ಮಡಿಕೇರಿ, ಅ. ೬: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಶಿಶುಕಲ್ಯಾಣ ಸಂಸ್ಥೆಯಲ್ಲಿ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ನಮ್ಮ ದೇಶದ ಆಸ್ತಿ, ಮಕ್ಕಳು ಬಾಣಂತಿಯರು ಗರ್ಭಿಣಿಯರ ಆರೋಗ್ಯ ಉತ್ತಮ ವಾಗಿದ್ದರೆ ದೇಶವು ಆರೋಗ್ಯಯುತ ವಾಗಿರುತ್ತದೆ. ಆದ್ದರಿಂದ ಸರ್ಕಾರವು ಇಲಾಖೆ ಮುಖಾಂತರ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದು, ಪ್ರತಿ ತಿಂಗಳು ನಡೆಸಬೇಕೆಂದು ತಿಳಿಸಿದರು. ಮನೆಯಲ್ಲಿಯೇ ಸ್ವತಃ ಪೌಷ್ಟಿಕ ಆಹಾರ ತಯಾರಿಸಿ ಬಳಸಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ಇಲ್ಲದಂತೆ ಗಮನಹರಿಸ ಬೇಕಿದೆ ಎಂದರು. ನಿವೃತ್ತ ನ್ಯಾಯ ಮೂರ್ತಿ ವೇಣು ಗೋಪಾಲ ಅವರು ಅಧ್ಯಕ್ಷತೆಯಲ್ಲಿ ಬಡತನ ನಿರ್ಮೂಲನೆ ಸಮಿತಿ ರಚಿಸಿದ್ದು, ಅವರ ನಿರ್ದೇಶನದಂತೆ ತಾವು ಪ್ರತಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿಯೊಂದಿಗೆ ಪೌಷ್ಟಿ ಕಾಂಶಗಳ ಬಗ್ಗೆ ಪರಿಶೀಲಿಸಬೇಕಿದೆ, ಕೊಡಗು ಜಿಲ್ಲೆಯ ಅಂಗನವಾಡಿ ಕೇಂದ್ರಗಳು ಉತ್ತಮ ವಾಗಿ ಕಾರ್ಯ ನಿರ್ವಹಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು. ಸಮಾಜದ ಎಲ್ಲಾ ವರ್ಗದ ವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಮಾಜ ಸೇವೆ ಮಾಡಲು ಉತ್ತಮ ಅವಕಾಶಗಳಿವೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಣ್ ಮಾಸಾ ಚರಣೆಯ ರೂಪುರೇಷೆಗಳು ಉದ್ದೇಶ ವಿವರಿಸಿದರು. ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯ ಕ್ರಮದಲ್ಲಿ ಪೌಷ್ಟಿಕ ಆಹಾರ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು ೧೦೦ ಸ್ಪರ್ಧಿಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು. ಗಾಂಧಿನಗರ ಚೈತ್ರ, ಕಡಗದಾಳು ಅನಿಲ, ಚಟ್ಟಿಮಾನಿ ಸುಶಿ, ರಾಘವೇಂದ್ರ ದೇವಸ್ಥಾನ ಗೀತಾ, ದೇವಸ್ತೂರು ಶೈಲಾ, ಕಬಡಗೇರಿ ತಮ್ಜೀನಾ, ಸಂಪಾಜೆ ಕುಸುಮ, ಕರಡ ಈಶ್ವರಿ, ಇಂದಿರಾ ಆವಾಸ್ ನಿರ್ಮಲ, ಕೂವಲೇ ಕಾಡು ಸಫ್ರೀನ ವಿಜೇತ ವಿಜೇತರಾಗಿ ಬಹುಮಾನ ಮತ್ತು ಪ್ರಮಾಣ ಪತ್ರ ಪಡೆದರು. ಅಂಗನವಾಡಿ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಯಾಗಿ ಪ್ರಶಸ್ತಿಯನ್ನು ಬಾಡಗ-೧ ಅಂಗನವಾಡಿ ಕಾರ್ಯಕರ್ತೆ ಬಿ.ಬಿ. ಜಯಂತಿ, ಕನ್ನಡ ಅಂಗನವಾಡಿ ಕಾರ್ಯಕರ್ತೆ ಈಶ್ವರಿ ಕೆ.ಪಿ ಪಡೆದರು. ತಾಲೂಕು ಮಟ್ಟದ ಉತ್ತಮ ಸಹಾಯಕಿ ಪ್ರಶಸ್ತಿಯನ್ನು ಎನ್.ಜಿ. ಸಾವಿತ್ರಿ ಕೆ. ಬಾಡಗ ಅಂಗನವಾಡಿ, ಮಮತಾ ಸಿ.ಎಲ್. ಹಳೆ ತಾಲೂಕು ಅಂಗನ ವಾಡಿ, ಪಡೆದರು. ತಾ.ಪಂ. ಇಒ ಶೇಖರ್ ಅವರು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಸ್. ಸೀತಾಲಕ್ಷಿö್ಮÃ ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾದಂಡ ಸವಿತಾ ಕೀರ್ತನ್ ಬಹುಮಾನ ವಿತರಣೆ, ವಂದನಾರ್ಪಣೆ ನೆರವೇರಿಸಿದರು. ಶೀಲಾ ಸಾಹಿತ್ಯ ಶಿಕ್ಷಕರ ಯೋಜನಾಧಿಕಾರಿಗಳು ನಿರೂಪಿಸಿದರು.