ಮಡಿಕೇರಿ, ಅ. ೬ : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಮಂಟಪ ಸಮಿತಿ ೬೧ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಕೀಜನ ಪುರುಷೋತ್ತಮ್ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಮಂಟಪದಲ್ಲಿ ಸಿಂಧೂರ ಗಣಪತಿ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಮಡಿಕೇರಿ ಪರ್ಫೆಕ್ಟ್ ಇವೆಂಟ್‌ನ ಪ್ರಮೋದ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ನಂದಿ ಸೌಂಡ್ಸ್ನವರು ಧ್ವನಿವರ್ಧಕ ಒದಗಿಸಲಿದ್ದು, ಮಡಿಕೇರಿಯ ಮಧು, ಆಧಿ ಸ್ಟುಡಿಯೋ ಲೈಟಿಂಗ್ ವ್ಯವಸ್ಥೆ ಮಾಡಲಿದ್ದಾರೆ. ೧೬ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಪ್ರಜ್ವಲ್, ಚಿಂತನ್, ಮೋಹಿತ್ ತಂಡ ಕಲಾಕೃತಿಗಳನ್ನು ರಚಿಸಲಿದೆ. ಕಲಾಕೃತಿಗಳಿಗೆ ಚಲನವಲನವನ್ನು ಮಡಿಕೇರಿಯ ರಾಘವೇಂದ್ರ ಮತ್ತು ತಂಡ ನೀಡಲಿದೆ. ಅಶೋಕಪುರದ ಸುನಿಲ್ ಮತ್ತು ತಂಡ ಟ್ರಾö್ಯಕ್ಟರ್ ಸೆಟ್ಟಿಂಗ್ಸ್ ಮಾಡಲಿದೆ. ವಿಪಿನ್ ಮತ್ತು ತಂಡ ಪ್ಲಾಟ್‌ಫಾರಂ ನಿರ್ಮಾಣ ಮಾಡಲಿದೆ. ಒಟ್ಟು ೧೬ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು ಎಂದು ಪುರುಷೋತ್ತಮ್ ತಿಳಿಸಿದ್ದಾರೆ. -ಉಜ್ವಲ್ ರಂಜಿತ್