ಮಡಿಕೇರಿ, ಅ. ೭: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಚೊಚ್ಚಲ ಬಾರಿಗೆ ಆಯೋಜಿಸಿದ್ದ ಕಾಫಿ ದಸರಾ ಕಾರ್ಯಕ್ರಮದ ೨ನೇ ದಿನ ಸೋಮವಾರದಂದು ಕಾಫಿ ಬೆಳೆ ಸೇರಿದಂತೆ ಪೂರಕ ವಿಚಾರಗಳ ಕುರಿತು ವಿಚಾರ ಸಂಕಿರಣ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿ ಕಾಫಿ ಕೃಷಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಬೆಳೆಗಾರರಿಗೆ ಬೆಳಕು ಚೆಲ್ಲಿದರು. ಮಣ್ಣಿನಿಂದ ಮಾರುಕಟ್ಟೆ ತನಕದ ವಿಷಯಗಳ ಬಗ್ಗೆ ಅರ್ಥೈಸಿ ಕೊಳ್ಳುವಂತೆ ಕಾಫಿ ಬೆಳೆಗಾರರಿಗೆ ಸಂಪನ್ಮೂಲ ವ್ಯಕ್ತಿಗಳು ಕರೆ ನೀಡಿದರು.
ಸಮತೋಲನ ಪೌಷ್ಟಿಕಾಂಶದೊAದಿಗೆ ಗಿಡಗಳನ್ನು ನಿರ್ವಹಿಸಿ
ಸಮತೋಲನ ಪೌಷ್ಟಿಕಾಂಶ ದೊಂದಿಗೆ ೨ನೇ ಹಂತದ ಪೌಷ್ಠಿಕಾಂಶಗಳನ್ನು ಕಾಫಿ ಗಿಡಕ್ಕೆ ಒದಗಿಸುವುದರೊಂದಿಗೆ ಗಿಡಗಳನ್ನು ನಿರ್ವಹಿಸುವುದರಿಂದ ಎಕರೆಗೆ ೫೦ ಚೀಲ ಕಾಫಿಯನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ ಎಂದು ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿರುವ ಸಕಲೇಶಪುರದ ಕಾಫಿ ಬೆಳೆಗಾರ ಧರ್ಮರಾಜು ವಿಶ್ವಾಸದಿಂದ ನುಡಿದರು.
ಕಾಫಿ ವಿಶೇಷ ಬೆಳೆಯಾಗಿದ್ದು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಜನರ ಜೀವನ ಕ್ರಮಕ್ಕೆ ಕಾಫಿ ಬೆಳೆ ಸಹಕಾರಿಯಾಗಿದೆ. ಕಾಫಿ ಕೃಷಿ ಸ್ಥಿರತೆ ಕಾಯ್ದುಕೊಳ್ಳುವುದರಿಂದ ದೃಢ ಬದುಕಿಗೆ ಸಹಕಾರಿಯಾಗಿದೆ. ಮಣ್ಣಿನ ಕುರಿತು ಹೆಚ್ಚಿನ ಗಮನ ಹರಿಸಬೇಕು. ಮಣ್ಣಿನ ಕುರಿತು ರೈತರು ಅರ್ಥ ಮಾಡಿಕೊಳ್ಳಬೇಕು. ಮಣ್ಣು ಪರೀಕ್ಷೆ ಕಾಲಕಾಲಕ್ಕೆ ಮಾಡಿಸಬೇಕು. ಮಣ್ಣಿನ ರಸಸಾರದಡಿ ಗೊಬ್ಬರ ಹಾಕಬೇಕು. ೬.