ಮಡಿಕೇರಿ, ಅ. ೫: ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವ ಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಪತ್ರ ಬರೆಯಲು ಇರುವ ವಿಷಯ ‘ದಿ ಜಾಯ್ ಆಫ್ ರೈಟಿಂಗ್: ಇಂರ್ಪಾಟೆAಟ್ಸ್ ಆಫ್ ಲೆರ‍್ಸ್ ಇನ್ ಎ ಡಿಜಿಟಲ್ ಏಜ್’.

ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅಂಚೆ ಕಚೇರಿಯಲ್ಲಿ ದೊರೆಯುವ ಇನ್ ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್‌ವಲಪ್‌ಗಳನ್ನು ಉಪಯೋಗಿಸತಕ್ಕದ್ದು. ಇನ್‌ಲ್ಯಾಂಡ್ ಲೆಟರ್ ಕಾರ್ಡ್ (ಐಎಲ್‌ಸಿ) ಉಪಯೋಗಿಸುವವರು ೫೦೦ ಪದಗಳಿಗೆ ಮೀರದಂತೆ ಮತ್ತು ಎನ್‌ವಲಪ್ ಉಪಯೋಗಿಸುವವರು ೧೦೦೦ ಪದಗಳಿಗೆ ಮೀರದಂತೆ ಎ೪ ಶೀಟ್‌ನಲ್ಲಿ ಬರೆದು ಎನ್‌ವಲಪ್ ಒಳಗೆ ಹಾಕಿ ಕಳುಹಿಸಬೇಕು. ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು. ಸ್ಪರ್ಧೆಗೆ ಉಪಯೋಗಿಸಿದ ಐಎಲ್‌ಸಿ/ಎನ್‌ವಲಪ್ ಮೇಲೆ ಸೂಪರ್‌ಡೆಂಟ್ ಆಫ್ ಪೋಸ್ಟ್ ಆಫೀಸಸ್, ಕೊಡಗು ಡಿವಿಜನ್-೫೭೧೨೦೧ ‘ಪತ್ರ ಬರೆಯುವ ಸ್ಪರ್ಧೆ’ ಎಂದು ವಿಳಾಸ ಬರೆದು ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ನಂತರ ಐಎಲ್‌ಸಿ/ಎನ್‌ವಲಪ್ ಅನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತಲುಪಿಸಬೇಕು. ನಿಮ್ಮ ಪತ್ರ ನಮ್ಮ ಕಚೇರಿಗೆ ತಲುಪಲು ಡಿಸೆಂಬರ್ ೧೪ ಕೊನೆಯ ದಿನವಾಗಿದೆ.

ಈ ಸ್ಪರ್ಧೆಯಲ್ಲಿ ೧೮ ವರ್ಷ ಒಳಗಿನ ಮತ್ತು ೧೮ ವರ್ಷ ಮೇಲ್ಪಟ್ಟ ವರ್ಗ ಎಂದು ಎರಡು ವಿಭಾಗದಲ್ಲಿ ನಡೆಸಲಾಗುವುದು. ಕರ್ನಾಟಕ ವೃತ್ತ ಮಟ್ಟದ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ ರೂ. ೨೫ ಸಾವಿರ, ಎರಡನೇ ಬಹು ಮಾನ ರೂ. ೧೦ ಸಾವಿರ, ಮೂರನೇ ಬಹುಮಾನ ರೂ. ೫ ಸಾವಿರ. ಹಾಗೆಯೇ ರಾಷ್ಟಿçÃಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಮೊದಲ ವಿಜೇತರಿಗೆ ರೂ. ೫೦ ಸಾವಿರ, ಎರಡನೇ ವಿಜೇತರಿಗೆ ರೂ. ೨೫ ಸಾವಿರ ಮತ್ತು ತೃತೀಯ ಬಹುಮಾನ ರೂ. ೧೦ ಸಾವಿರ ನಗದು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ತಿತಿತಿ.ಞಚಿಡಿಟಿಚಿಣಚಿಞಚಿ ಠಿosಣ. gov.iಟಿನ್ನು ಸಂಪರ್ಕಿಸಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.