ಕೂಡಿಗೆ, ಅ. ೫: ಕುಶಾಲ ನಗರದ ಕೇರಳ ಸಮಾಜದ ವತಿಯಿಂದ ತಾ. ೬ ರಂದು (ಇಂದು) ಓಣಂ ಆಚರಣೆಯನ್ನು ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ. ರವೀಂದ್ರನ್ ತಿಳಿಸಿದ್ದಾರೆ. ಸಮಾಜದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ೨೪ನೇ ವರ್ಷದ ಓಣಂ ಆಚರಣೆಯನ್ನು ಸಂಪ್ರದಾಯದAತೆ ಹಮ್ಮಿಕೊಳ್ಳಲಾಗಿದೆ.
ಸಮಾಜದ ಸ್ಥಾಪಕ ಅಧ್ಯಕ್ಷ ಶಿವನ್ ಅವರ ನಿಧನ ಹಾಗೂ ವಯನಾಡಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಮೆರವಣಿಗೆ, ಪೂಕಳಂ ಸ್ಪರ್ಧೆ ಈ ಬಾರಿ ಆಯೋಜಿಸಿಲ್ಲ. ಹೆಚ್ಚು ಆಡಂಬರವಿಲ್ಲದೆ ಸಂಪ್ರದಾಯಕ್ಕೆ ಯಾವುದೇ ಚ್ಯುತಿಬಾರದಂತೆ ಸರಳ ರೀತಿಯಲ್ಲಿ ಈ ಬಾರಿ ಓಣಂ ಆಚರಣೆ ನಡೆಯಲಿದೆ ಎಂದು ತಿಳಿಸಿದರು. ಸಮಾಜದ ನಿರ್ದೇಶಕ ವರದ ಮಾತನಾಡಿ, ಚಂಡೆ ವಾದ್ಯಗಳೊಂದಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಆಚರಿಸಿಕೊಂಡು ಬರುತ್ತಿದ್ದ ಮೆರವಣಿಗೆ ಘೋಷಾಯಾತ್ರೆ ಮತ್ತು ಪೂಕಳಂ ಸ್ಪರ್ಧೆ ಹೊರತುಪಡಿಸಿ ತಿರುವಾದಿರಕಳಿ, ಭರತನಾಟ್ಯ, ನಾಡೋಡಿ ನೃತ್ಯ, ನಾಡಗೀತೆ, ಓಣಂ ಪಾಟ್ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನ ೧ ಗಂಟೆಯ ವಿಶೇಷ ಓಣಂ ಸದ್ಯದ ನಂತರ ಆಯೋಜಿಸಲಾಗಿದೆ. ಇದರೊಂದಿಗೆ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ಕೂಡ ಆಯೋಜಿಸಿದ್ದು ವಿಜೇತರುಗಳಿಗೆ ಬಹುಮಾನ ವಿತರಣೆಯಾಗಲಿದೆ. ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ, ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರು, ಗುಡ್ಡೆ ಹೊಸೂರು ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಮುರುಳೀಧರನ್, ಕುಶಾಲ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೇರಳ ಸಮಾಜದ ಅಧ್ಯಕ್ಷ ಪಿ. ರವೀಂದ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ರಾಬಿನ್ ಕೆ.ಜೆ., ಖಜಾಂಚಿ ಬಿ.ಸಿ. ಆನಂದ್, ನಿರ್ದೇಶಕ ಪಿ.ಕೆ. ಧನರಾಜ್ ಇದ್ದರು.