ವೀರಾಜಪೇಟೆ, ಅ. ೭: ಕ್ರೀಡೆಗೆ ಅದಮ್ಯವಾದ ಚೈತನ್ಯ ಹಾಗೂ ಶಕ್ತಿ ಇದೆ. ಉತ್ಸಾಹ, ಪಾರದರ್ಶಕತೆ ಇರುವುದರಿಂದ ಕೊಡಗಿನಲ್ಲಿ ಕ್ರೀಡೆಗಳು ಜೀವಂತವಾಗಿ ಉಳಿದುಕೊಂಡಿದೆ. ಕೊಡಗಿನಲ್ಲಿ ನಡೆಯುವಷ್ಟು ಕ್ರೀಡೆಗಳು ದೇಶದ ಬೇರೆ ಯಾವ ಜಾಗದಲ್ಲೂ ಕಾಣ ಸಿಗುವುದಿಲ್ಲ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವೀರಾಜಪೇಟೆಯ ಮಲಬಾರ್ ರಸ್ತೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಬಾಳೆಕುಟ್ಟಿರ ಕಪ್ ಕೇರ್‌ಬಲಿ ನಮ್ಮೆ ೨೦೨೫ ಹಗ್ಗಜಗ್ಗಾಟ ಲೋಗೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೇವಲ ೬೦ ಕುಟುಂಬಗಳಿAದ ಪ್ರಾರಂಭಗೊAಡ ಕೌಟುಂಬಿಕ ಹಾಕಿ ನಮ್ಮೆ ಇಂದು ಗಿನ್ನಿಸ್‌ಬುಕ್ ಆಫ್ ರೆಕಾರ್ಡ್ನಲ್ಲಿ ರಾರಾಜಿಸುತ್ತಿದೆ. ೧೨ ಶತಮಾನದಿಂದ ಪ್ರಾರಂಭಗೊAಡ ಹಗ್ಗಜಗ್ಗಾಟ ಕ್ರೀಡೆ ಒಲಂಪಿಕ್ಸ್ನವರೆಗೆ ಬಂದು ನಂತರದ ದಿನಗಳಲ್ಲಿ ಮಾಯವಾಗಿರುವುದು ವಿಷಾದದ ವಿಚಾರವಾಗಿದೆ. ಬಾಳೆಕುಟ್ಟಿರ ಕುಟುಂಬ ಶ್ರೀ ಮಠದ ವಿದ್ಯಾಶಾಲೆಯ ಮೈದಾನದಲ್ಲಿ ಕೇರ್‌ಬಲಿ ನಮ್ಮೆಯನ್ನು ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡಾಕೂಟಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು. ಟಗ್‌ಆಫ್‌ವಾರ್ ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, ಹಿಂದೆ ಮಂದ್‌ಮಾನಿ ಗಳಲ್ಲಿ ಕೋಲನ್ನು ಎಲೆದು ಶಕ್ತಿ ಪ್ರದರ್ಶನ ಮಾಡುತ್ತಿದ್ದರು. ಇದರ ಪ್ರತೀಕವಾಗಿಯೇ ಇಂದು ಹಗ್ಗವನ್ನು ಎಳೆದು ತಮ್ಮ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ. ಪ್ರಾರಂಭದಲ್ಲಿ ಕೇವಲ ೪೨ ತಂಡಗಳೊAದಿಗೆ ಪೊನ್ನೋಲೊತಂಡ ಕುಟುಂಬ ಕಕ್ಕಬ್ಬೆಯಲ್ಲಿ ಕೇರ್‌ಬಲಿ ನಮ್ಮೆಯಲ್ಲಿ ಆಯೋಜಿಸಿತ್ತು. ನಂತರ ಚಟ್ಟಂಗಡ, ಬೊಟ್ಟೋಳಂಡ ಕುಟುಂಬಗಳು ಕೇರ್‌ಬಲಿ ನಮ್ಮೆಯನ್ನು ನಡೆಸಿದೆ. ಕೇರ್‌ಬಲಿ ನಮ್ಮೆ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕೊಡವ ಟಗ್‌ಆಫ್‌ವಾರ್ ಅಕಾಡೆಮಿ ಯನ್ನು ಸ್ಥಾಪಿಸಲಾಗಿದೆ ಎಂದರು. ಮುಂದಿನ ಬಾರಿಯಿಂದ ಹತ್ತಿಯಿಂದ ನಿರ್ಮಿತವಾದ ಹಗ್ಗವನ್ನು ಬಳಸಲಾ ಗುವುದು ಎಂದು ಹೇಳಿದ ಅವರು ಈಗಾಗಲೇ ೧೩ ಕುಟುಂಬಗಳು ನಮ್ಮೆ ನಡೆಸಲು ಹೆಸರು ನೋಂದಾಯಿಸಿ ಕೊಂಡಿವೆ. ಬಾಳೆಕುಟ್ಟಿರ ಕುಟುಂಬ ಆದ ಬಳಿಕ ಚೀಯಕ್‌ಪೂವಂಡ ಕುಟುಂಬ ನಡೆಸುತ್ತದೆ ಎಂದು ಹೇಳಿದರು.

ಕ್ರೀಡಾಕೂಟದ ಅಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಏಪ್ರಿಲ್ ತಿಂಗಳಲ್ಲಿ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲ ವಿದ್ಯಾಪೀಠದ ಮೈದಾನದಲ್ಲಿ ಕುಟುಂಬದ ಸದಸ್ಯರು, ದಾನಿಗಳು, ಊರಿನವರ ಸಹಕಾರದಿಂದ ಕ್ರೀಡಾಕೂಟವನ್ನು ನಡೆಸಲಾಗುವುದು ಎಂದು ಹೇಳಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ವಾಸು ತಿಮ್ಮಯ್ಯ, ಖಜಾಂಚಿ ರಾಯ್ ಕಾರ್ಯಪ್ಪ, ಸಂಚಾಲಕ ದಿನಿ ಬೋಪಯ್ಯ ನಿರ್ದೇಶಕ ಸತ್ಯ ಉತ್ತಯ್ಯ, ಮತ್ತಿತರರು ಉಪಸ್ಥಿತರಿದ್ದರು. ಬಾಳೆಕುಟ್ಟಿರ ಮಂದಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ್ ಪೂಣಚ್ಚ ಕಾರ್ಯಕ್ರಮ ನಿರೂಪಿಸಿ, ವಾಸು ತಿಮ್ಮಯ್ಯ ವಂದಿಸಿದರು.