ಮಡಿಕೇರಿ, ಅ. ೫ : ಹಲೋ... ಗುಡ್‌ಮಾರ್ನಿಂಗ್.. ಈಗ ಎದ್ರಾ... ಕಾಫಿ ಆಯಿತಾ... ತಿಂಡಿ ಏನು ? ಇದು ಬಹುಶಃ ಸಮಾಜದಲ್ಲಿ ಸದಾ ಎದುರಾಗುವ ದಿನಿನಿತ್ಯದ ಮಾತುಕತೆಯಾಗಿದೆ. ರಾತ್ರಿಯ ನಿದ್ರೆಯಿಂದ ಎದ್ದು ಬೆಳಿಗ್ಗೆ ಆಯಾ ದಿನದ ಚಟುವಟಕೆಗಳು ಪ್ರಾರಂಭಗೊಳ್ಳುತ್ತವೆ. ಅಕ್ಕ ಪಕ್ಕದವರು ನೆರೆಕರೆಯವರು ಇರಲಿ ಅಥವಾ ಬೆಳಿಗ್ಗೆ ದೂರವಾಣಿ ಮೊಬೈಲ್‌ನ ಮಾತುಕತೆಯಾಗಲಿ ವಾಟ್ಸಾö್ಯಪ್... ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿನ ಸಂದೇಶಗಳ ವಿನಿಮಯದಲ್ಲಾಗಲಿ ಈ ಮಾತು ಸಹಜವಾಗಿರುತ್ತದೆ. ಬೆಳಿಗ್ಗೆ ೧೧ ಗಂಟೆ ಸುಮಾರಿಗೆ... ಸಂಜೆ ೪ ಗಂಟೆಯ ಬಳಿಕವೂ ಕಾಫಿ ಆಯಿತಾ ಎನ್ನುವುದೂ ರೂಢಿಯಲ್ಲಿದೆ.

ಈ ಪೀಠಿಕೆ ಏಕೆಂದರೆ ಕಾಫಿ ಎಂಬ ಉತ್ತೇಜನಕಾರಿ ಪಾನೀಯಕ್ಕೆ ಅಷ್ಟೊಂದು ಪ್ರಾಮುಖ್ಯತೆಯಿದೆ.... ದೇಶದಲ್ಲಿ ಕಾಫಿಯಷ್ಟೆ ಚಹಾ (ಟೀ) ಕೂಡ ಪ್ರಚಲಿತ ಪಾನೀಯವಾಗಿದ್ದರೂ... ಬಹುಶಃ ಮೊದಲು ಕೇಳಿ ಬರುವ ಮಾತು. ಪ್ರಶ್ನೆ ‘ಕಾಫಿ’ಯ ಪದದ ಉಲ್ಲೇಖದೊಂದಿಗೆ ಚಹಾ (ಟೀ) ಆಯಿತಾ ಎಂಬ ಪ್ರಸ್ತುತ ಕಾಫಿಗೆ ಹೋಲಿಸಿದರೆ ಕಡಿಮೆ ಎನ್ನಬಹುದಾಗಿದೆ. ಇದು ಒತ್ತಟ್ಟಿಗಿರಲಿ, ಕೊಡಗು ಜಿಲ್ಲೆ ಹೇಳಿ ಕೇಳಿ ಪ್ರಸಿದ್ಧಿಯಾಗಿರುವುದು ಕಾಫಿ ನಾಡು ಎಂಬದಾಗಿ, ಇಲ್ಲಿ ಪ್ರಮುಖ ಬೆಳೆಯಾಗಿದ್ದು ಜನ ಜೀವನದ ಆರ್ಥಿಕತೆಯ ಬೆನ್ನೆಲುಬಾಗಿರುವುದೂ ಕೂಡ ಕಾಫಿ ಬೆಳೆಯೇ ಆಗಿದೆ. ಈ ಬಾರಿ ಕಾಫಿ ನಾಡು ಕೊಡಗಿನಲ್ಲಿ ನಾಡಹಬ್ಬ ದಸರಾ ಸಂದರ್ಭದ ನಡುವೆ ಮಡಿಕೇರಿ ದಸರಾದಲ್ಲಿ ವಿಶೇಷವಾಗಿ ಕಾಫಿ ದಸರಾ ಎಂಬ ಹೊಸ ಪರಿಕಲ್ಪನೆಯ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉತ್ಸುಕತೆ - ಆಸಕ್ತಿಯಲ್ಲಿ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೇರಿದಂತೆ ದಸರಾ ಸಮಿತಿ ಪ್ರಮುಖರುಗಳು, ವಿವಿಧ ಕಾಫಿ ಬೆಳೆಗಾರರ ಸಂಘಟನೆಗಳು, ಸಾರ್ವಜನಿಕರು, ಇಲಾಖೆಗಳ ಸಹಭಾಗಿತ್ವದಲ್ಲಿ ಈ ಕಾಫಿ ದಸರಾ ಆಯೋಜಿಸಲ್ಪಟ್ಟಿದೆ.

