ಕುಶಾಲನಗರ, ಅ. ೨: ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಾಯಿ ಬಾಬಾ ದೇವಾಲಯದಲ್ಲಿ ತಾ.೩ ರಿಂದ ೧೨ ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ತಾ. ೩ ರಂದು ದೇವಾಲಯದಲ್ಲಿ ಅಲಂಕಾರ ಪೂಜಾ ಕಾರ್ಯಕ್ರಮ, ತಾ. ೪ ರಂದು ಗಾಯತ್ರಿ ದೇವಿ ಪೂಜಾ ಕಾರ್ಯಕ್ರಮ, ತಾ. ೫ ರಂದು ಅನ್ನಪೂರ್ಣ ದೇವಿ, ತಾ. ೬ ರಂದು ಲಲಿತ ತ್ರಿಪುರ ಸುಂದರಿ ದೇವಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ತಾ. ೭ ರಂದು ಮಹಾ ಚಂಡಿಕಾ ದೇವಿ ಪೂಜಾ ಕಾರ್ಯಕ್ರಮ ತಾ. ೮ ರಂದು ಮಹಾಲಕ್ಷಿö್ಮ ದೇವಿ ವಿಶೇಷ ಪೂಜಾ ಕಾರ್ಯಕ್ರಮಗಳು, ತಾ. ೯ ರಂದು ಸರಸ್ವತಿ ದೇವಿ ಆರಾಧನೆ ತಾ. ೧೦ ರಂದು ದುರ್ಗಾದೇವಿ ಅಲಂಕಾರ ಪೂಜೆ ಮತ್ತು ನಾಗದೇವರ ಹಾಗೂ ಸುಬ್ರಹ್ಮಣ್ಯೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾ. ೧೧ ರಂದು ಮಹಿಷಾಸುರ ಮರ್ದಿನಿ ಪೂಜಾ ಕಾರ್ಯಕ್ರಮ ಮರುದಿನ ರಾಜರಾಜೇಶ್ವರಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದೇವಾಲಯದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ದಾನಿಗಳು ಸಹಕರಿಸುವಂತೆ ಕೋರಿದ ಅವರು ದಾನಿಗಳು ೯೪೮೧೮೧೮೧೮೩, ಅಥವಾ ೯೪೪೯೭೪೮೦೭೭ ಸಂಪರ್ಕಿಸುವAತೆ ಮನವಿ ಮಾಡಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ. ಕೃಷ್ಣ ಮಾತನಾಡಿ, ತಾ. ೧೦ ರಿಂದ ೧೨ ರವರೆಗೆ ಮೂರು ದಿನಗಳ ಕಾಲ ಭಕ್ತಿಗೀತೆ, ಭರತನಾಟ್ಯ ಸ್ಪರ್ಧೆ ಜಾನಪದ ನೃತ್ಯ ಸ್ಪರ್ಧೆಗಳು ನಡೆಯಲಿವೆ.
ಭಾಗವಹಿಸುವ ಆಸಕ್ತರು ತಾ. ೮ ರ ಒಳಗಾಗಿ ನೊಂದಾಯಿಸಿಕೊಳ್ಳಬೇಕು. ಹೆಸರು ನೊಂದಾಯಿಸಲು ೯೧೬೪೮೮೧೧೮೬, ೮೮೬೧೫೫೦೪೪೪ ಅಥವಾ ೬೩೬೪೬೩೯೭೭೬ ಸಂಪರ್ಕಿಸಬಹುದೆAದು. ಸುದ್ದಿಗೋಷ್ಠಿಯಲ್ಲಿ ಆಲ್ಬರ್ಟ್ ಇದ್ದರು.