ಗೋಣಿಕೊಪ್ಪಲು, ಅ. ೨: ವಿದೇಶಿ ತಳಿಯ ವಿವಿಧ ರೀತಿಯ ಪ್ರಾಣಿ ಪಕ್ಷಿಗಳ ವೀಕ್ಷಣೆಗೆ ಪೊನ್ನಂಪೇಟೆ ಸಮೀಪದ ಸಾಯಿ ಪೆಟ್ ಸ್ಟೇಷನ್‌ನಲ್ಲಿ ಅವಕಾಶ ಕಲ್ಪಿಸಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದ್ದಂತೆಯೇ ಇದೀU ಕೊಡಗಿನ ಪೊನ್ನಂಪೇಟೆ ತಾಲೂಕಿನಲ್ಲಿ ವಿನೂತನ ಪ್ರಯತ್ನವು ನಡೆದಿದೆ. ಪೊನ್ನಂಪೇಟೆ ಬಳಿಯ ಸಾಯಿ ಶಂಕರ ವಿದ್ಯಾಸಂಸ್ಥೆಯ ಸುಂದರ ಪರಿಸರದ ನಡುವೆ ನೂತನ ಪ್ರಾಣಿ ಪಕ್ಷಿಗಳ ಧಾಮ ಸಾಯಿ ಪೆಟ್ ಸ್ಟೇಷನ್ ಆರಂಭಗೊAಡಿದ್ದು ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಇದಾಗಿದೆ. ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ನೂತನ ಧಾಮವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿ, ಉನ್ನತ ಮಟ್ಟದಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿರುವ ಸಾಯಿ ಶಂಕರ ವಿದ್ಯಾಸಂಸ್ಥೆಯು ಇದೀಗ ಸುಂದರ ಪರಿಸರದ ನಡುವೆ ವಿದೇಶಿ ತಳಿಯ ಪ್ರಾಣಿ, ಪಕ್ಷಿಗಳಿಗಿರುವ ಪೆಟ್ ಸೆಂಟರ್ ಸ್ಥಾಪಿಸಿರುವುದು ಶ್ಲಾಘನೀಯ.

ಇದರಿಂದ ಕೊಡಗಿನ ಜನರನ್ನು, ರಾಜ್ಯದ ಪ್ರವಾಸಿಗರನ್ನು ಹಾಗೂ ವಿದ್ಯಾರ್ಥಿಗಳನ್ನು ಈ ಧಾಮವು ತನ್ನತ ಸೆಳೆಯುತ್ತಿದೆ. ಕೊಡಗಿನಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಒಲಂಪಿ ಯನ್ ಲೆ. ಕರ್ನಲ್, ಬಿ.ಕೆ. ಸುಬ್ರಮಣಿ, ಪ್ರವಾಸೋದ್ಯಮ ಅಸೋಸಿಯೇಷನ್‌ನ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಖಾಸಗಿ ಅನುದಾನಿತ ರಹಿತ ಶಾಲೆಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಯಿ ಶಂಕರ ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ, ನಿರ್ದೇಶಕರಾದ ಗೌರವ್ ಕಾರ್ಯಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿದೇಶಿ ತಳಿಯ ಅಪರೂಪದ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ವಿನೂತನ ಅನುಭವ ಪಡೆದರು.