ತಾ. ೬ರ ಭಾನುವಾರ ಮತ್ತು ೭ರ ಸೋಮವಾರದಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಅಂಗವಾಗಿ ಕಾಫಿಗೆ ಸಂಬAಧಿಸಿದAತೆ ವಿವಿಧ ಮಳೆಗೆಗಳು, ಪ್ರದರ್ಶನ ಮಾಹಿತಿ-ವಿಚಾರ ಸಂಕಿರಣಗಳು ಈ ಬಾರಿಯ ವಿಶೇಷತೆಗಳಲ್ಲಿ ಒಂದು.

ಕಾಫಿ ಬೆಳೆ - ಕಾಫಿಯ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಪೂರಕ ಪ್ರಯತ್ನ ಎನ್ನಬಹುದು.

ಫಲಪ್ರದವಾಗಲಿ : ಕಾಫಿಗೆ ಸಂಬAಧಿಸಿದAತೆ ಹತ್ತು ಹಲವಾರು ಸಮಸ್ಯೆಗಳು - ಚಿಂತನೆಗಳು ಇದೆ. ಭಾರತ ದೇಶದಲ್ಲಿ ಕಾಫಿ ಉತ್ಪಾದನೆಯಲ್ಲಿ ಕೊಡಗು ಜಿಲ್ಲೆಯದ್ದು ಸಿಂಹಪಾಲು ಎಂಬದೂ ಇಲ್ಲಿ ಗಮನಾರ್ಹ. ಇಲ್ಲಿ ಜನರ ಬದುಕೇ ಕಾಫಿ ಆಧಾರಿತವಾಗಿದ್ದು ಎಂಬದರಲ್ಲಿ ಸಂಶಯವಿಲ್ಲ.

ದೇಶದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಾದಲ್ಲಿ ಮಾತ್ರ ಕಾಫಿಗೆ ಸುಭದ್ರ ಭವಿಷ್ಯ ಎಂಬ ವಿಚಾರವೂ ಹಲವು ವರ್ಷಗಳಿಂದ ಪ್ರಸ್ತಾವನೆಯಲ್ಲಿದೆ. ಭಾರತದಲ್ಲಿ ಚಹಾದಂತೆ ಕಾಫಿಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎಂಬ ಕನಸ್ಸಿಗೆ ಈ ಕಾಫಿ ದಸರಾದ ಮೂಲಕ ಮತ್ತೆ ಪ್ರಯತ್ನಗಳು ಆರಂಭಗೊಳ್ಳಲಿ. ಕೆಲವು ವರ್ಷಗಳ ಹಿಂದೆ ಜಿಲ್ಲೆಯವರಾದ ಮಾಚಿಮಾಡ ಎಂ. ರವೀಂದ್ರ ಅವರ ಸಂಚಾಲಕತ್ವದಲ್ಲಿ ಕಾಫಿಯನ್ನು ರಾಷ್ಟಿçÃಯ ಪಾನೀಯ ಎಂದು ಘೋಷಿಸಬೇಕೆಂದು ಒತ್ತಾಯದೊಂದಿಗೆ ಕೆಲವಾರು ಹೋರಾಟ-ಪ್ರಯತ್ನಗಳು ನಡೆದಿತ್ತು. ಕಾಫಿ ರಾಷ್ಟಿçÃಯ ಪಾನೀಯ ಹೋರಾಟ ಆಂದೋಲನ ಸಮಿತಿ ಎಂಬ ಹೆಸರಿನಲ್ಲಿ ರಾಜ್ಯ - ರಾಷ್ಟçಮಟ್ಟದಲ್ಲಿ ಹಲವು ಪ್ರಯತ್ನಗಳು ನಡೆದಿತ್ತಾದರೂ ನಂತರದಲ್ಲಿ ಅದು ಮೊನಚು ಕಳೆದುಕೊಂಡಿದೆ. ಕಾಫಿ ದಸರಾದ ಮೂಲಕ ಮತ್ತೊಮ್ಮೆ ಕಾಫಿ ರಾಷ್ಟಿçÃಯ ಪಾನೀಯ ಘೋಷಣೆ ಆಂದೋಲನಕ್ಕೆ ಮರು ಚಾಲನೆ ಸಿಗುವಂತಾಗಲಿ.

ಈ ಹಿಂದಿನ ಹೋರಾಟ ಸಮಿತಿ ಮತ್ತೆ ಇದರತ್ತ ಗಮನಹರಿಸಲಿ. ಇದಕ್ಕೆ ವಿವಿಧ ಕಾಫಿ ಸಂಘಟನೆಗಳು, ಜನಪ್ರತಿನಿಧಿಗಳು, ಇಲಾಖೆಗಳು, ಬೆಳೆಗಾರರು, ಸಾರ್ವಜನಕರೂ ಕೈಜೋಡಿಸುವಂತಾಗಲಿ. ಕಾಫಿ ದಸರಾ ಪರಿಕಲ್ಪನೆ ಈ ನಿಟ್ಟಿನಲ್ಲಿಯೂ ಪ್ರಯೋಜನಕಾರಿಯಾಗಲಿ ಎಂಬದು ಸದಾಶಯ.

(ಕಾಯಪಂಡ ಶಶಿ ಸೋಮಯ್ಯ)