ಗೋಣಿಕೊಪ್ಪಲು, ಅ. ೫: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆಯುತ್ತಿರುವ ಗೋಣಿಕೊಪ್ಪ ದಸರಾದ ಅಂಗವಾಗಿ ಯುವ ದಸರಾ ಸಮಿತಿಯಿಂದ ಆಯೋಜನೆಗೊಂಡಿದ್ದ ಸೈಕ್ಲಥಾನ್‌ನಲ್ಲಿ (ಸೈಕಲ್ ರೇಸ್) ೫೨ ಸ್ಪರ್ಧಿಗಳು ಭಾಗವಹಿಸಿ ೬ ಕಿ.ಮೀ. ಸೈಕಲ್ ತುಳಿದು ಜನತ್ಸೋವಕ್ಕೆ ಮೆರುಗುತಂದರು. ಇದರೊಂದಿಗೆ ನಡೆದ ಹಗ್ಗಜಗ್ಗಾಟ ಕೌತುಕ ಮೂಡಿಸಿತು.
ದಸರಾ ವೇದಿಕೆಯ ಮುಂಭಾಗದಲ್ಲಿ ಚಾಲನೆಗೊಂಡ ೧೪, ೧೮ ವರ್ಷ ಹಾಗೂ ಮುಕ್ತ ವಿಭಾಗದ ಸೈಕಲ್ ರೇಸ್‌ನಲ್ಲಿ ಸೈಕಲ್ ರೈರ‍್ಸ್ ಉತ್ಸಾಹದಿಂದ ಭಾಗವಹಿಸಿದ್ದರು. ಹಗ್ಗಜಗ್ಗಾಟಕ್ಕೆ ೮ ತಂಡಗಳು ಪೈಪೋಟಿ ನೀಡಿದರು.
ಕ್ರೀಡಾಕೂಟಕ್ಕೆ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಯುವ ದಸರಾ ಸಮಿತಿ ಅಧ್ಯಕ್ಷ ನಾಮೆರ ಅಂಕಿತ್ ಪೊನ್ನಪ್ಪ ಮಾತನಾಡಿ, ಕಳೆದ ವರ್ಷದಿಂದ ಯುವ ದಸರಾದ ಅಂಗವಾಗಿ ಸೈಕಲ್‌ರೇಸ್ ಅನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಕ್ರೀಡಾಪಟುಗಳು ಉತ್ಸಾಹ ದಿಂದ ಭಾಗವಹಿಸುತ್ತಿದ್ದಾರೆ. ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು.
ಬಹುಮಾನ ವಿಜೇತರು
ಸೈಕಲ್ ರೇಸ್‌ನಲ್ಲಿ ೧೪ ವರ್ಷದೊಳಗಿನ ವಿಭಾಗದಲ್ಲಿ ಎಂ.ವಿ.ಅಜ್ಮತ್ (ಪ್ರ), ಯು.ವಿವಿನ್ (ದ್ವಿ), ಸುಮಿತ್(ತೃ), ೧೪ ರಿಂದ ೧೮ ವರ್ಷದೊಳಗಿನ ವಿಭಾಗದಲ್ಲಿ ಪೂದ್ರಿಮಾಡ ನಮನ್ (ಪ್ರ). ಹೆಚ್.ಕೃತಿಕ್ ಮಿತಿ (ದ್ವಿ), ಹೆಚ್. ಕೃತಿನ್ ಮಿತಿ (ತೃ),೧೮ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ನಿಖಿಲ್ (ಪ್ರ), ಹೆಚ್.ಎಂ.ಅಭಿಷೇಕ್ (ದ್ವಿ) ಸಚಿನ್‌ಕಾಂತ್(ತೃ), ಬಾಲಕಿಯರ ವಿಭಾಗದಲ್ಲಿ ವೇದ ಪ್ರಿಯ ಪಿ. ಪಾಟೀಲ್ (ಪ್ರ), ಎಂ. ಊರ್ವಿ ಪೂವಣ್ಣ (ದ್ವಿ), ಟಿ.ಎಂ.ವAದನಾ (ತೃ) ಸ್ಥಾನ ಗಳಿಸಿಕೊಂಡರು.
ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಕಾವೇರಿ ಕಾಲೇಜು ಗೋಣಿಕೊಪ್ಪ ಪ್ರಥಮ, ವಿದ್ಯಾನಿಕೇತನ ಪಿ.ಯು. ಕಾಲೇಜು ದ್ವಿತೀಯ ಹಾಗೂ ಬಾಲಕರ ವಿಭಾಗದಲ್ಲಿ ಜಿಂಗಲಾಲ ತಂಡ ಪ್ರಥಮ, ಕಾವೇರಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು.