ಸೋಮವಾರಪೇಟೆ, ಅ. ೭: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಗೃಹಲಕ್ಷಿö್ಮÃ ಯೋಜನೆಯಲ್ಲಿ ತಿಂಗಳಾAತ್ಯಕ್ಕೆ ಒಟ್ಟು ೨೪,೬೬೦ ಸದಸ್ಯರು ನೋಂದಣಿ ಮಾಡಿಕೊಂಡಿದ್ದು, ೨೪,೪೫೦ ಜನರ ಖಾತೆಗೆ ಹಣ ಜಮಾವಣೆಯಾಗಿದೆ ಎಂದು ಸಿಡಿಪಿಒ ಸಭೆಗೆ ತಿಳಿಸಿದರು. ಇಂದಿಗೂ ಸಾಕಷ್ಟು ಜನರಿಗೆ ಹಣ ಜಮಾವಣೆಯಾಗದ ಬಗ್ಗೆ ಸಮಿತಿ ಸದಸ್ಯ ವಿರೇಂದ್ರಕುಮಾರ್ ಸಭೆಯ ಗಮನಕ್ಕೆ ತಂದರು.
ಜಿಎಸ್ಟಿ ಮತ್ತು ಕೆವೈಸಿ ಸಮಸ್ಯೆಗಳಿಂದಾಗಿ ಹಣ ಖಾತೆಗೆ ಜಮಾ ಆಗುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು ಸ್ಥಳೀಯ ಬ್ಯಾಂಕ್ ಸಿಬ್ಬಂದಿಗಳನ್ನು ಕರೆಯಿಸಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಬೇಕೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ತಿಳಿಸಿದರು.
ತಾಲೂಕಿನಲ್ಲಿ ಪಡಿತರ ಚೀಟಿಗಾಗಿ ಒಟ್ಟು ೧,೦೬೦ ಅರ್ಜಿಗಳು ತಿದ್ದುಪಡಿಗಾಗಿ ಸಲ್ಲಿಸಲಾಗಿತ್ತು. ಅದರಲ್ಲಿ ೧೦೩೪ ಅರ್ಜಿಗಳು ಪುರಸ್ಕೃತವಾಗಿದ್ದು, ೨೬ ಅರ್ಜಿಗಳು ತಿರಸ್ಕಾರವಾಗಿದೆ. ನೂತನ ಪಡಿತರ ಚೀಟಿಗಾಗಿ ೩೮೫ ಅರ್ಜಿಗಳು ಬಂದಿದ್ದು, ಅದರಲ್ಲಿ ೧೪೯ ಅರ್ಜಿಗಳು ಪುರಸ್ಕೃತವಾಗಿದೆ. ೪ ಅರ್ಜಿಗಳು ತಿರಸ್ಕಾರಗೊಂಡಿದ್ದು, ೨೩೨ ಅರ್ಜಿಗಳು ಬಾಕಿ ಉಳಿದಿವೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು.
ಗೃಹಜ್ಯೋತಿ ಯೋಜನೆಗೆ ಸಂಬAಧಿಸಿದAತೆ ಮಾಹಿತಿ ನೀಡಲು ಸೆಸ್ಕ್ನ ಎಇಇ ಸಭೆಗೆ ಬಾರದಿರುವ ಬಗ್ಗೆ ಸದಸ್ಯ ಎಸ್.ಎಂ. ಡಿಸಿಲ್ವ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಸಭೆಗಳಲ್ಲಿ ಸಂಬAಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕೆಂದು ಅಧ್ಯಕ್ಷರು ಸೂಚಿಸಿದರು. ಶನಿವಾರಸಂತೆಯ ಹಾರೆಹೊಸೂರು ಗ್ರಾಮದ ೧೧ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವಂತೆ ಸದಸ್ಯ ಸಂದೀಪ್ ಮನವಿ ಮಾಡಿದರು.
ಶಕ್ತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ೭೨,೨೧,೧೦೮ ಮಹಿಳೆಯರು ಪ್ರಯಾಣಿಸಿದ್ದಾರೆ. ಶಕ್ತಿಯೋಜನೆಯಿಂದ ಕೆಎಸ್ಆರ್ಟಿಸಿ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಇಲಾಖೆಯ ಟಿ.ಸಿ. ಶ್ರೀನಿವಾಸ್ ತಿಳಿಸಿದರು. ಸದ್ಯ ಜಿಲ್ಲೆಯಲ್ಲಿ ಶೇ. ೭೦ರಷ್ಟು ಹೊರ ಜಿಲ್ಲೆಯ ಡಿಪೋಗಳ ಬಸ್ಗಳು ಸಂಚರಿಸುತ್ತಿವೆ. ಈಗಾಗಲೇ ಜಿಲ್ಲೆಗೆ ೫ ಅಶ್ವಮೇಧ ಬಸ್ಗಳು ಬಂದಿದ್ದು, ಜಿಲ್ಲೆಯಲ್ಲಿ ನೋಂದಣಿ ಮಾಡಲು ಅನುಮತಿಗಾಗಿ ಕೇಳಲಾಗಿತ್ತು. ಅನುಮತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ನೋಂದಣಿಯೊAದಿಗೆ ಬಸ್ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪದವಿ ಮತ್ತು ಡಿಪ್ಲೊಮೋ ಮಾಡಿಯೂ ನಿರುದ್ಯೋಗಿಗಳಾಗಿರುವ ೧೦೧೫ ಮಂದಿ ಯುವ ನಿಧಿಗೆ ನೋಂದಣಿ ಮಾಡಿಕೊಂಡಿರುವ ಬಗ್ಗೆ ಉದ್ಯೋಗ ನೋಂದಣಿ ಇಲಾಖೆಯ ಅಧಿಕಾರಿ ಮಾಧವಿ ಅವರು ಸಭೆಗೆ ಮಾಹಿತಿ ನೀಡಿದರು. ಇದರಲ್ಲಿ ಪದವೀಧರರಿಗೆ ರೂ. ೩ ಸಾವಿರ ಮತ್ತು ಡಿಪ್ಲೊಮೋದವರಿಗೆ ಮಾಸಿಕ ರೂ. ೧,೫೦೦ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.