ಮಡಿಕೇರಿ, ಅ. ೬: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ತಾ. ೫ ರ ಶನಿವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಚಿಣ್ಣರಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ರಾತ್ರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಹಲವು ಕಲಾತಂಡಗಳ ಚಿಣ್ಣರು ನೃತ್ಯ, ಗಾಯನ ಪ್ರಸ್ತುತಗೊಳಿಸಿದರು. ಹುಬ್ಬಳ್ಳಿಯ ಭೂಮಿಕ-ದೀಪಿಕಾ ಸಹೋದರಿಯರಿಂದ ಗಾನ ವೈವಿಧ್ಯ ಕಾರ್ಯಕ್ರಮ ನಡೆಯಿತು. ವಿವಿಧ ಹಾಡುಗಳನ್ನು ಹಾಡಿ ರಂಜಿಸಿದರು. ವಿಕ್ರಮ್ ಜಾದೂಗಾರ್ ಅವರಿಂದ ನಡೆದ ಜಾದೂ ಪ್ರದರ್ಶನ ಮಕ್ಕಳಾದಿಯಾಗಿ ಜನರನ್ನು ರಂಜಿಸಿತು. ಮಂಡ್ಯ ಬಳಿಯ ಬನ್ನೂರಿನ ಚಿಲಿಪಿಲಿ ಗೊಂಬೆ ತಂಡದಿAದ ನಡೆದ ನೃತ್ಯವೂ ಜನಮನ ಸೆಳೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಮಕ್ಕಳ ೨೧ ತಂಡದವರಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಡಿಕೇರಿಯ ಎಲ್ಲಾ ಅಂಗನವಾಡಿ ಪುಟಾಣಿಗಳು ಹೆಜ್ಜೆ ಹಾಕಿ ರಂಜಿಸಿದರು. ಬಾಲಕರ-ಬಾಲಕಿಯರ ಮಂದಿರದ ಮಕ್ಕಳಿಂದಲೂ ಕಾರ್ಯಕ್ರಮ ನಡೆಯಿತು. ಮಕ್ಕಳಿಂದ ಕರಾಟೆ ಇನ್ನಿತರ ಸಾಹಸ ಪ್ರದರ್ಶನ ನಡೆಯಿತು.