ವೀರಾಜಪೇಟೆ, ಅ. ೨: ಕೊಡವ ಕುಟುಂಬಗಳ ನಡುವೆ ಬಾಳೆಕುಟ್ಟಿರ ಕಪ್ ೨೦೨೫ ಟಗ್ಆಫ್ವಾರ್ (ಹಗ್ಗಜಗ್ಗಾಟ) ಕ್ರೀಡಾಕೂಟವನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ಅರಮೇರಿ ಕಳಂಚೇರಿ ವಿದ್ಯಾಪೀಠದ ಮೈದಾನದಲ್ಲಿ ನಡೆಸಲಾಗುವುದು ಎಂದು ಕ್ರೀಡಾಕೂಟದ ಅಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ಹೇಳಿದರು.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ಹಾಗೂ ಅರಮೇರಿ ಗ್ರಾಮದಲ್ಲಿ ಸುಮಾರು ಒಂಬತ್ತನೇ ತಲೆಮಾರಿನ ಸದಸ್ಯರುಗಳು ಒಗ್ಗೂಡಿ ಕೊಡವ ಟಗ್ಆಫ್ವಾರ್ ಅಕಾಡೆಮಿ ಸಹಯೋಗದಲ್ಲಿ ನಾಲ್ಕನೇ ವರ್ಷದ ಟಗ್ಆಫ್ವಾರ್ ಕ್ರೀಡಾಕೂಟವನ್ನು ನಡೆಸುತ್ತಿದ್ದೇವೆ. ಕುಟುಂಬದ ಸದಸ್ಯರುಗಳು ಎರಡು ಗ್ರಾಮಗಳಲ್ಲಿ ವಾಸವಿರುವ ಕಾರಣ ಮಾನಸಿಕವಾಗಿ ಚದುರಿ ಹೋಗಿದ್ದು ಅವರೆಲ್ಲರನ್ನು ಒಗ್ಗೂಡಿಸಿ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯ ಹಾಗೂ ಸಹಬಾಳ್ವೆ ನಡೆಸುವ ದೃಷ್ಟಿಯನ್ನು ಮುಂದಿಟ್ಟುಕೊAಡು ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟವÀನ್ನು ನಡೆಸಲಾಗುವುದು ಎಂದು ಹೇಳಿದರು.
ಕ್ರೀಡಾ ಸಂಚಾಲಕ ಬಾಳೆಕುಟ್ಟಿರ ದಿನಿ ಬೋಪಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಲವಾರು ಕ್ರೀಡಾಕೂಟಗಳು ನಡೆಯುತ್ತಿದೆ. ಕುಟುಂಬ ಸದಸ್ಯರುಗಳು ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಹುರುಪು ವಿಶೇಷದಾಗಿರುತ್ತದೆ. ಅದೇ ರೀತಿ ಕಕ್ಕಬ್ಬೆಯಲ್ಲಿ ಪೊನ್ನೋಲತಂಡ ಕುಟುಂಬದವರು ಆಯೋಜಿಸಿದ್ದ ಟಗ್ಆಫ್ವಾರ್ ಕ್ರೀಡಾಕೂಟದಲ್ಲಿ ನಮ್ಮ ಕುಟುಂಬ ಪಾಲ್ಗೊಂಡು ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶಿಸಲಾಯಿತು. ಕ್ರೀಡಾಕೂಟದಲ್ಲಿ ಕೊಡವ ಕುಟುಂಬಗಳೇ ಪಾಲ್ಗೊಳ್ಳುವುದರಿಂದ ನಾವು ಕೂಡ ಒಂದು ಕ್ರೀಡಾಕೂಟವನ್ನು ಏಕೆ ನಡೆಸಬಾರದು ಎಂಬ ಅಭಿಲಾಷೆ ವ್ಯಕ್ತವಾಗಿ ನಾಲ್ಕನೇ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತಿದೆ. ಪೊನ್ನೊಲತಂಡ (ನಾಪೋಕ್ಲು), ಚಟ್ಟಂಗಡ (ಟಿ. ಶೆಟ್ಟಿಗೇರಿ), ಬೊಟ್ಟೋಳಂಡ (ನಾಪೋಕ್ಲು) ಇದೀಗ ಬಾಳೆಕುಟ್ಟಿರ ಅರಮೇರಿಯಲ್ಲಿ ನಡೆಸಲಾಗವುದು ಎಂದು ಹೇಳಿದರು.
ಖಜಾಂಚಿ ರಾಯ್ ಕಾರ್ಯಪ್ಪ ಮಾತನಾಡಿ, ಟಗ್ಆಫ್ವಾರ್ನ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ಅಕ್ಟೋಬರ್ ೫ ರಂದು ಶನಿವಾರ ಮಲಬಾರ್ ರಸ್ತೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಗುವುದು. ಲೋಗೋ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾಕೂಟದ ಅಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ವಹಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಲೋಗೋ ಬಿಡುಗಡೆ ಗೊಳಿಸಲಿದ್ದಾರೆ. ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡವ ಟಗ್ಆಫ್ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಉಪಸ್ಥಿತರಿರುವರು ಎಂದು ಹೇಳಿದರು.
ಗೋಷ್ಠಿಯಲ್ಲಿ ಕ್ರೀಡಾಕೂಟದ ಸದಸ್ಯರಾದ ಗಣು ಕಾವೇರಪ್ಪ, ಸತ್ಯ ಉತ್ತಯ್ಯ ಉಪಸ್ಥಿತರಿದ್ದರು.