ಮಡಿಕೇರಿ, ಅ. ೬: ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ೭೯ಎ, ೭೯ಬಿ ದುರುಪಯೋಗವಾಗು ತ್ತಿದ್ದು, ಬೃಹತ್ ಭೂಪರಿವರ್ತನೆ ಮೂಲಕ ಉದ್ಯಮಪತಿಗಳು ಕೊಡವ ಲ್ಯಾಂಡ್‌ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆರೋಪಿಸಿದರು.
ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಸ್ಥಗಿತಗೊಳಿಸ ಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ತಿತಿಮತಿಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಸರ್ಕಾರ, ಆದಾಯವನ್ನಷ್ಟೇ ಗುರಿ ಮಾಡಿಕೊಂಡು ಪವಿತ್ರ ಕೊಡವಲ್ಯಾಂಡ್ ಅನ್ನು ಬೃಹತ್ ಭೂಮಾಫಿಯಾಗಳಿಗೆ ಮೋಜು, ಮಸ್ತಿಗಾಗಿ ಬಿಟ್ಟುಕೊಡುತ್ತಿದೆ ಎಂದು ಎನ್.ಯು. ನಾಚಪ್ಪ ಆರೋಪಿಸಿದರು. ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗೆ ಕೇವಲ ಹಣವಷ್ಟೇ ಬೇಕಾಗಿದೆ. ಮಾಫಿಯಾಗಳು ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕೇಂದ್ರಗಳು ಮತ್ತು ಕ್ರೀಡೋತ್ಸವಗಳಿಗೆ ದೇಣಿಗೆ ನೀಡಿ ಜನರ ಗಮನವನ್ನು ಬೇರೆಡೆಗೆ ಸೆಳೆದು ಕರ್ನಾಟಕ ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ. ಪರಿಸರದ ಮೇಲೆ ದಾಳಿ ಮಾಡಿ ಅನಾರೋಗ್ಯಕರ ಪರಿಸ್ಥಿತಿಯನ್ನು ಸೃಷ್ಟಿಸಿ, ತಮ್ಮ ತಪ್ಪನ್ನು ಮುಚ್ಚಿಹಾಕಲು ಸಾಮಾಜಿಕ ಕಳಕಳಿಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ``ಕೊಡವ ಲ್ಯಾಂಡ್'' ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ತಾ.೯ರಂದು ಅಮ್ಮತ್ತಿ, ನಂತರದ ದಿನಗಳಲ್ಲಿ ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು. ನಾಚಪ್ಪ ಇದೇ ಸಂದರ್ಭ ತಿಳಿಸಿದರು.
