*ಗೋಣಿಕೊಪ್ಪ: ಹಾತೂರು ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಮಾಲಿನಿ ಮಾಹಿತಿ ನೀಡಿದ್ದಾರೆ.

ಹೈ ಜಂಪ್‌ನಲ್ಲಿ ವಿದ್ಯಾರ್ಥಿ ಧರ್ಮ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ತಟ್ಟೆ ಎಸೆತ ಮತ್ತು ರಿಲೆಯಲ್ಲಿಯೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಪೊನ್ನಂಪೇಟೆ: ಇತ್ತೀಚೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿಗಳಾದ ಲಂಕೇಶ್, ಪ್ರಣವ್, ಶಿಬಿಲ್, ಫಜಲ್, ರಿಜ್ವಾನ್, ಸೂರಜ್ ಬೆಳ್ಯಪ್ಪ, ರಾಮ ಮತ್ತು ಸಫಾನ್ ಅವರುಗಳು ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ತಿಳಿಸಿದ್ದಾರೆ.

ಶ್ರೀಮಂಗಲ: ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟವು ಇತ್ತೀಚೆಗೆ ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಬಾಲಕರ ಖೋ-ಖೋ ತಂಡವು ಮಡಿಕೇರಿ ತಂಡದ ವಿರುದ್ಧ ೧೭-೩ ಅಂತರದಿAದ ಗೆದ್ದು, ನಂತರದ ಅಂತಿಮ ಪಂದ್ಯದಲ್ಲಿ ಸೋಮವಾರಪೇಟೆ ತಂಡದ ವಿರುದ್ಧ ೧೧-೭ ಅಂತರದಿAದ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಶಿವು ಜೆ.ಎಂ., ನವೀನ ಪಿ.ಸಿ., ಸತೀಶ ಪಿ.ಸಿ., ಅನು ಪಿ.ಎ., ವಿಜು ಪಿ.ಎ., ರಘು ಜೆ.ಬಿ., ಸಂತೋಷ್ ಪಿ.ಎಂ., ಕಾರ್ತಿಕ್ ಜಿ.ವಿ., ಮುತ್ತ ವೈ.ಕೆ., ಅಜಿತ್ ಪಿ.ಸಿ., ಲೋಹಿತ್ ಪಿ.ಆರ್. ಮತ್ತು ದಿಸಾನ್ ಎಂ.ಆರ್. ಹಾಗೂ ನವಿತ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದ ಖೋ-ಖೋ ತಂಡಕ್ಕೆ ಆಯ್ಕೆ ಆಗಿರುತ್ತಾರೆ. ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ವೈ.ಎಂ. ಅಥ್ಲೆಟಿಕ್ (ಮೇಲಾಟ) ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಎಂದು ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಪ್ರಕಟಣೆ ತಿಳಿಸಿದೆ.ಐಗೂರು: ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗದ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಐಗೂರು ಪ್ರೌಢಶಾಲಾ ವಿದ್ಯಾರ್ಥಿ ದಿಕಾಸ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ.ಶನಿವಾರಸAತೆ: ಸಮೀಪದ ಕೊಡ್ಲಿಪೇಟೆಯ ಎಸ್.ಕೆ.ಎಸ್. ಕಲ್ಲುಮಠ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಕೆ.ಯು. ಹರ್ಷಿತ್ ಹುದಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಉದ್ದಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.