ಮಡಿಕೇರಿ, ಅ. ೫: ರಾಜ್ಯ ಸರಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೊಡಗಿನ ಮೂಲದವರಾದ ಐ.ಎ.ಎಸ್. ಅಧಿಕಾರಿ ಬೊಳಂದAಡ ಬಿ. ಕಾವೇರಿ ಅವರು ನೇಮಕಗೊಂಡಿದ್ದಾರೆ. ಈತನಕ ಸಿಎಂ ಕಾರ್ಯದರ್ಶಿಯಾಗಿ ಡಾ. ಕೆ.ವಿ. ತ್ರಿಲೋಕ್ಚಂದ್ರ ಅವರನ್ನು ಶಾಲಾ ಶಿಕ್ಷಣ ಇಲಾಖಾ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಶಾಲಾ ಶಿಕ್ಷಣ ಇಲಾಖಾ ಆಯುಕ್ತರಾಗಿದ್ದ ಕಾವೇರಿ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಸ್ಥಾನಕ್ಕೆ ನಿಯೋಜಿಸಲಾಗಿದೆ. ಈ ಹುದ್ದೆಯೊಂದಿಗೆ ಕಾವೇರಿ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರಕಾರದ ಕಾರ್ಯದರ್ಶಿ ಸ್ಥಾನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಕೊಡಗು ಜಿಲ್ಲೆಯವರಾದ ಬೊಳಂದAಡ ಕಾವೇರಿ (ತಾಮನೆ- ಬಲ್ಟಿಕಾಳಂಡ) ಅವರು ೨೦೦೮ರ ಬ್ಯಾಚ್ ಐ.ಎ.ಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಲ್ಟಿಕಾಳಂಡ ಬೆಳ್ಯಪ್ಪ ಅವರ ಪುತ್ರಿಯಾಗಿರುವ ಕಾವೇರಿ ಅವರು ಮೂಲತಃ ಕಾರುಗುಂದದವರಾದ ಬೊಳಂದAಡ ಮುತ್ತಣ್ಣ ಅವರ ಪತ್ನಿಯಾಗಿದ್ದಾರೆ.