ಮಡಿಕೇರಿ, ಅ. ೬: ಮಡಿಕೇರಿ ದಸರಾ ಅಂಗವಾಗಿ ಸಾಂಸ್ಕೃತಿಕ ಸಮಿತಿ ವತಿಯಿಂದ ತಾ. ೭ ರಂದು (ಇಂದು) ಸಂಜೆ ೬ ಗಂಟೆಗೆ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೋನಿ ರಿಯಾಲಿಟಿ ಶೋ ಸೂಪರ್ ಸ್ಟಾರ್ ಸಿಂಗರ್‌ನ ವಿಜೇತ ಕೇರಳದ ಆವಿರ್ಭವ್ ಮತ್ತು ತಂಡದಿAದ ಗಾನಸಂಭ್ರಮ ಆಯೋಜಿತವಾಗಿದೆ,

ಕುಶಾಲನಗರದ ಏಂಜಲ್ ವಿಂಗ್ಸ್ ತಂಡದಿAದ ನೃತ್ಯ ವೈವಿಧ್ಯ, ಕೊಡಗು ಪತ್ರಕರ್ತರ ಸಂಘ ತಂಡದಿAದ ಸಂಗೀತ ರಸಮಂಜರಿ, ನಾಟ್ಯನಿಕೇತನ ತಂಡದಿAದ ನೃತ್ಯ ಸಂಗಮ, ಕಿಂಗ್ಸ್ ಆಫ್ ಕೂರ್ಗ್ ತಂಡದಿAದ ನೃತ್ಯ ವೈವಿಧ್ಯ ಮತ್ತು ಇತರ ಸಾಂಸ್ಕೃತಿಕ ವೈವಿಧ್ಯಗಳು ಆಯೋಜಿತವಾಗಿದೆ

ಬೆಳಿಗ್ಗೆ ೧೦ ಗಂಟೆಯಿAದ ಕಾಫಿ ದಸರಾ ಅಂಗವಾಗಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕಾಫಿ ಮತ್ತು ಕೃಷಿಗೆ ಸಂಬAಧಿಸಿದAತೆ ನಡೆಯುವ ವಿಚಾರ ಸಂಕಿರಣದಲ್ಲಿ ಕೃಷಿ ರಂಗದ ಪರಿಣಿತರಾದ ಧರ್ಮರಾಜ್, ಡಾ ಕೆಂಚರೆಡ್ಡಿ, ಕೆ.ಕೆ. ವಿಶ್ವನಾಥ್, ನಡಿಕೇರಿಯಂಡ ಬೋಸ್ ಮಂದಣ್ಣ, ಖಲಿಸ್ತಾ ಡಿಸೋಜಾ, ಡಾ. ಶಿವಪ್ರಸಾದ್, ಮಿಲನಾ ಭರತ್ ಮಾಹಿತಿ ವಿನಿಮಯ ಮಾಡಲಿದ್ದಾರೆ,

ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜ್ ಮತ್ತು ಶಾಸಕರಾದ ಡಾ. ಮಂತರ್ ಗೌಡ ಜಿಲ್ಲೆಯ ೧೨ ಸಾಧಕ ಕೃಷಿಕರಿಗೆ ಸನ್ಮಾನ ನೆರವೇರಿಸಲಿದ್ದಾರೆ, ಬೆಳಗ್ಗಿನಿಂದಲೇ ಗಾಂಧಿ ಮೈದಾನದಲ್ಲಿನ ಕಾಫಿ ಮತ್ತು ಕೃಷಿಗೆ ಸಂಬAಧಿಸಿದ ೩೪ ಮಳಿಗೆಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.