ಸೋಮವಾರಪೇಟೆ, ಅ. ೭: ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೌರವ ವಂಶದ ದೃತರಾಷ್ಟçನ ನೂರು ಪುತ್ರರು ಹಾಗೂ ಓರ್ವ ಮಗಳ ಹೆಸರುಗಳನ್ನು ೫೪ ಸೆಕೆಂಡುಗಳಲ್ಲಿ ಹೇಳಿ ೨೦೨೪ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ ಕ್ರಿಯೇಟಿವ್ ಅಕಾಡೆಮಿಯ ೪ನೇ ತರಗತಿ ವಿದ್ಯಾರ್ಥಿನಿ ಹೆಚ್. ಪ್ರೇಕ್ಷ ಅವರನ್ನು ಸನ್ಮಾನಿಸಲಾಯಿತು.
ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ವಿದ್ಯಾ ನರ್ಸಿಂಗ್ ಹೋಮ್‌ನ ವ್ಯವಸ್ಥಾಪಕ ಸುಲೈಮಾನ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್, ಸಾಹಿತಿ ಕಾಜೂರು ಸತೀಶ್, ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಜವರಪ್ಪ, ನ.ಲ. ವಿಜಯ, ಎಲ್.ಎಂ. ಪ್ರೇಮ ಮತ್ತು ವಿದ್ಯಾರ್ಥಿನಿಯ ಪೋಷಕರಾದ ಅಬ್ಬೂರುಕಟ್ಟೆ ಗ್ರಾಮದ ಸಿಂಧು ಹಾಗೂ ಹರೀಶ್ ಇದ್ದರು.