ಮಡಿಕೇರಿ, ಅ. ೨: ಗೋಣಿಕೊಪ್ಪ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾ. ೩ ರಂದು (ಇಂದು) ಚಾಲನೆ ದೊರೆಯಲಿದ್ದು, ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ತಂಡದಿAದ ಗಾನ ವೈಭವ ನಡೆಯಲಿದೆ.

ಸಂಜೆ ಸಭಾ ಕಾರ್ಯಕ್ರಮದ ಬಳಿಕ ರಾಜೇಶ್ ಕೃಷ್ಣನ್ ನೇತೃತ್ವದ ಸಂತೋಷ್ ದೇವ್, ರವಿರಾಜ್ ಮತ್ತು ದಿವ್ಯ ರಾಮಚಂದ್ರ, ಪುಷ್ಪ ಆರಾಧ್ಯ, ಇವರನ್ನೊಳಗೊಂಡ ತಂಡದಿAದ ಸಂಗೀತ ರಸಮಂಜರಿ ನಡೆಯಲಿದೆ. ಕನ್ನಡ ಚಲನಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಮತ್ತು "ಗೌರಿ" ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಸಮರ್ಜಿತ್ ಲಂಕೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.