ಬೈರೂತ್ ಮೇಲೆ ಇಸ್ರೇಲ್ ದಾಳಿ-ಹಿಜ್ಬುಲ್ಲಾ ಪ್ರತಿದಾಳಿ

ದೇರ್‌ಅಲ್‌ಬಲಾಹ್, ಅ. ೭: ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ಅಕ್ಟೋಬರ್ ೭ಕ್ಕೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರವೇ ಗಾಜಾ ಮತ್ತು ಲೆಬನಾನ್ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸಿದೆ. ಇಸ್ರೇಲ್ ಹಮಾಸ್ ಮತ್ತು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ೨೩ ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಸಹ ರಾಕೆಟ್ ದಾಳಿ ನಡೆಸಿದೆ. ದಕ್ಷಿಣ ಲೆಬನಾನ್‌ನಿಂದ ಹಾರಿಬಂದ ಐದು ರಾಕೆಟ್‌ಗಳು ಬಂದರು ನಗರ ಹೈಫಾಗೆ ಸೋಮವಾರ ಅಪ್ಪಳಿಸಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ರಾಕೆಟ್‌ಗಳು ರೆಸ್ಟೋರೆಂಟ್, ಮುಖ್ಯರಸ್ತೆ ಮತ್ತು ಒಂದು ಮನೆಗೆ ಅಪ್ಪಳಿಸಿದ್ದು, ಕನಿಷ್ಟ ೧೦ ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮತ್ತೆ ೧೫ ರಾಕೆಟ್‌ಗಳು ಬರುತ್ತಿರುವುದರ ಬಗ್ಗೆ ಮಾಹಿತಿ ಅರಿತ ಇಸ್ರೇಲ್ ಸೇನೆ ಗಲಿಲೀ ಪ್ರದೇಶದಲ್ಲೂ ಎಚ್ಚರಿಕೆಯ ಸೈರನ್ ಮೊಳಗಿಸಿದೆ. ಅಲ್ಲದೆ, ಕೆಲವನ್ನು ಹೊಡೆದುರುಳಿಸಿದೆ. ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮಾಸ್ ಮತ್ತು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಲೆಬನಾನ್‌ನ ಬೈರೂತ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಹಿಜ್ಜುಲ್ಲಾ ದಾಳಿ ನಡೆಸಿದೆ ಎಂದು ವರದಿಯಾಗಿದೆ.

೬ ತಿಂಗಳ ಬಳಿಕ ಮುರುಘಾಶ್ರೀ ಬಿಡುಗಡೆ

ಚಿತ್ರದುರ್ಗ, ಅ. ೭: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ೬ ತಿಂಗಳ ಬಳಿಕ ಬಿಡುಗಡೆಯಾಗಿ ಜೈಲಿನಿಂದ ಹೊರಬಂದಿದ್ದಾರೆ. ಚಿತ್ರದುರ್ಗದ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣಕ್ಕೆ ಸಂಬAಧಪಟ್ಟ ಸಾಕ್ಷ್ಯಗಳ ವಿಚಾರಣೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶವನ್ನು ಹೊರಡಿಸಿತ್ತು. ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, ಸಾಕ್ಷಗಳ ವಿಚಾರಣೆ ಮುಗಿಯುವವರೆಗೂ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಕಳೆದ ಏಪ್ರಿಲ್ ೨೩ ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕರೂ ಶ್ರೀಗಳು ಜೈಲಿಗೆ ಮತ್ತೆ ಹೋಗಬೇಕಾಗಿ ಬಂದಿತ್ತು. ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಸಂತ್ರಸ್ತೆಯರಿಬ್ಬರು ಸೇರಿದಂತೆ ೧೨ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಮುರುಘಾಶ್ರೀ ಬಿಡುಗಡೆ ಮಾಡಬೇಕಿತ್ತು. ಆದೇಶದ ಪ್ರತಿ ಜಿಲ್ಲಾ ಕಾರಾಗೃಹ ಅಧಿಕಾರಿಗಳ ಕೈ ಸೇರಿದ್ದು ಪ್ರಕ್ರಿಯೆಗಳು ಮುಗಿದ ನಂತರ ಶ್ರೀಗಳು ಜೈಲಿನಿಂದ ಹೊರಬಂದಿದ್ದಾರೆ. ಇನ್ನು ಹೈಕೋರ್ಟ್ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಮುರುಘಾಶ್ರೀ ಇರುವಂತಿಲ್ಲ ಎಂದು ಷರತ್ತು ವಿಧಿಸಿ ಜಾಮೀನು ನೀಡಿದ್ದರಿಂದ ಅವರು ದಾವಣಗೆರೆಗೆ ತೆರಳಿದ್ದಾರೆ.