೫ ರಿಂದ ೭ ಗುಣಮಟ್ಟದಲ್ಲಿ ಮಣ್ಣಿನ ರಸಸಾರ ಇದ್ದರೆ ಉತ್ತಮ ಬೆಳೆ ಬೆಳೆಯಬಹುದು. ಹೆಚ್ಚುವರಿ ಫಸಲಿಗೆ ತಳಿಯ ಆಯ್ಕೆ ಉತ್ತಮವಾಗಿರಬೇಕು. ನೀರು, ಗಾಳಿ, ಬೆಳಕಿನ ಬಗ್ಗೆ ರೈತರು ಅರ್ಥ ಮಾಡಬೇಕು. ಪೌಷ್ಠಿಕಾಂಶದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರು ವಿಷ ರಹಿತ ಆಹಾರ ಉತ್ಪಾದನೆ ಮಾಡುವತ್ತ ಕಾಳಜಿ ವಹಿಸಬೇಕು. ಗೊಬ್ಬರ, ರಾಸಾಯನಿಕ ವಸ್ತು ಹೆಚ್ಚಾದರೂ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೈಟ್ರೋಜನ್ ಅನ್ನು ಅತೀ ಕಡಿಮೆ ಬಳಕೆ ಮಾಡಬೇಕು. ‘ಫಾಸ್ಪರಸ್’ ಭೂಮಿಯಲ್ಲಿ
(ಮೊದಲ ಪುಟದಿಂದ) ಇರುವ ಹಿನ್ನೆಲೆ ಅದರ ರಾಸಾಯನಿಕ ಅಂಶವನ್ನು ಮಿತವಾಗಿ ಬಳಕೆ ಮಾಡಬೇಕು. ೨ನೇ ನ್ಯೂಟ್ರಿಯಂಟ್ ವಾರ್ಷಿಕ ೫ ಬಾರಿ ಹಾಕಬೇಕು. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಸಲ್ಫರ್, ಪೊಟೇಷಿಯಂ, ಮೆಗ್ನೀಷಿಯಂ ಬಗ್ಗೆ ಗಮನ ಅತ್ಯಗತ್ಯ ಎಂದರು.
ಗಿಡಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಹಾಕುವುದು ತಪ್ಪು. ಇದರಿಂದ ಬೇರಿನ ಮೂಲಕ್ಕೆ ಪೆಟ್ಟು ಬೀಳುತ್ತದೆ. ಲಾಭದಾಯಕ ಕೃಷಿಗೆ ನೈಸರ್ಗಿಕ ರಾಸಾಯನಿಕ ಬಳಕೆ ಮಾಡಬೇಕು. ಆದರೆ, ಇದಕ್ಕೆ ಖರ್ಚು ಹೆಚ್ಚಿರುತ್ತದೆ. ರೋಬಸ್ಟ ತಳಿಯಲ್ಲಿ ಎಕರೆಗೆ ೧೦೦ ಚೀಲ ಕಾಫಿ ಬೀಜ ಪಡೆಯುವ ಸಾಧ್ಯತೆ ಇದೆ. ನೆರಳಿನ ನಿರ್ವಹಣೆ ಮಾಡಬೇಕು. ತೋಟದಲ್ಲಿ ಕಳೆನಾಶಕ ನಿಷೇಧ ಮಾಡಿ. ಕಳೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ನೀರಾವರಿ ಸಂದರ್ಭ ರಾಸಾಯನಿಕ ಬಳಸಬೇಡಿ ಎಂದರು.
ಮರಗಳ ಎಲೆಗಳೇ ಹೆಚ್ಚಿನ ಗೊಬ್ಬರದ ಅಂಶಗಳನ್ನು ಹೊಂದಿದ್ದು, ಕಾಫಿ ಬೆಳೆಗಳಿಗೆ ಮರಗಳ ಅವಶ್ಯಕತೆ ಇದೆ. ದೇಶದಲ್ಲಿ ಇದರ ಯಾವುದೇ ಬೆಳೆಗಳಿಗಿಂತ ಕಾಫಿಗೆ ಮಾತ್ರ ಸ್ಥಿರತೆ ಇದೆ ಎಂದು ಅಭಿಪ್ರಾಯಪಟ್ಟ ಧರ್ಮ ರಾಜು, ಕಾಫಿ ತೋಟಗಳನ್ನು ಬಿಟ್ಟು ಇತರೆ ಉಪಕೃಷಿಗಳತ್ತ ಗಮನಹರಿಸಿದರೆ ನಿರಂತರ ಆದಾಯವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಫಿ ಗಿಡಗಳಿಗೆ ಸೂಕ್ಷö್ಮ ಪೋಷಕಾಂಶಗಳನ್ನು ಸಿಂಪಡಿಸಬೇಕು ಎಂದು ಕರೆ ನೀಡಿದರು.
