ಸೋಮವಾರಪೇಟೆ, ಅ. ೬: ೨೦೧೮-೧೯ನೇ ಸಾಲಿನ ಕೊಡಗು ಪ್ಯಾಕೇಜ್ ಯೋಜನೆಯಡಿ ರೂ. ೫೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಮದಲಾಪುರ-ಸೀಗೇಹೊಸೂರು ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಅವರು ಸಲ್ಲಿಸಿದ್ದ ದೂರಿಗೆ ಸಂಬAಧಿಸಿದAತೆ ತಾ. ೮ರಂದು (ನಾಳೆ) ಲೋಕಾಯುಕ್ತ ಸಂಸ್ಥೆಯಿAದ ತನಿಖೆ ನಡೆಯಲಿದೆ.
ಕೊಡಗು ಪ್ಯಾಕೇಜ್ ಯೋಜನೆಯಡಿ ತಾ. ೧೬.೦೧.೨೦೨೦ರಲ್ಲಿ ಕೈಗೆತ್ತಿಕೊಳ್ಳಲಾದ ಮದಲಾಪುರ-ಸೀಗೇಹೊಸೂರು ಕಾಂಕ್ರೀಟ್ ರಸ್ತೆ ನಿರ್ಮಾಣವಾದ ಎರಡು ವರ್ಷದಲ್ಲಿಯೇ ಅಲ್ಲಲ್ಲಿ ಬಿರುಕುಗಳು ಬಿಟ್ಟಿದ್ದು, ಮೇಲ್ನೋಟಕ್ಕೆ ಕಳಪೆಯಾಗಿರುವ ಬಗ್ಗೆ ಅನಿಲ್ ಅವರು ತಾ. ೧೭.೦೫.೨೦೨೩ರಂದು ದೂರು ಸಲ್ಲಿಸಿದ್ದರು.
ಇದೀಗ ಕರ್ನಾಟಕ ಲೋಕಾಯುಕ್ತದ ತಾಂತ್ರಿಕ ವಿಭಾಗದ ಮುಖ್ಯ ಅಭಿಯಂತರರ ಕಚೇರಿಯಿಂದ ಪ್ರತ್ರಿಕ್ರಿಯೆ ಬಂದಿದ್ದು, ತಾ. ೮ ರಂದು ಪೂರ್ವಾಹ್ನ ೧೧.೩೦ ಗಂಟೆಗೆ ಸಂಸ್ಥೆಯ ತನಿಖಾಧಿಕಾರಿ ಬಿ. ಪ್ರಸನ್ನ ಕುಮಾರ್ ಅವರ ತಂಡ ಸ್ಥಳ ತನಿಖೆ ನಡೆಸಲಿದೆ ಎಂದು ದೂರುದಾರ ಅನಿಲ್ ಅವರಿಗೆ ಮುಖ್ಯ ಅಭಿಯಂತರರ ಕಚೇರಿಯಿಂದ ಮಾಹಿತಿ ರವಾನೆಯಾಗಿದೆ.