ಜಾತಿ ಗಣತಿ ಕುರಿತು ಸಚಿವ ಸಂಪುಟ ಸಭೆsÀಯಲ್ಲಿ ಚರ್ಚೆ

ಬೆಂಗಳೂರು, ಅ. ೭: ಜಾತಿ ಗಣತಿ ಎಂದು ಜನಪ್ರಿಯವಾಗಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಜಾರಿಗೊಳಿಸುವ ಬಗ್ಗೆ ತಾ. ೧೮ ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಜಾತಿ ಗಣತಿ ವರದಿ ಕುರಿತು ಇಂದು ಹಿಂದುಳಿದ ವರ್ಗಗಳ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ ನಂತರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಸದರಿಗೂ ಈ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಯಾರೂ ಬಂದಿಲ್ಲ. ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಸೇರಿದಂತೆ ಸುಮಾರು ೩೦ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಅಂಗೀಕಾರ ಮಾಡಿ, ಜಾರಿಗೆ ತರಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ ಎಂದರು. ಇಡೀ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ. ತಾ. ೧೮ ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಯಿಂದ ಸಂತ್ರಸ್ತೆಯ ಮನೆ ಮೇಲೆ ಗುಂಡಿನ ದಾಳಿ

ಛತ್ತರ್‌ಪುರ, ಅ. ೭: ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಸೋಮವಾರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ಯಿಯೊಬ್ಬ ೧೭ ವರ್ಷದ ಸಂತ್ರಸ್ತ ಬಾಲಕಿಯ ಮನೆ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಆಕೆಯ ಅಜ್ಜ ಮೃತಪಟ್ಟಿದ್ದಾರೆ ಮತ್ತು ಆಕೆಯ ಚಿಕ್ಕಪ್ಪ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹರಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಅವರು ಹೇಳಿದ್ದಾರೆ. ಆರೋಪಿ ಭೋಲಾ ಅಹಿರ್ವಾರ್ (೨೪) ಸಂತ್ರಸ್ತೆಯ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ೬೦ ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ೩೨ ವರ್ಷದ ವ್ಯಕ್ತಿ ಹಾಗೂ ೧೭ ವರ್ಷದ ಬಾಲಕಿ (ಅತ್ಯಾಚಾರ ಸಂತ್ರಸ್ತೆ) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

