ಚೆಯ್ಯಂಡಾಣೆ, ಅ. ೭: ವೀರಾಜಪೇಟೆ ರೇಂಜ್ ಮುಅಲ್ಲಿಮೀನ್ ವತಿಯಿಂದ ರೇಂಜ್ಗೆ ಒಳಪಟ್ಟ ಮದರಸ ವಿದ್ಯಾರ್ಥಿಗಳ (ಎಸ್ ಕೆ ಎಸ್ ಬಿವಿ) ಮಿಲಾದ್ ಸಂದೇಶ ಜಾಥಾ ಹಾಗೂ ಗ್ರಾಂಡ್ ಮೌಲಿದ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ನುಸ್ರತುಲ್ ಉಲೂಂ ಮದರಸದಿಂದ ಆರಂಭಗೊAಡ ಜಾಥಾ ವೀರಾಜಪೇಟೆಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಮೀನುಪೇಟೆಯಲ್ಲಿ ಸಮಾಪನಗೊಂಡಿತು.
ಜಾಥಾದಲ್ಲಿ ರೇಂಜ್ಗೆ ಒಳಪಟ್ಟ ಮದರಸಗಳ ೨೧ ದಫ್ ತಂಡ ಹಾಗೂ ೧೫ ಸ್ಕೌಟ್ಸ್ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು. ಈ ಸಂದರ್ಭ ರೇಂಜ್ನಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಂಡ್ ಮೌಲಿದ್ಗೆ ಅಬ್ದುಲ್ ಗನಿ ಮುಸ್ಲಿಯಾರ್ ನೇತೃತ್ವ ನೀಡಿ ದುಆ ನೆರವೇರಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಎಂ.ಸಿ.ಅಶ್ರಫ್ ಮುಸ್ಲಿಯಾರ್, ಮುಹಮ್ಮದ್ ಹನೀಫ್ ಫೈಝಿ, ಅಬ್ದುಲ್ ಗನಿ ಮುಸ್ಲಿಯಾರ್, ಸುಹೈಬ್ ಫೈಝಿ, ಅಬ್ದುಲ್ಲಾ ಮುಸ್ಲಿಯಾರ್, ರಶೀದ್ ದಾರಿಮಿ, ಹಕೀಂ ಹಿಶಾಮಿ, ಜುನೈದ್ ಫೈಝಿ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.