ಮಡಿಕೇರಿ, ಅ. ೫: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಏರ್ಪಡಿಸಲಾಗಿರುವ ದಸರಾ ಕ್ರೀಡಾಕೂಟಕ್ಕೆ ಇಂದು ಚಾಲನೆ ನೀಡಲಾಯಿತು.

ಮಡಿಕೇರಿ ದಸರಾ ಸಮಿತಿ ಹಾಗೂ ದಸರಾ ಕ್ರೀಡಾ ಸಮಿತಿ ವತಿಯಿಂದ ಕ್ರೀಡಾಕೂಟದ ಪ್ರಯುಕ್ತ ಮುಂಜಾನೆ ಏರ್ಪಡಿಸಲಾಗಿದ್ದ ರಸ್ತೆ ಒಟದ ಸ್ಪರ್ಧೆಯೊಂದಿಗೆ ಚಾಲನೆ ನೀಡಲಾಯಿತು. ನಗರದ ಜ. ತಿಮ್ಮಯ್ಯ ವೃತ್ತದ ಬಳಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ದಸರಾ ಪ್ರಯುಕ್ತ ಕ್ರೀಡಾಕೂಟ ಹಮ್ಮಿಕೊಂಡಿರುವುದು ಉತ್ತಮ ಕಾರ್ಯವಾಗಿದೆ. ಕ್ರೀಡೆಯಲ್ಲಿ ಎಲ್ಲರೂ ಹುಮ್ಮನಸ್ಸಿನಿಂದ ಪಾಲ್ಗೊಳ್ಳಬೇಕು, ಮುಂಜಾನೆಯಲ್ಲಿ ಎದ್ದು ಪುಟಾಣಿ ಮಕ್ಕಳಾದಿಯಾಗಿ ಹಿರಿಯರು ಕೂಡ ಭಾಗವಹಿಸಿರುವುದು ಇಲ್ಲಿನ ಕ್ರೀಡಾ ಸ್ಪೂರ್ತಿಯನ್ನು ಬಿಂಬಿಸುತ್ತದೆ ಎಂದು ಶುಭ ಹಾರೈಸಿದರು.

ಜ. ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್, ನೀರುಕೊಲ್ಲಿ, ಸಾರಿಗೆ ಸಂಸ್ಥೆ ಡಿಪೋ, ಸರಕಾರಿ ಆಸ್ಪತ್ರೆ ಗೇಟ್‌ವರೆಗೆ ವಿವಿಧ ವಿಭಾಗಗಳಲ್ಲಿ ನಡೆದ ರಸ್ತೆ ಓಟದಲ್ಲಿ ಪುಟಾಣಿಗಳಿಂದ ಹಿಡಿದು ಬಾಲಕ, ಬಾಲಕಿಯರು, ಮಹಿಳೆಯರು, ಹಿರಿಯರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಖಜಾಂಚಿ ಅರುಣ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಸಾಂಸ್ಕೃತಿಕ ಸಮಿತಿಯ ಕುಡೆಕಲ್ ಸಂತೋಷ್, ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ, ಗೌರವ ಸಲಹೆಗಾರರುಗಳಾದ ರವಿ ಕರ್ಕೇರ,

(ಮೊದಲ ಪುಟದಿಂದ) ಮನು ಮಂಜುನಾಥ್, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ನಗರಸಭಾ ಆಯುಕ್ತ ರಮೇಶ್, ನಗರಸಭಾ ಸದಸ್ಯರುಗಳಾದ ಸಬಿತಾ, ಕೆ.ಎಸ್. ರಮೇಶ್, ಎಸ್.ಸಿ. ಸತೀಶ್‌ಕುಮಾರ್, ಮಹೇಶ್ ಜೈನಿ ಸೇರಿದಂತೆ ಇತರರು ಇದ್ದರು. ಕ್ರೀಡಾ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಕ್ರೀಡಾ ಸಮಿತಿ ಪ್ರಧಾನ ಕಾರ್ಯದರ್ಶಿ ದುಗ್ಗಳ ಕಪಿಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಗರ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಓಟಕ್ಕೆ ಯಾವುದೇ ತೊಂದರೆಯಾಗದAತೆ ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಿದರು.

ನಂತರ ನಗರದ ಜಿಲ್ಲಾ ಕ್ರೀಡಾಂಗಣದ ಫುಟ್‌ಬಾಲ್ ಮೈದಾನದಲ್ಲಿ ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂಸಿಸಿ) ತಂಡದ ಸಹ ಕಾರದೊಂದಿಗೆ ಫುಟ್‌ಬಾಲ್ ಪಂದ್ಯಾವಳಿ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ವಾಲಿಬಾಲ್ ಪಂದ್ಯಾವಳಿಗಳು ನಡೆದವು.