ಇಸ್ರೇಲ್, ಅ. ೨: ಇಸ್ರೇಲ್ ವಿರುದ್ಧ ಕ್ಷಿಪಣಿ ದಾಳಿ ನಡೆಸಿದ ಇರಾನ್ಗೆ ತೀವ್ರವಾಗಿ ಪ್ರತಿಕ್ರಿಯೆ ನೀಡುವ ಎಚ್ಚರಿಕೆಯನ್ನು ಇಸ್ರೇಲ್ ಅಧ್ಯಕ್ಷ ಬೆಂಜಾಮಿನ್ ನೆತನ್ಯಾಹು ನೀಡಿದ್ದು, ಮಧ್ಯಮ ಪೂರ್ವ (ಮಿಡಲ್ ಈಸ್ಟ್) ಪ್ರದೇಶದಲ್ಲಿ ಪ್ರಾದೇಶಿಕ ಯುದ್ಧ ಸಂಭವ ಹೆಚ್ಚಾಗಿದೆ.
ತಾ.೧ ರಂದು ಸುಮಾರು ೨,೦೦೦ ಕಿ.ಮೀ ಪಶ್ಚಿಮಕ್ಕಿರುವ ಇಸ್ರೇಲ್ ದೇಶದ ಮೇಲೆ ಇರಾನ್ (ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್) ಕ್ಷಿಪಣಿ ದಾಳಿ ನಡೆಸಿದೆ. ಅತ್ಯಾಧುನಿಕ ಕ್ಷಿಪಣಿ ತಡೆ ಭದ್ರತಾ ತಂತ್ರಜ್ಞಾನ ಹೊಂದಿರುವ ಇಸ್ರೇಲ್ನ ಇಸ್ರೇಲಿ ಡಿಫೆನ್ಸ್ ಫರ್ಸ್ (ಐ.ಡಿ.ಎಫ್), ಇರಾನ್ ಹಾರಿಸಿದ ಸುಮಾರು ೨೦೦ಕ್ಕೂ ಅಧಿಕ ಕ್ಷಿಪಣಿಗಳಲ್ಲಿ ಕೇವಲ ೬ ಕ್ಷಿಪಣಿಗಳನ್ನು ತಡೆಯಲಷ್ಟೆ ವಿಫಲವಾಗಿದ್ದರಿಂದ ಇಸ್ರೇಲ್ ನಾಗರಿಕರ ಸಾಮೂಹಿಕ ಹತ್ಯೆ ನಡೆಯುವುದು ತಪ್ಪಿದಂತಾಗಿದೆ. ದಾಳಿಯಲ್ಲಿ ಸುಮಾರು ೮ ಮಂದಿ ಮೃತರಾಗಿರುವುದಾಗಿ ಇಸ್ರೇಲ್ನ ಐ.ಡಿ.ಎಫ್ ಮಾಹಿತಿ ನೀಡಿದೆ. ದಾಳಿಗೆ ತೀವ್ರ ಸ್ವರೂಪದ ಪ್ರತಿಕ್ರಿಯೆ ನೀಡುವುದಾಗಿ ಇಸ್ರೇಲ್ನ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದು, ದೊಡ್ಡ ಮಟ್ಟದ ಪ್ರಾದೇಶಿಕ ಯುದ್ಧವು ನಡೆಯುವ ಸಾಧ್ಯತೆಗಳಿವೆ.
ಇಸ್ರೇಲಿನ ನೆರೆಯ ರಾಷ್ಟçದ ಲೆಬನಾನ್ನಲ್ಲಿ ಆಶ್ರಯ ಪಡೆದಿರುವ ಹಿಜ್ಬುಲ್ಹಾ ಉಗ್ರಗಾಮಿ ಸಂಘಟನೆಯನ್ನು ಗುರಿಯಾಗಿಸಿ ಕಳೆದ ತಿಂಗಳು ಹಿಜ್ಬುಲ್ಹಾ ಸದಸ್ಯರು ಬಳಸುತ್ತಿದ್ದ ೩,೦೦೦ಕ್ಕೂ ಅಧಿಕ ಪೇಜರ್ಗಳ ಸ್ಫೋಟ ನಡೆದ ಬೆನ್ನಲ್ಲೇ ಇದಕ್ಕೆ ಇಸ್ರೇಲ್ ಕಾರಣ ಎಂದು ಇಸ್ರೇಲ್ನ ಮೇಲೆ ಹಿಜ್ಬುಲ್ಹಾ ಕ್ಷಿಪ್ರ ದಾಳಿ ನಡೆಸಿತು. ಈ ದಾಳಿಯಲ್ಲಿ ಒಂದೇ ಒಂದು ಕ್ಷಿಪಣಿಯೂ, ಇಸ್ರೇಲ್ನ ರಕ್ಷಾಕವಚವಾಗಿರುವ ಕ್ಷಿಪಣಿ ತಡೆ ತಂತ್ರಜ್ಞಾನಕ್ಕೆ ಉಳಿಯದ ಕಾರಣ ದಾಳಿಯು ಸಂಪೂರ್ಣ ವಿಫಲವಾಯಿತು. ಆದಾಗ್ಯೂ ಇಸ್ರೇಲ್ ಈ ದಾಳಿಗೆ ಪ್ರತಿಕ್ರಿಯೆ ನಡೆಸಿ ಲೆಬನನ್ನಿನ ಮೇಲೆ ಕ್ಷಿಪಣಿ ದಾಳಿ ನಡೆಸಿ ಸುಮಾರು ೫೦೦ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿತು. ನಂತರ ವಾಯು ದಾಳಿಯೊಂದರಲ್ಲಿ ಲೆಬನನ್ನಿನಲ್ಲಿ ಆಶ್ರಯ ಪಡೆದಿದ್ದ ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾನನ್ನು ಹತ್ಯೆ ಮಾಡಿತಲ್ಲದೆ ಇಸ್ರೇಲ್ ಸೇನಾಪಡೆಯು ಲೆಬನಾನ್ ಅನ್ನು ವಶಕ್ಕೆ ಪಡೆಯುವ ಯತ್ನವನ್ನೂ ನಡೆಸುತ್ತಿದೆ.
ಈ ನಡುವೆ ಹಿಜ್ಬುಲ್ಹಾ ಉಗ್ರಗಾಮಿ ಪಡೆಗೆ ಬೆಂಬಲವಾಗಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇಸ್ರೇಲ್ ವಿರುದ್ಧ ಕ್ಷಿಪಣಿ ದಾಳಿಗೆ ಮುಂದಾಗಿದೆ. ಇದಕ್ಕೆ ಅತ್ಯಾಧುನಿಕ ಕ್ಷಿಪಣಿಗಳನ್ನು ಇಸ್ರೇಲ್ ಕೂಡ ಹೊಂದಿರುವುದರಿAದ ಹಾಗೂ ದೇಶದ ಅಧ್ಯಕ್ಷ ನೆತನ್ಯಾಹು ತೀವ್ರ ಪ್ರತಿರೋಧದ ಎಚ್ಚರಿಕೆ ನೀಡಿರುವುದರಿಂದ ಪ್ರಾದೇಶಿಕ ಯುದ್ಧ ನಡೆಯುವ ಸಾಧ್ಯತೆಯಿದೆ.