ಮಾರುಕಟ್ಟೆ ಅರ್ಥೈಸಿಕೊಳ್ಳಿ
ಕೊಡಗು ಪ್ಲಾಂರ್ಸ್ ಅಸೋಸಿಯೇಷನ್ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಕೆ. ವಿಶ್ವನಾಥ್ ಮಾತನಾಡಿ, ಬೇರೆ ಬೇರೆ ವಿಚಾರಗಳಿಂದ ಕಾಫಿ ದರ ಬದಲಾವಣೆಗೊಳ್ಳುತ್ತದೆ. ಸುಸ್ಥಿರ ಬೆಲೆ ನಿರೀಕ್ಷೆ ಮಾಡುವುದು ಬೆಳೆಗಾರರಿಗೆ ಸಾಧ್ಯವಿಲ್ಲ. ಆದರೆ, ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡರೆ ಲಾಭವನ್ನು ಪಡೆಯಲು ಸಾಧ್ಯವಿದೆ. ಲಂಡನ್ ಮಾರುಕಟ್ಟೆಯಲ್ಲಿ ಡಾಲರ್ ರೂಪದಲ್ಲಿ ಕಾಫಿ ಬೆಳೆಗೆ ದರ ನಿಗದಿಯಾಗುತ್ತದೆ. ಭಾರತ ದೇಶದ ಕಾಫಿಗೂ ಮನ್ನಣೆ ದೊರೆತಿದ್ದು, ಬೇಡಿಕೆಯೂ ಇದೆ. ದರ ಏರಿಳಿತಕ್ಕೆ ಡಾಲರ್-ರೂಪಾಯಿ ನಡುವಿನ ಏರಿಳಿತವೂ ಕಾರಣವಾಗಿರುತ್ತದೆ. ಇಳುವರಿ ಕಡಿಮೆಯಿದ್ದಾಗ ಬೆಲೆ ಹೆಚ್ಚಾಗುವುದು ಸಾಮಾನ್ಯ ಎಂದರು.
ಮೀನುಗಾರಿಕೆ ಸುಲಭ - ಆರ್ಥಿಕ ಸಬಲೀಕರಣಕ್ಕೆ ಪೂರಕ
ತೋಟಗಳಲ್ಲಿ ಕಡಿಮೆ ಬಂಡವಾಳದಲ್ಲಿ ಮೀನುಗಾರಿಕೆ ಆರಂಭಿಸುವ ವಿಪುಲ ಅವಕಾಶಗಳಿವೆ. ಇದು ಸುಲಭ ಕೃಷಿಯಾಗಿದ್ದು, ಆರ್ಥಿಕ ಸಬಲೀಕರಣಕ್ಕೂ ಕಾರಣವಾಗುತ್ತದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಭರತ್ ಹೇಳಿದರು.
ಕಾಫಿ ಬೆಳೆಗಾರರು ಲಾಭದಾಯಕ ಉಪ ಕಸುಬಾಗಿ ಮೀನುಗಾರಿಕೆ ಮಾಡಬಹುದು. ಜಿಲ್ಲೆಯಲ್ಲಿ ೪ ಸಾವಿರ ಮೀನು ಕೃಷಿಕರು ಇದ್ದಾರೆ. ಕೊಳದ ಲಭ್ಯತೆ ಇದ್ದರೆ ಬಂಡವಾಳ ಕಡಿಮೆ ಇರುತ್ತದೆ. ಸರಕಾರಿ ಯೋಜನೆ ಬಳಸಿಕೊಂಡು ಕೃಷಿ ಹೊಂಡ ತೆಗೆಯಬಹುದು. ಕೆಲಕಾಲ ಮೀಸಲಿಟ್ಟು, ನಿರ್ವಹಣೆ ಮಾಡಿದರೆ ಉತ್ತಮ ಆದಾಯ ಮೀನುಗಾರಿಕೆಯಲ್ಲಿ ಗಳಿಸಬಹುದು. ಕೊಡಗಿನಲ್ಲಿ ಇದುವರೆಗೂ ಮೀನಿಗೆ ರೋಗ ಬಾಧಿಸಿಲ್ಲ ಎಂದರು.
