ಮಡಿಕೇರಿ, ಅ. ೨: ಮಡಿಕೇರಿ ನಗರ ದಸರಾ ಸಮಿತಿ ಆಶ್ರಯದಲ್ಲಿ ‘ಟೀಂ ತ್ರೀಡಿ’ ವತಿಯಿಂದ ಯುವ ದಸರಾ ಪ್ರಯುಕ್ತ ತಾ.೧೦ರಂದು ಮಡಿಕೇರಿ ಗಾಂಧಿ ಮೈದಾನದ ವೇದಿಕೆಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.

ಪಾಲ್ಗೊಳ್ಳುವ ತಂಡಗಳು ಸ್ಪರ್ಧೆಯ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಸ್ತಿçÃಯ ನೃತ್ಯ ಪ್ರಾಕಾರವನ್ನು ಹೊರತುಪಡಿಸಿ ಇತರ ಯಾವುದೇ ಪ್ರಾಕಾರವನ್ನು ಆಯ್ದುಕೊಳ್ಳಬಹುದು. ಸ್ಪರ್ಧೆಗೆ ವಯೋಮಿತಿಯ ನಿರ್ಬಂಧವಿಲ್ಲ. ತಂಡದಲ್ಲಿ ಕನಿಷ್ಟ ೧೦ ಮಂದಿ ಗರಿಷ್ಠ ೩೦ ಮಂದಿ ಕಲಾವಿದರು ಇರತಕ್ಕದ್ದು. ನೃತ್ಯಗಳ ಪರಿಕಲ್ಪನೆ ಮತ್ತು ಉಡುಗೆ ತೊಡುಗೆಗಳು ಸಭ್ಯವಾಗಿರಬೇಕು ಹಾಗೂ ನೃತ್ಯಗಳು ಯಾರೊಬ್ಬರ ಭಾವನೆಗಳಿಗೂ ನೋವುಂಟು ಮಾಡುವಂತಿರಬಾರದು. ಕಾಲಾವಧಿ ೮ + ೨ ನಿಮಿಷಗಳು. ಬೆಂಕಿ, ಬಣ್ಣ, ನೀರು ಸೇರಿದಂತೆ ವೇದಿಕೆಗೆ ಹಾನಿ ಉಂಟು ಮಾಡುವ ಯಾವುದೇ ಪರಿಕರಗಳನ್ನು ಬಳಸುವಂತಿಲ್ಲ. ತೀರ್ಪುಗಾರರ ತೀರ್ಮಾನಕ್ಕೆ ತಂಡಗಳು ಬದ್ಧವಾಗಿರಬೇಕು.

ಹೆಸರು ನೋಂದಣಿಗೆ ತಾ.೪ ಕೊನೆಯ ದಿನವಾಗಿದೆ. ನೃತ್ಯ ಸ್ಪರ್ಧೆ ಜೊತೆಗೆ ಯುನಿಕ್ ಕಾನ್ಸೆಪ್ಟ್ ಬಿಸಿನೆಸ್ ಅವಾರ್ಡ್ ಸ್ಪರ್ಧೆಯು ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ೯೫೩೫೧೦೮೫೬೩ ದೂರವಾಣಿಯನ್ನು ಸಂಪರ್ಕಿಸುವAತೆ ಟೀಂ ತ್ರೀಡಿ ಪ್ರಕಟಣೆ ತಿಳಿಸಿದೆ.