ಸೋಮವಾರಪೇಟೆ, ಅ. ೫: ಕಳೆದ ಒಂದು ವಾರದ ಹಿಂದೆ ಮನೆ ಯಲ್ಲಿ ವಿಷ ಸೇವಿಸಿದ್ದ ೪ ತಿಂಗಳ ಗರ್ಭಿಣಿ ಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ಅರಸೀಕೆರೆ ನಿವಾಸಿ, ಕಳೆದ ಆರೇಳು ತಿಂಗಳ ಹಿಂದಷ್ಟೇ ಹೆಗ್ಗುಳ ಗ್ರಾಮದ ಮಿಥುನ್ ಎಂಬವರನ್ನು ಮದುವೆಯಾಗಿದ್ದ ಪ್ರೇಮಾ (೨೧) ಎಂಬವರೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದವರು.

ಮಾಳಪಕ್ಷದ ಹಬ್ಬದಂದು ಸಂಬAಧಿಕರು ಮನೆಗೆ ಆಗಮಿಸಿದ್ದು, ಸಂಭ್ರಮದ ನಡುವೆಯೇ ಪ್ರೇಮಾ ಅವರು ವಿಷ ಸೇವಿಸಿದ್ದಾರೆ. ತಕ್ಷಣ ಹಾಸನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಿದ್ದು, ಅಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆ, ಮೈಸೂರಿಗೆ ಸಾಗಿಸಲಾಗಿತ್ತು.

ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಪ್ರೇಮಾ ಅವರು ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.