ಸ್ಥಳೀಯವಾಗಿ ಮೀನು ಮಾರಾಟಕ್ಕೆ ಮಾರುಕಟ್ಟೆ ಲಭ್ಯವಿದೆ. ಇಲ್ಲಿ ಅಗತ್ಯ ಪ್ರಮಾಣದ ಮೀನಿಲ್ಲದೆ ಹೊರಜಿಲ್ಲೆಯಿಂದಲೂ ಆಮದುಗೊಳುತ್ತಿದೆ. ಮತ್ಸö್ಯ ಸಂಪದ ಯೋಜನೆಯಡಿ ಸಹಾಯಧನ ಪಡೆದು ಕೊಳ ನಿರ್ಮಾಣ ಮಾಡಿಕೊಳ್ಳಬಹುದು. ಮೀನು ಮರಿ, ಆಹಾರ ಖರೀದಿಗೆ ಮಾತ್ರ ಖರ್ಚು ಬೀಳುತ್ತದೆ. ಹಾಗೆಯೇ ನೀರು ಕಾಗೆ, ನೀರು ಹಾವಿನಿಂದ ಜಲಚರಗಳು ಸಾಯುತ್ತವೆ. ಇದಕ್ಕೆ ಬಳಸಿದ ಬಲೆಯನ್ನು ನೀರಿನಲ್ಲಿ ತೇಲಿ ಬಿಡುವುದರಿಂದ ಕಾಗೆ, ಹಾವಿನ ನಿಯಂತ್ರಣ ಸಾಧ್ಯವಿದೆ ಎಂದರು.
ಗಂಭೀರವಾಗಿ ಕಾಫಿ ಕೃಷಿ ಮಾಡಿ
ಹಿರಿಯ ಕಾಫಿ ಬೆಳೆಗಾರ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಕೊಡಗಿನಲ್ಲಿ ಹಿಂದಿಗಿAತ ಕಾಫಿ ಉತ್ಪಾದನೆ ಹೆಚ್ಚಾಗಿದೆ. ಕಾಫಿ ಕೃಷಿ ಗಂಭೀರವಾಗಿ ಪರಿಗಣಿಸಿ ರೈತರು ಕಾರ್ಯೋನ್ಮುಖಗೊಳ್ಳಬೇಕು. ಸರಕಾರ ರೈತರ ಸಮಸ್ಯೆಯ ಪರಿಹಾರಕ್ಕೆ ಒತ್ತು ನೀಡಬೇಕು. ದಾಖಲೀಕರಣ ಕಷ್ಟದಾಯಕವಾಗಿರುತ್ತದೆ. ಈ ಕಾರಣದಿಂದಲೂ ಕಾಫಿ ಕೃಷಿಯಿಂದ ಯುವಕರು ವಿಮುಖಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಕೊರತೆ ದೊಡ್ಡ ಮಟ್ಟದ ಸಮಸ್ಯೆಯಾಗುತ್ತದೆ. ಕೊಡಗಿನ ಬೆಳೆಗಾರರು ಸಂಘಟನಾತ್ಮಕವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮಣ್ಣು ಪರೀಕ್ಷೆ ಅಗತ್ಯ
ಭಾರತೀಯ ಕಾಫಿ ಮಂಡಳಿ ವಿಜ್ಞಾನಿ ಡಾ. ಶಿವಪ್ರಸಾದ್ ಮಾತನಾಡಿ, ಸಂಚಾರಿ ಮಣ್ಣಿನ ಪರೀಕ್ಷೆಗೆ ಮಂಡಳಿಯಿAದ ಕ್ರಮವಹಿಸಿದೆ. ಈ ಮೂಲಕ ಸ್ಥಳೀಯವಾಗಿ ಮಾಹಿತಿ ತಿಳಿಯುತ್ತದೆ. ಈ ಸೌಲಭ್ಯ ಬಳಸಿಕೊಳ್ಳಬೇಕು. ಇಂಗು ಗುಂಡಿ ಕಾಫಿ ತೋಟಕ್ಕೆ ಬಹಳ ಮುಖ್ಯ. ಕೃಷಿಗೆ ಪೋಷಾಕಾಂಶ ನೀಡಲು ಮಣ್ಣು ಪರೀಕ್ಷೆ ಮುಖ್ಯ ಎಂದರು.
