ಗೋಣಿಕೊಪ್ಪಲು, ಅ. ೫: ಗೋಣಿಕೊಪ್ಪ ದಸರಾ ಅಂಗವಾಗಿ ಶಿವಾಜಿ ಸೇನೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಕಬಡ್ಡಿ ಕ್ರೀಡಾಕೂಟವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ರೈಡ್ ಮಾಡುವ ಮೂಲಕ ಉದ್ಘಾಟಿಸಿದರು.

ಅನಂತರ ನಡೆದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಕಳೆದ ೩ ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಕಬಡ್ಡಿ ಕ್ರೀಡೆಯು ಯಶಸ್ವಿಯಾಗಿ ನಡೆಸುತ್ತಿರುವುದು ಶ್ಲಾಘನೀಯ. ಪ್ರತಿ ವರ್ಷ ಇಂತಹ ಪಂದ್ಯಾಟ ಹೆಚ್ಚಾಗಿ ನಡೆಯು ವಂತಾಗಬೇಕು. ಕೊಡಗಿನಲ್ಲಿ ಕ್ರೀಡೆಗೆ ಉತ್ತಮ ವೇದಿಕೆಗಳು ಲಭಿಸುತ್ತಿವೆ. ಕ್ರೀಡಾಪಟುಗಳು ಇವುಗಳ ಪ್ರಯೋಜನ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಸೂಸಬೇಕು ಎಂದು ಕರೆ ನೀಡಿದರು.

ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಕ್ರೀಡೆಯಿಂದ ಕ್ರೀಡಾಪಟುಗಳ ಆರೋಗ್ಯ ಮಟ್ಟ ಸುಧಾರಣೆ ಆಗುತ್ತದೆ. ಗ್ರಾಮೀಣ ಕ್ರೀಡೆಗೆ ಸಮಿತಿಯು ಒತ್ತು ನೀಡುತ್ತಿರುವುದು ಪ್ರಶಂಸನೀಯ. ಕೊಡಗಿನಲ್ಲಿ

(ಮೊದಲ ಪುಟದಿಂದ) ಎಲ್ಲಾ ಕ್ರೀಡೆಗೆ ಉತ್ತೇಜನ ನೀಡುವ ಸಂಘ ಸಂಸ್ಥೆಗಳಿವೆ. ಸಾಕಷ್ಟು ಕ್ರೀಡಾಪಟುಗಳು ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಹೆಸರನ್ನು ಗಳಿಸಿದ್ದಾರೆ. ಮುಂದೆಯೂ ಕೊಡಗಿನ ಕೀರ್ತಿ ಕ್ರೀಡೆಯ ಮೂಲಕ ಹೆಚ್ಚಾಗಬೇಕು. ಕ್ರೀಡೆಯ ಮೂಲಕ ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಹೊರಹೊಮ್ಮುವಂತಾಗಲಿ ಎಂದು ಆಶಿಸಿದರು.

ಶಿವಾಜಿ ಯುವಸೇನೆಯ ಅಧ್ಯಕ್ಷ ಎಲ್.ಎನ್. ಅಣ್ಣಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಮಿತಿಯ ಗೌರವ ಅಧ್ಯಕ್ಷ ಕೊಲ್ಲಿರ ಗಯಾ ಕಾವೇರಪ್ಪ, ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕಂದಾ ದೇವಯ್ಯ, ದಸರಾ ಸಮಿತಿ ಸಂಯೋಜಕ ಚಂದನ್ ಕಾಮತ್, ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್‌ರೈ (ಮಂಜು), ಉಮಾಮಹೇಶ್ವರಿ ದೇವಾಲಯ ಟ್ರಸ್ಟಿ ಜಪ್ಪೆಕೋಡಿ ರಾಜಣ್ಣ, ಉದ್ಯಮಿಗಳಾದ ಸಜನ್ ಬೋಪಣ್ಣ, ಚುಮ್ಮಿರೈ, ವಕೀಲ ಪ್ರದೀಪ್‌ಕುಮಾರ್, ದಸರಾ ಸಮಿತಿಯ ಸಹ ಖಜಾಂಜಿ ಶೋಬಿತ್, ಉದ್ಯಮಿ ಎಂ.ಎನ್. ಯೋಗೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಶಿವಾಜಿ ಯುವಸೇನೆಯ ಸಂಘಟನಾ ಕಾರ್ಯದರ್ಶಿ ವಿನೋದ್ ಸ್ವಾಗತಿಸಿ, ಭಾಗ್ಯವತಿ ಅಣ್ಣಪ್ಪ ನಿರೂಪಿಸಿ, ಎ.ಜಿ. ಸುರೇಶ್ ವಂದಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ ಪಂದ್ಯಾಟ ವೀಕ್ಷಿಸಿದರು. ಎರಡು ದಿನಗಳ ಕಾಲ ನಡೆಯುವ ಲೀಗ್ ಮಾದರಿಯ ಪಂದ್ಯದಲ್ಲಿ ೧೦ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ.

ಪಂದ್ಯಾವಳಿಯಲ್ಲಿ ತೀರ್ಪು ಗಾರರಾಗಿ ಮದನ್, ಕಾರ್ತಿಕ್, ಜಾನ್ಸನ್, ರಾಘವೇಂದ್ರ ಹಾಗೂ ವಿದ್ವಾನ್ ಕಾರ್ಯನಿರ್ವಹಿಸಿದರು.

-ಹೆಚ್.ಕೆ. ಜಗದೀಶ್