ಜಾಗೃತಿಯಲ್ಲಿ ಮಾಂಗೇರ ಪದ್ಮಿನಿ, ಚಿಂಡಮಾಡ ಸರಿತಾ, ಕೂತಂಡ ವಾಣಿ, ಬೊಳ್ತಂಡ ಮೀನಾ, ಕಳ್ಳಿಚಂಡ ಪವಿತ, ಗಾಂಡAಗಡ ಸುಂದರಿ, ಕೊಚ್ಚೆರ ಸ್ವಾತಿ, ಪಾಲೆಂಗಡ ಗಂಗಮ್ಮ, ಪಾಲೆಂಗಡ ತಂಗಮ್ಮ, ಪಾಲೆಂಗಡ ಶಮ್ಮಿ, ಮನೆಯಪಂಡ ಮನು, ಚೆಕ್ಕೇರ ಕೃತಿಕಾ, ಮದ್ರೀರ ಕೃತಿಕಾ, ಮದ್ರೀರ ಲೀನಾ, ಕೊಚ್ಚೆರ ಚಿತ್ರ, ಪಾಲೆಂಗಡ ಮನು ನಂಜಪ್ಪ, ಚೆಪ್ಪುಡಿರ ಕಾರ್ಯಪ್ಪ, ಬೊಳ್ಳಿಮಾಡ ವಸಂತ ನಂಜಪ್ಪ, ಚೆಪ್ಪುಡಿರ ಮಾಚು, ಬೋಳ್ತಂಡ ಪ್ರಕಾಶ್, ಮಾಂಗೇರ ಪೊನ್ನಪ್ಪ, ಚೆಪ್ಪುಡಿರ ಬೋಪಣ್ಣ, ಚೆಪ್ಪುಡಿರ ರಾಮಕೃಷ್ಣ, ಚೆಪ್ಪುಡಿರ ಸೋಮಯ್ಯ, ಗುಂಬೀರ ಪ್ರಕಾಶ್, ಮದ್ರೀರ ಉಮೇಶ್, ಮದ್ರೀರ ಭವಿನ್ ಬೋಪಯ್ಯ, ಮನೆಯಪಂಡ ಬೋಪಣ್ಣ, ಮನೆಯಪಂಡ ಮಹೇಶ್, ಕೊಣಿಯಂಡ ಸಂಜು, ಕೊಕ್ಕಂಡ ದಿನೇಶ್, ಮನೆಯಪಂಡ ಮೊಣ್ಣಪ್ಪ, ಗಾಂಡAಗಡ ಡಾಲು, ಗಾಂಡAಗಡ ಕುಟ್ಟಪ್ಪ, ಚೆಕ್ಕೇರ ತಮ್ಮಯ್ಯ, ಮನೆಯಪಂಡ ಅಯ್ಯಪ್ಪ, ಚೆಕ್ಕೇರ ಬೆಳ್ಯಪ್ಪ, ಮನೆಯಪಂಡ ಭೀಮಯ್ಯ, ಚಿಂಡಮಾಡ ಬಿದ್ದಪ್ಪ, ಮನೆಯಪಂಡ ರತ್ನ, ಕಳ್ಳಿಚಂಡ ಅಶ್ವಥ್, ಸಣ್ಣುವಂಡ ಜಯ, ಮದ್ರೀರ ರಂಜು ಚೆಂಗಪ್ಪ, ಚೆಪ್ಪುಡಿರ ರಂಜಿ, ಕಿರಿಯಮಾಡ ಶೆರಿನ್, ಮೂಕೊಂಡ ದಿಲೀಪ್, ಅಜ್ಜಿಕುಟ್ಟಿರ ಲೋಕೇಶ್, ಚಂಬAಡ ಜನತ್, ಚಟ್ಟಂಗಡ ಸಜನ್ ಸೋಮಣ್ಣ, ಮದ್ರೀರ ತಾಲಿನ್ ತಿಮ್ಮಯ್ಯ, ಪಾರ್ವಂಗಡ ಮುತ್ತಣ್ಣ, ಗಾಂಡAಗಡ ಗಣಪತಿ, ಸಣ್ಣುವಂಡ ಮುತ್ತಪ್ಪ, ಸಣ್ಣುವಂಡ ಮಂದಣ್ಣ, ಗಾಂಡAಗಡ ಡಿಕ್ಸ್, ಕಾಯಪಂಡ ಕಾವೇರಪ್ಪ, ಮಾಣಿಪಂಡ ರಾಮು ನಂಜಪ್ಪ, ಕಾಣತಂಡ ನವೀನ್, ಮುಕ್ಕಾಟಿರ ಸೋಮಯ್ಯ, ಮದ್ರೀರ ಚೋಟು, ಪಾರ್ವಂಗಡ ಸುಗುಣ ಪೊನ್ನಪ್ಪ, ಚೇಂದ್ರಿಮಾಡ ಕಿಶನ್ ಚೆಂಗಪ್ಪ, ಚೆಪ್ಪುಡಿರ ಕಿರಣ್, ನಾಯಕಂಡ ರಮೇಶ್ ಪಾಲ್ಗೊಂಡಿದ್ದರು.