ಜೇನು ಕೃಷಿ ಕಾಫಿ ಬೆಳೆಗೆ ಪೂರಕ
ಅರಣ್ಯ ವಿದ್ಯಾಲಯದ ಪ್ರಾಧ್ಯಾಪಕ ಕೆಂಚರೆಡ್ಡಿ ಜೇನು ಕೃಷಿ ಅಗತ್ಯತೆ ಕುರಿತು ಮಾತನಾಡಿ, ತೋಟಗಳಲ್ಲಿ ಜೇನು ಕೃಷಿ ಮಾಡುವುದರಿಂದ ಜೇನು ತುಪ್ಪದ ಆದಾಯದ ಜೊತೆಯಲ್ಲಿ ಜೇನುಹುಳುಗಳ ಪರಾಗ ಸ್ಪರ್ಶದಿಂದಾಗಿ ಕಾಫಿ ಉತ್ಪಾದನೆ ಹೆಚ್ಚಾಗುತ್ತದೆ. ಉಪ ಉತ್ಪನ್ನಗಳಾದ ಮೇಣ, ಅಂಟು, ಜೆಲ್ಲಿ ಇತ್ಯಾದಿಗಳು ಕೂಡ ಬೆಳೆಗಾರರಿಗೆ ಲಭ್ಯವಾಗುವ ಬಗ್ಗೆ ವಿವರಿಸಿದರು. ತೋಟಗಳಲ್ಲಿ ಜೇನು ಕೃಷಿ ಮಾಡುವುದರಿಂದ ೨೦-೩೦ ಶೇ ಕಾಫಿ ಇಳುವರಿ ಜಾಸ್ತಿಯಾಗುವ ಬಗ್ಗೆ ಮಾಹಿತಿ ನೀಡಿದ ಅವರು, ಜೇನು ನೊಣಗಳು ವಿವಿಧ ಹವಾಗುಣಗಳಿಗೆ ಒಗ್ಗಿಕೊಳ್ಳುವ ಸಾಮರ್ಥ್ಯವಿದೆ ಎಂದರು.
ಪ್ರಗತಿಪರ ಸಾವಯವ ಕೃಷಿಕ ಕಲಿಸ್ತ ಡಿಸಿಲ್ವ ಸಾವಯವ ಕೃಷಿ ಬಗ್ಗೆ ಮಾತನಾಡಿ, ಕಳೆದ ೬ ವರ್ಷಗಳಿಂದ ಯಾವುದೇ ಗೊಬ್ಬರ ಬಳಸದೆ ಕಾಫಿ ಬೆಳೆದು ಉತ್ತಮ ಆದಾಯ ಗಳಿಸಿಕೊಂಡ ಬಗ್ಗೆ ಅನುಭವ ಹಂಚಿಕೊAಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್, ಕಾಫಿಯೊಂದಿಗೆ ಇತರ ಉಪಕೃಷಿಗಳನ್ನು ಬೆಳೆಯುವ ಬಗ್ಗೆ ರೈತರು ಗಮನ ಹರಿಸಬೇಕು. ಪ್ರಸ್ತುತ ಇರುವ ಇಳುವರಿಗಿಂತ ಹೆಚ್ಚಿನ ಇಳುವರಿ ಪಡೆಯುವತ್ತ ಬೆಳೆಗಾರರು ಗಮನ ಹರಿಸಬೇಕು. ಅತೀಯಾದ ರಾಸಾಯನಿಕ ಬಳಕೆಯಿಂದ ಅಂತರರಾಷ್ಟಿçÃಯ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ತಿರಸ್ಕಾರ ಮಾಡಲಾಗುತ್ತಿದೆ. ಇದರ ಬಗ್ಗೆ ತುರ್ತು ಗಮನಹರಿಸಬೇಕು ಎಂದರು.