ಕಣಿವೆ, ಅ. ೬: ಓಣಂ ಹಿಂದೂ ಸಂಸ್ಕೃತಿಯನ್ನು ಮೇಳೈಸುವ ಸುಂದರ ಆಚರಣೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಬಣ್ಣಿಸಿದರು.
ಕುಶಾಲನಗರದ ಕೇರಳ ಸಮಾಜದ ವತಿಯಿಂದ ನಡೆದ ಓಣಂ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇರಳಿಯರ ಸಂಸ್ಕೃತಿ ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಒಯ್ಯುವ ಆಚರಣೆ ಬಗ್ಗೆ ರಂಜನ್ ಶ್ಲಾಘಿಸಿದರಲ್ಲದೇ ಇಂದಿನ ಪೀಳಿಗೆಯ ಮಕ್ಕಳು ಗುರು ಹಿರಿಯರು ಹಾಗೂ ಪೋಷಕರಿಗೆ ಗೌರವ ಸಲ್ಲಿಸುವ ಸಂಸ್ಕೃತಿಯೊAದಿಗೆ ವಿದ್ಯಾವಂತರಾಗಿ ದೇಶಕ್ಕೆ ಗೌರವ ತನ್ನಿ ಎಂದು ಕರೆ ನೀಡಿದರು.
ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ್, ಕಳೆದು ಹೋಗುತ್ತಿರುವ ಹಿಂದೂ ಸಂಸ್ಕೃತಿ ಸಂಪ್ರದಾಯಗಳನ್ನು ರಕ್ಷಿಸುವ ಹೊಣೆಗಾರಿಕೆ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿದರು. ಕೇರಳ ಸಮಾಜ ಅಧ್ಯಕ್ಷ ರವೀಂದ್ರನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಮುರುಳಿ, ಕೇರಳ ಸಮಾಜದ ಉಪಾಧ್ಯಕ್ಷ ಕೆ.ಬಾಬು, ಕಾರ್ಯದರ್ಶಿ ರಾಬಿನ್, ನಿರ್ದೇಶಕರಾದ ರಾಯ್, ಎಂ.ಜೆ. ಪ್ರಕಾಶ್, ಸುಶೀಲಾ, ಎಂ.ಎಸ್. ಶಾಂತಿ, ಆನಂದ್, ರಂಜಿತ್ ಕುಮಾರ್, ಧನರಾಜ್, ಅಜಿತ್ ಧನರಾಜ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನಾ ಕೇರಳ ಸಮಾಜದ ಸ್ಥಾಪಕ ಅಧ್ಯಕ್ಷ ಕೆ. ಶಿವಾನಂದನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಓಣಂ ಸದ್ಯಕ್ಕೆ ಧನಸಹಾಯ ಮಾಡಿದ ದಾನಿಗಳು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾವೇಲಿ ವೇಷಧಾರಿಯಾಗಿ ಶ್ರೀಷಾ ಪ್ರೀತಂ ನಿರೂಪಿಸಿದರು. ಶ್ರೀಜಾ ಪ್ರಾರ್ಥಿಸಿದರು. ಕೆ.ವರದ ಸ್ವಾಗತಿಸಿದರು. ಈ ಸಂದರ್ಭ ಮಾವೇಲಿ ವೇಷಧಾರಿ ಗಮನ ಸೆಳೆದರು.