ಗೋಣಿಕೊಪ್ಪಲು, ಅ ೬: ಸದಾ ಒತ್ತಡ, ಜಂಜಾಟ, ಮನೆ ಕೆಲಸ, ವೃತ್ತಿ ಹೀಗೆ ದಿನ ಕಳೆಯುತ್ತಿದ್ದ ಮಹಿಳೆಯರು ಇಂದು ಎಲ್ಲವನ್ನೂ ಮರೆತು ಸಂಭ್ರಮಿಸಿದರು. ಒಂದೆಡೆ ಆಟೋಟ, ಮತ್ತೊಂದೆಡೆ ರಂಗೋಲಿ ಬಿಡಿಸುವುದು, ಇನ್ನೊಂದೆಡೆ ನೃತ್ಯ ಗಾಯನದೊಂದಿಗೆ ಇತರರನ್ನು ಹುರಿದುಂಬಿಸುತ್ತಾ ಪರಸ್ಪರ ಮಾತುಕತೆಯ ಮೂಲಕ ಮಹಿಳಾ ದಸರಾಕ್ಕೆ ಕಳೆತಂದು ದಸರಾ ಜನೋತ್ಸವಕ್ಕೆ ಉತ್ಸಾಹ ತುಂಬಿದರು.

ಗೋಣಿಕೊಪ್ಪ ದಸರಾ ಅಂಗವಾಗಿ ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಕಾವೇರಿ ದಸರಾ ಸಮಿತಿಯಿಂದ ನಡೆದ ಮಹಿಳಾ ದಸರಾ ಜನಮನ ಸೆಳೆಯುವುದ ರೊಂದಿಗೆ ಮಹಿಳೆಯರ ಸಂಭ್ರಮಕ್ಕೆ ವೇದಿಕೆಯಾಯಿತು.

ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಹಿಳಾ ದಸರಾ ಸಮಿತಿ ಅಧ್ಯಕ್ಷ ಎಂ.ಎ. ಮಂಜುಳಾ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಮಹಿಳಾ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ರಂಗೋಲಿ ಸ್ಪರ್ಧೆ, ನೆಟ್‌ಬಾಲ್, ಹಗ್ಗಜಗ್ಗಾಟ, ಫ್ಯಾಷನ್ ಶೋ, ನೃತ್ಯ ಪ್ರದರ್ಶನ, ಮೋಜಿನ ಆಟೋಟ, ಸಾಮೂಹಿಕ ನೃತ್ಯ ಹಾಗೂ ಜಾನಪದ ಗೀತೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ದಕ್ಷಿಣ ಕೊಡಗಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

೩ಆರನೇ ಪುಟಕ್ಕೆ

ಸ್ಪರ್ಧೆಗಳ ವಿಜೇತರು

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಾದೇಶ ಸ್ಪೋರ್ಟ್ಸ್ ಕ್ಲಬ್ ಬಲಮುರಿ ಪ್ರಥಮ, ಮಾರಮ್ಮ ತಂಡ ಕೋತೂರು ದ್ವಿತೀಯ ಸ್ಥಾನ ಪಡೆಯಿತು. ರಂಗೋಲಿ ಸ್ಪರ್ಧೆಯಲ್ಲಿ ಸುಜಾತ ಇ.ಆರ್. (ಪ್ರ), ಸುಮಿತ್ರ (ದ್ವಿ), ರಜನಿ ವಿ.ವಿ. ಮತ್ತು ಲತಾಆರ್ (ತೃ), ಬಾಲ್ ಇನ್ ಬಾಸ್ಕೆಟ್ ಸ್ಪರ್ಧೆಯಲ್ಲಿ ಆಶಿಕಾ (ಪ್ರ), ಮಾಲ (ದ್ವಿ), ಕೈಕಟ್ಟಿ ಸೇಬನ್ನು ತಿನ್ನುವ ಸ್ಪರ್ಧೆಯಲ್ಲಿ ಮೊನಿಕಾ ಲಿಖಿತ್ (ಪ್ರ), ಶಶಿ (ದ್ವಿ) ವಿಜೇತರಾದರು.

ಜಾನಪದ ಗೀತೆ ಸ್ಪರ್ಧೆಯಲ್ಲಿ ವಿ ಲವಿಂಗ್ ಫ್ರೆಂಡ್ಸ್ ತಂಡ ವೀರಾಜಪೇಟೆ (ಪ್ರ), ನಿಸರ್ಗ ಕಲಾತಂಡ ಪೊನ್ನಂಪೇಟೆ (ದ್ವಿ), ಇಂಚರ ಕಲಾ ತಂಡ (ತೃ), ಸಾಮೂಹಿಕ ನೃತ್ಯ ಸ್ಪರ್ಧೆಯಲ್ಲಿ ಅನುಬಂಧ ನೃತ್ಯ ತಂಡ (ಪ್ರ), ನಿಸರ್ಗ ಕಲಾ ತಂಡ (ದ್ವಿ), ಸ್ಫೂರ್ತಿ ವಕೀಲರ ತಂಡ (ತೃ), ಫ್ಯಾಶನ್ ಶೋನಲ್ಲಿ ರಶ್ಮಿ ರಾಜಾ (ಪ್ರ), ಪಲ್ಲವಿ ಸತೀಶ್ (ದ್ವಿ), ಆಶಿಕಾ (ತ್ರ) ಬಹುಮಾನ ಪಡೆದುಕೊಂಡರು. (ಮೊದಲ ಪುಟದಿಂದ)

ಸಾಧಕರಿಗೆ ಸನ್ಮಾನ

ಹಿರಿಯರಾದ ಕರ್ನಾಟಕ ರಾಜ್ಯ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ವಿಜೇತರು, ದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಶಿಕ್ಷಕಿಯರಾದ ಟಿ.ಕೆ ವಾಮನ, ಕೆ.ಡಿ. ಕವಿತಾ, ಜಾನ್ಸಿ ಹಾಗೂ ವೀರಾಜಪೇಟೆಯ ಉದ್ಯಮಿ ಪೂಜಾ ಸಜೇಶ್, ಲೇಖಕಿ ಕೆ.ಟಿ. ವಾತ್ಸಲ್ಯ, ಅಂಗನವಾಡಿ ಕಾರ್ಯಕರ್ತೆ ಲತಾ ಅವರುಗಳನ್ನು ಮಹಿಳಾ ದಸರಾ ಅಂಗವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ದಸರಾ ಸಮಿತಿಯ ಪದಾಧಿಕಾರಿ ಗಳಾದ ಚಂದನ ಮಂಜುನಾಥ್, ಶಿಕ್ಷಕಿ ಓಮನ, ವರಲಕ್ಷಿö್ಮ, ಗೀತಾ ನಾಯ್ಡು, ಥೆರೆಸಾ, ಕಡೆಮಾಡ ಕುಸುಮ, ಯಾಸ್ಮಿನ್, ಧನಲಕ್ಷಿö್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- ಹೆಚ್.ಕೆ. ಜಗದೀಶ್