ಕೂಡಿಗೆ, ಅ. ೬: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಸಹಕಾರ ತರಬೇತಿ ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಸಹಕಾರ ಸಂಘದ ವಿಷಯಗಳ ಕುರಿತಾದ ಸಂವಾದ ಕಾರ್ಯಕ್ರಮ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅವರು ಸಹಕಾರ ಸಂಘದ ಬೆಳೆವಣಿಗೆ, ಆಡಳಿತ ಮಂಡಳಿಯ ಮುಖೇನ ಸಂಘದ ಅಭಿವೃದ್ಧಿಗೆ ಹಮ್ಮಿಕೊಳ್ಳುವ ವಿವಿಧ ಯೋಜನೆ, ಸಹಕಾರ ತತ್ವದ ನಿಯಮಾನುಸಾರ ಕೈಗೊಳ್ಳುವ ವಿಷಯಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು. ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಸಹಕಾರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಸಹಕಾರ ಸಂಘದ ಅಭಿವೃದ್ಧಿಗೆ ಪೂರಕವಾದ ಪ್ರಶ್ನೆಗಳಿಗೆ ಮತ್ತು ಸಹಕಾರ ಇಲಾಖೆಗೆ ಸಂಬAಧಿಸಿದAತೆ ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾಹಿತಿ ನೀಡಿದರು.
ನಿರ್ದೇಶಕರಾದ ನಾಗರಾಜು, ಕೆ.ಪಿ. ರಾಜು, ಕೆ.ಬಿ. ರಾಮಚಂದ್ರ, ಜಯಶ್ರೀ, ಎಸ್.ಎಸ್. ಕೃಷ್ಣ, ಜಿಲ್ಲಾ ಸಹಕಾರ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ. ರೇಣುಕಾ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪಿ. ಮೀನಾ, ಕೇಂದ್ರದ ಉಪನ್ಯಾಸಕ ಸಂಜಯ್ ಸೇರಿದಂತೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಹಾಜರಿದ್ದರು.