೨೦೨೬ಕ್ಕೆ ಎಡಪಂಥೀಯ-ಉಗ್ರಗಾಮಿಗಳ ನಿರ್ಮೂಲನೆ-ಅಮಿತ್ ಷಾ

ನವದೆಹಲಿ, ಅ. ೭: ಎಡಪಂಥೀಯ-ಉಗ್ರಗಾಮಿಗಳ (ಎಲ್‌ಡಬ್ಲ್ಯೂಇ) ವಿರುದ್ಧದ ಹೋರಾಟವು ಅಂತಿಮ ಹಂತದಲ್ಲಿದೆ ಮತ್ತು ಮಾರ್ಚ್ ೨೦೨೬ರ ವೇಳೆಗೆ ಎಡಪಂಥೀಯ-ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸೋಮವಾರ ಹೇಳಿದ್ದಾರೆ. ಇಂದು ನಕ್ಸಲ್ ಪೀಡಿತ ರಾಜ್ಯಗಳ ಎಂಟು ಮುಖ್ಯಮಂತ್ರಿಗಳೊAದಿಗೆ ನಡೆದ ಭದ್ರತೆ ಮತ್ತು ಅಭಿವೃದ್ಧಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅಮಿತ್ ಷಾ, ಅಭಿವೃದ್ಧಿಯು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಕೊನೆಯ ವ್ಯಕ್ತಿಯನ್ನು ತಲುಪಬೇಕಾದರೆ, ಎಡ ಸಿದ್ಧಾಂತ ಪ್ರೇರಿತ ಹಿಂಸಾಚಾರವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು ಎಂದರು. ಎಲ್‌ಡಬ್ಲ್ಯೂಇ ವಿರುದ್ಧ ಹೋರಾಡಲು, ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಳೆದ ೩೦ ವರ್ಷಗಳಲ್ಲಿ ಮೊದಲ ಬಾರಿಗೆ, ಎಡ ಸಿದ್ಧಾಂತ ಬೆಂಬಲಿತ ಉಗ್ರವಾದದಿಂದಾಗಿ ಮೃತಪಟ್ಟವರ ಸಂಖ್ಯೆ ೧೦೦ಕ್ಕಿಂತ ಕಡಿಮೆಯಾಗಿದೆ ಎಂದು ಶಾ ಹೇಳಿದರು.

ಬಿಟ್ ಕಾಯಿನ್ ಪ್ರಕರಣ-ಡಿವೈಎಸ್‌ಪಿ ಬಂಧನ

ಬೆAಗಳೂರು, ಅ. ೭: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬAಧ ಸಾಕ್ಷö್ಯ ತಿದ್ದಿದ ಆರೋಪದಡಿ ಡಿವೈಎಸ್‌ಪಿ ಶ್ರೀಧರ್ ಪೂಜಾರಿ ಅನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇಂದು ವಿಚಾರಣೆಗಾಗಿ ಸಿಐಡಿ ಕಚೇರಿಗೆ ಬಂದಿದ್ದಾಗ ಶ್ರೀಧರ್ ಪೂಜಾರಿಯನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಶ್ರೀಧರ್ ಈ ಹಿಂದೆ ಬಿಟ್ ಕಾಯಿನ್ ಹಗರಣಕ್ಕೆ ಸಂಬAಧಿಸಿದAತೆ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಹಗರಣ ಸಂಬAಧ ಎಸ್‌ಐಟಿ ರಚನೆ ಬಳಿಕ ಕಾಟನ್‌ಪೇಟೆ ಠಾಣೆಯಲ್ಲಿ ಶ್ರೀಧರ್ ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿತ್ತು. ಕಾಟನ್ ಪೇಟೆ ಠಾಣೆಯ ಈ ಪ್ರಕರಣವನ್ನೂ ಸಹ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದ ಹಿಜ್ಬುಲ್ಲಾ ಸಂಘಟನೆ

ಟೆಲ್‌ಅವೀವ್, ಅ. ೭: ಲೆಬೆನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರ ಸಂಘಟನೆಯ ಮೇಲಿನ ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದಿರುವ ಹಿಜ್ಬುಲ್ಲಾ ನಾಯಕ ನೆಮ್ ಖಾಸಿಮ್ ತನಗೆ ಒಲಿದು ಬಂದ ಸಂಘಟನೆಯ ಸರ್ವೋಚ್ಛ ನಾಯಕನ ಸ್ಥಾನ ತೊರೆದಿದ್ದು ಮಾತ್ರವಲ್ಲದೇ ತನಗೆ ಸಂಘಟನೆಯ ಸಹವಾಸವೇ ಬೇಡ ಎಂದು ಹೇಳಿದ್ದಾರೆ. ಒಂದೆಡೆ ಲೆಬೆನಾನ್‌ನಲ್ಲಿ ಇಸ್ರೇಲ್ ವಾಯುಸೇನೆ ಹಿಜ್ಬುಲ್ಲಾ ಬಂಡುಕೋರರ ಘಟಕಗಳನ್ನು ಮತ್ತು ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರೆ, ಇತ್ತ ಹಿಜ್ಬುಲ್ಲಾ ಉಗ್ರ ಸಂಘಟನೆಯ ಒಬ್ಬೊಬ್ಬರೇ ನಾಯಕರು ಕಣ್ಮರೆಯಾಗುತ್ತಿದ್ದಾರೆ. ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ.