ಸುಂಟಿಕೊಪ್ಪ, ಅ. ೫: ಇಲ್ಲಿಗೆ ಸಮೀಪದ ಕಂಬಿಬಾಣೆಯಲ್ಲಿರುವ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ೬೯ನೇ ವರ್ಷದ ನವರಾತ್ರಿ ಉತ್ಸವ ಗುರುವಾರ ಸಂಜೆಯಿAದ ಚಾಲನೆಗೊಂಡಿದ್ದು, ತಾ. ೧೨ ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗುರುವಾರದಂದು ಪೂರ್ವಾಹ್ನ ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶುಕ್ರವಾರ ಸಂಜೆ ಪ್ರಗತಿ ಕೇಡನಾ ಸಂಗೀತ ಕಲಾ ಕೇಂದ್ರ ಕುಶಾಲನಗರದ ವತಿಯಿಂದ ಭರತನಾಟ್ಯ, ೫ ರಂದು ಸಂಜೆ ಕಂಬಿಬಾಣೆ ಶ್ರೀ ರಾಮ ಮಕ್ಕಳ ಕುಣಿತ, ಭಜನಾ ತಂಡದಿAದ ಭಜನಾ ಕಾರ್ಯಕ್ರಮ, ತಾ ೬ ರಂದು ಬೆಳಿಗ್ಗೆ ದುರ್ಗಾಹೋಮ ನಡೆಯಲಿದ್ದು, ಸಂಜೆ ಝೇಂಕಾರ್ ಆಕೇಸ್ಟç ತಂಡದಿAದ ರಸಮಂಜರಿ, ತಾ. ೭ ರ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ತಾ. ೮ ರ ಸಂಜೆ ಶ್ರೀ ಬೈತೂರಪ್ಪ ಭಜನಾ ಮಂಡಳಿ ಕೊಡಗರಹಳ್ಳಿ ಮಯದ ನಿರಲ್ ತುಳು ನಾಟಕ ತಾ.೯ ರಂದು ಓಂ ಶಕ್ತ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ತಾ.೧೦ ರ ಗುರುವಾರ ಸಂಜೆ ಸಾಮೂಹಿಕ ದುರ್ಗಾ ದೀಪ ನಮಸ್ಕಾರ ಪೂಜೆ ನಡೆಯಲಿದೆ ತಾ.೧೧ ರಂದು ಸಂಜೆ ವಾಹನಪೂಜೆ ಮತ್ತು ತಾ.೧೨ ರ ರಾತ್ರಿ ಗ್ರಾಮ ಮುಖ್ಯಬೀದಿಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಶೋಭಾಯಾತ್ರೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಜರಗುವ ದಿನಗಳಂದು ನವರಾತ್ರಿ ಕೊನೆಯ ದಿನದಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.