ಮಡಿಕೇರಿ, ಅ. ೨: ಪ್ರಸಕ್ತ ಸಾಲಿನಲ್ಲಿ ರಾಜ್ಯವ್ಯಾಪಿಯಾಗಿ ಸರಕಾರಿ ಶಾಲೆಗಳಿಗೆ ತಾ. ೩ರಿಂದ (ಇಂದಿನಿAದ) ತಾ. ೨೦ರ ತನಕ ದಸರಾ ರಜೆ ಘೋಷಣೆ ಮಾಡಲಾಗಿದೆ. ಇದರಂತೆ ಜಿಲ್ಲೆಯಲ್ಲಿಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ತಾ. ೨೦ರ ತನಕ ದಸರಾ ರಜೆ ಇರುವುದಾಗಿ ಡಿ.ಡಿ.ಪಿ.ಐ. ರಂಗಧಾಮಪ್ಪ ಅವರು ತಿಳಿಸಿದ್ದಾರೆ. ಕೆಲವು ಖಾಸಗಿ ಶಾಲೆಗಳು ಇತರೆ ಹಬ್ಬದ ವೇಳೆ ರಜೆ ನೀಡುವ ಹಿನ್ನೆಲೆ ದಸರಾ ರಜೆಯಲ್ಲಿ ಕೆಲವು ಬದಲಾವಣೆಗೆ ಮನವಿ ಮಾಡಿದ್ದು, ಆಯಾ ಶಾಲೆಗಳ ವಿವೇಚನೆಗೆ ಬಿಡಲಾಗಿದೆ. ಉಳಿದಂತೆ ಇತರ ಶಾಲೆಗಳಿಗೆ ತಾ. ೨೦ರ ತನಕ ದಸರಾ ರಜೆ ಇರುವುದಾಗಿ ಅವರು ಮಾಹಿತಿ ನೀಡಿದ್ದಾರೆ.