿತು. ಕೇರಳದ ಕಣ್ಣೂರು ಜಿಲ್ಲೆಯ ಸಿಂಗಾರಿ ಮೇಳಂ ಮತ್ತು ಮಕ್ಕಳ ಛದ್ಮವೇಷ ನೋಡುಗರ ಮನಸೆಳೆಯಿತು. ಸಾರ್ವಜನಿಕರಿಗಾಗಿ ಓಣಂ ಸದ್ಯಾ (ವಿಶೇಷ ಭೋಜನ) ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ಥಳಗಳಿಂದ ಆಗಮಿಸಿದ್ದ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.