ಕಣಿವೆ, ಅ. ೬: ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ತಮಿಳು ನಾಡು ಇಂಜಿನಿಯರಿAಗ್ ವಿದ್ಯಾರ್ಥಿಯೊಬ್ಬ ಗುಡ್ಡೆಹೊಸೂರಿನ ರಾಷ್ಟಿçÃಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ನಡೆದಿದೆ.

ತಮಿಳುನಾಡು ರಾಜ್ಯದ ನಾಮಕ್ಕಲ್ ಜಿಲ್ಲೆಯ ಪುಲಿಯನಕಾಡು ನಿವಾಸಿ ಅಮುಥನ್ ಎಂಬವರ ಪುತ್ರ ಅಗಸ್ಟಿನ್ ದಾಸ್ ( ೨೨) ಮೃತ ವಿದ್ಯಾರ್ಥಿ.

ನಾಮಕ್ಕಲ್‌ನ ಎಕ್ಸೆಲ್ ಇಂಜಿನಿ ಯರಿಂಗ್ ಕಾಲೇಜಿನ ಅಂತಿಮ ವರ್ಷದ ಬಿಇ ವ್ಯಾಸಾಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿ ಕಾಲೇಜಿನ ೭೦ ಮಂದಿ ಖಾಸಗಿ ಬಸ್‌ನಲ್ಲಿ ಸ್ನೇಹಿತರೊಡಗೂಡಿ ಕೊಡಗು ಜಿಲ್ಲೆಗೆ ಶನಿವಾರ ರಾತ್ರಿ ಪ್ರವಾಸಕ್ಕೆಂದು ಬಂದಿದ್ದರು.

ಗುಡ್ಡೆಹೊಸೂರಿನ ರಾಷ್ಟಿçÃಯ ಹೆದ್ದಾರಿಯಲ್ಲಿರುವ ಖಾಸಗಿ ಹೊಟೇಲ್ ಬಳಿ ಬಸ್ ನಿಲ್ಲಿಸಲಾಗಿತ್ತು.

ಬಸ್‌ನಿಂದ ಕೆಳಗಿಳಿದ ಅಗಸ್ಟಿನ್ ದಾಸ್ ಹೆದ್ದಾರಿಯ ಮತ್ತೊಂದು ಬದಿಯಲ್ಲಿನ ಕ್ಯಾಂಟೀನ್ ಒಂದರ ಬಳಿ ಚಹಾ ಸೇವಿಸಿ ರಸ್ತೆ ದಾಟುತ್ತಿದ್ದ ಸಂದರ್ಭ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಲ್ಲೇ ಹೆದ್ದಾರಿ ಅಂಚಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಎಸೆಯಲ್ಪಟ್ಟ ಅಗಸ್ಟಿನ್ ದೇಹ ಅಪ್ಪಳಿಸಿದ ರಭಸಕ್ಕೆ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ರಕ್ತಸ್ರಾವದೊಂದಿಗೆ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಮೃತಪಟ್ಟ ಬಗ್ಗೆ ಕುಶಾಲನಗರ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಅಪರಿಚಿತ ಕಾರಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಸಂಚಾರಿ ಠಾಣೆ ಉಪನಿರೀಕ್ಷಕ ಗಣೇಶ್ ತಿಳಿಸಿದ್ದಾರೆ.

ಮೃತ ಅಗಸ್ಟಿನ್ ದಾಸ್ ಶವವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಭಾನುವಾರ ವಾರಸುದಾರರಿಗೆ ಒಪ್ಪಿಸಲಾಯಿತು.