ಮಡಿಕೇರಿ, ಅ. ೬: ಮಡಿಕೇರಿ ರೋಟರಿ ಸಂಸ್ಥೆ ವತಿಯಿಂದ ಅ.೨೦ರಂದು ನಗರದ ಜೂನಿಯರ್ ಕಾಲೇಜಿನಲ್ಲಿ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುದಯ್ ನಾಣಯ್ಯ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಚೆಸ್ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಮತ್ತು ಮಕ್ಕಳಲ್ಲಿ ಚೆಸ್ ಆಟದ ಬಗ್ಗೆ ಆಸಕ್ತಿ ಮುಡಿಸುವ ನಿಟ್ಟಿನಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ೧೦ ವರ್ಷದೊಳಗಿನ ಮತ್ತು ೧೬ ವರ್ಷದೊಳಗಿನ ಮಕ್ಕಳ ವಿಭಾಗ ಹಾಗೂ ಸಾರ್ವಜನಿಕರಿಗೆ ಮುಕ್ತ ಚೆಸ್ ಪಂದ್ಯಾಟ ನಡೆಯಲಿದೆ. ಅ.೧೯ರಂದು ೧೦ ವರ್ಷದೊಳಗಿನ ಮಕ್ಕಳಿಗೆ ಚೆಸ್ ತರಬೇತಿ ನೀಡಲಾಗುವುದು. ಅ.೨೦ರಂದು ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿಯಿತ್ತರು.

ಓಪನ್ ಕ್ಯಾಟಗರಿಯ ಸ್ಪರ್ಧೆಗೆ ಮಾತ್ರ ಬಹುಮಾನ ನೀಡಲಾಗುತ್ತದೆ. ಪ್ರಥಮ ೫ ಸಾವಿರ, ದ್ವಿತೀಯ, ೪ ಸಾವಿರ, ತೃತೀಯ ೩೫೦೦, ನಾಲ್ಕನೇ ಸ್ಥಾನಕ್ಕೆ ೩ ಸಾವಿರ, ಐದನೇ ಸ್ಥಾನಕ್ಕೆ ೨೫೦೦, ೬ನೇ ಸ್ಥಾನಕ್ಕೆ ೨೦೦೦, ೭ನೇ ಸ್ಥಾನಕ್ಕೆ ೧೫೦೦, ೮ನೇ ಸ್ಥಾನಕ್ಕೆ ೧ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು ಹೆಚ್ಚಿನ ಮಾಹಿತಿಗೆ ೯೮೪೫೦೦೬೩೧೩, ೯೪೪೮೨೧೭೨೩೫ ಸಂಖ್ಯೆಗೆ ಕರೆ ಮಾಡಬಹುದು.

ಸುದ್ದಿಗೋಷ್ಠಿಯಲ್ಲಿ ಪ್ರಮುಖ ರಾದ ಕೆ.ಸಿ ಕಾರ್ಯಪ್ಪ, ಪ್ರಿನ್ಸ್ ಪೊನ್ನಣ್ಣ, ಸಿ.ಟಿ ಮಂದಣ್ಣ ಹಾಜರಿದ್ದರು.