ಕೊಡ್ಲಿಪೇಟೆ, ಅ. ೫: ಇಲ್ಲಿನ ವೀರಶೈವ ಸಮಾಜದ ವತಿಯಿಂದ ಪಟ್ಟಣದ ಐತಿಹಾಸಿಕ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಅದ್ದೂರಿಯಾಗಿ ನೆರವೇರಿತು.
ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿ ಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಪ್ರತಿದಿನ ವಿಶೇಷ ಅಲಂಕಾರ, ಪೂಜೆಗಳು, ಸೇವೆಗಳು ನಡೆದವು. ವಿಸರ್ಜನಾ ಮಹೋತ್ಸವ ಅಂಗವಾಗಿ ಕೊಡ್ಲಿಪೇಟೆಯಲ್ಲಿ ವಿವಿಧ ಕಾರ್ಯಗಳನ್ನು ಆಯೋಜಿಸಲಾಗಿತ್ತು.
ಆಟೋ ನಿಲ್ದಾಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಬೆಂಗಳೂರಿನ ರಾಕ್ಸ್ ಮ್ಯೂಸಿಕ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಜೂನಿ ಯರ್ ವಿಷ್ಣುವರ್ದನ್, ಅಂಬರೀಶ್ ಅವರುಗಳ ಅಭಿನಯ ಎಲ್ಲರನ್ನೂ ರಂಜಿಸಿತು. ನಂತರ ವಿದ್ಯುತ್ ಹಾಗೂ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಯನ್ನು ಸಾಗಿತು. ಸಿಡಿಮದ್ದುಗಳು, ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಬಂಟ್ವಾಳದ ಚಿಲಿಪಿಲಿ ಗೊಂಬೆ ಬಳಗದಿಂದ ಕೀಲುಕುದುರೆ, ಕರಗ, ಆಕರ್ಷಕ ದೈತ್ಯ ಗೊಂಬೆ ಕುಣಿತಗಳು ಆಕರ್ಷಣೆಯಾಗಿದ್ದವು. ಬಿ.ಸಿ. ರೋಡ್ ಎಸ್‌ಆರ್‌ಕೆ ತಂಡ ಹಾಗೂ ಮರಕುಲಿ ತಂಡದಿAದ ನಾಸಿಕ್ ಮ್ಯೂಸಿಕಲ್ ಬ್ಯಾಂಡ್, ಎಸ್.ಎಲ್.ವಿ ಸೌಂಡ್‌ನ ಆಕರ್ಷಕ ಡಿ.ಜೆ.ಗೆ ಯುವ ಸಮೂಹ ಹೆಜ್ಜೆ ಹಾಕಿ ಸಂಭ್ರಮಿಸಿತು.
ಶನಿವಾರಸಂತೆಯ ಕನಸು ತಂಡದಿAದ ದೇವಾಲಯ, ಮಂಟಪ ಹಾಗು ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಮಹಿಳೆಯರು ಉತ್ಸವ ಮೂರ್ತಿಗೆ ಕುಂಕುಮಾರ್ಚನೆ ಮಾಡಿ ಬಾಗಿನ ಅರ್ಪಿಸಿದರು. ದಾನಿಗಳಾದ ಮ್ಯೆಸೂರಿನ ಲೀಲಾ ರಾಮು ಅವರು ಅನ್ನದಾನದ ಸೇವಾರ್ಥ ವಹಿಸಿದ್ದರು. ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಬಸವೇಶ್ವರ ದೇವಾಲಯದ ಪ್ರಧಾನ ಅರ್ಚಕ ಮೃತ್ಯುಂಜಯ, ಪ್ರಮುಖರಾದ ಹೆಚ್.ಎಸ್. ಚಂದ್ರಮೌಳಿ, ಡಾ. ಉದಯ್‌ಕುಮಾರ್, ಶಾಂತಮಲ್ಲಪ್ಪ, ವೀರಶೈವ ಸಮಿತಿ ಅಧ್ಯಕ್ಷ ಎಸ್.ವಿ. ಸಿದ್ದೇಶ್, ಕಾರ್ಯದರ್ಶಿ ಬಿ.ಸಿ. ಪ್ರದೀಪ್, ನಿರ್ದೇಶಕರುಗಳಾದ ಕೆ.ಎಸ್. ಪ್ರದೀಪ್ ಕುಮಾರ್, ಪಿ.ಎನ್. ವಿನಾಯಕ, ಹೆಚ್.ಆರ್. ಮೋಕ್ಷಿತ್ ರಾಜ್, ಎ.ಎಸ್. ಗಂಗಾಧರ, ಸಿ.ಪಿ. ಶಾಂತಿಕಿರಣ್, ಕೆ.ಕೆ. ಜಗದೀಶ್, ಮಣಿಶಂಕರ್, ಕೆ.ಎಲ್. ನಂದೀಶ್, ಎ.ಆರ್. ವಿರೂಪಾಕ್ಷ, ವ್ಯವಸ್ಥಾಪಕ ಹರೀಶ್, ಗೌರವಾಧ್ಯಕ್ಷ ಎಸ್.ಎಸ್. ವರಪ್ರಸಾದ್, ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ. ಯತೀಶ್ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.