ಕೂಡಿಗೆ, ಅ. ೫: ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಉತ್ತಮ ಪ್ರಗತಿ ಸಾಧನೆಗೆ ಪ್ರಶಸ್ತಿಯನ್ನು ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಈ ಬಗ್ಗೆ ಮಾಹಿತಿಯನ್ನು ನೀಡಿದ ಭಾಸ್ಕರ್ ನಾಯಕ್, ಗ್ರಾಮೀಣ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈ ವರ್ಷವು ಸಹ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯವು ೧೪ನೇ ಸೆಪ್ಟೆಂಬರ್ ೨೦೨೪ ರಿಂದ ೨ನೇ ಅಕ್ಟೋಬರ್ ೨೦೨೪ ರವರೆಗೆ `ಸ್ವಚ್ಛತಾ ಹೀ ಸೇವಾ ೨೦೨೪’ ಅಂದೋಲನವನ್ನು ಹಮ್ಮಿಕೊಂಡಿದೆ. ಈ ಸಂಬAಧ ಮಾರ್ಗಸೂಚಿಗಳನ್ವಯ ೧೭ನೇ ಸೆಪ್ಟೆಂಬರ್ ೨೦೨೪ ರಿಂದ ೧ನೇ ೨೦೨೪ ವರೆಗೆ ವಿವಿಧ ಸ್ವಚ್ಛತಾ ಚಟುವಟಿಕೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿತ್ತು. ಈ ಸದರಿ ಪಾಕ್ಷಿಕದ ಅವಧಿಯಲ್ಲಿ ಅಟeಚಿಟಿಟiಟಿess ಖಿಚಿಡಿgeಣ Uಟಿiಣ (ಅಖಿU), ಶುಚಿಗೊಳಿಸುವಿಕೆ ಸಫಾಯಿ ಮಿತ್ರ ಸುರಕ್ಷ ಶಿಬಿರ, ಶಾಲಾ ಕಾರ್ಯಕ್ರಮಗಳು ತಾಯಿ ಹೆಸರಿನಲ್ಲಿ ಗಿಡ ನೆಡುವುದು, ಶ್ರಮದಾನ ಚಟುವಟಿಕೆಗಳು, ನೈರ್ಮಲ್ಯ, ಶುಚಿತ್ವ ವಿಷಯಗಳಲ್ಲಿ ವ್ಯಾಪಕವಾದ ಅರಿವು ಮೂಡಿಸುವುದು ಸೇರಿದಂತೆ ವಿವಿಧ ಸ್ವಚ್ಛತಾ ಹೀ ಸೇವಾ-೨೦೨೪ರ ಕಾರ್ಯಕ್ರಮಗಳನ್ನು ನಮ್ಮ ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯಿAದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.