ಸುಂಟಿಕೊಪ್ಪ, ಅ. ೭: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ವರ್ಷಂಪ್ರತಿಯಾಗಿ ಅಯೋಜಿಸಲಾಗುವ ಆಯುಧಪೂಜಾ ಸಮಾರಂಭವು ತನ್ನದೆಯಾದ ಇತಿಹಾಸವನ್ನು ಹೊಂದಿದೆ.

ಸಂಘವು ಆಯುಧಪೂಜಾ ಸಮಾರಂಭಕ್ಕೆ ಮಾತ್ರ ಸೀಮಿತಗೊಳ್ಳದೆ ರಕ್ತದಾನ, ಅನಾರೋಗ್ಯ ಪೀಡಿತರಿಗೆ ನೆರವು, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅಪಘಾತ ಇನ್ನಿತರ ಸಂಕಷ್ಟಗಳು ಎದುರಾದಾಗ ಸಂಘದ ಪದಾಧಿಕಾರಿಗಳು ಧಾವಿಸಿ ಧನ ಸಹಾಯ, ವೈಯಕ್ತಿಕ ಸಹಾಯಹಸ್ತ ಚಾಚುವ ಮೂಲಕ ನೆರವಿಗೆ ನಿಲ್ಲುತ್ತಿದೆ. ಅಷ್ಟೇಯಲ್ಲದೆ ಸಾಮಾಜಿಕ ಸೇವೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂದಿಯನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ತನ್ನದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.

ಜಿಲ್ಲೆ ಹಾಗೂ ರಾಜ್ಯದಲ್ಲಿ ಈ ಚಾಲಕರ ಸಂಘವು ತನ್ನ ಕಾರ್ಯವೈಖರಿ ಹಾಗೂ ಆಯುಧಪೂಜಾ ಸಮಾರಂಭವು ಇತರೆ ಸಂಘಗಳ ಸ್ಥಾಪನೆಗೆ ಪ್ರೇರಣೆಯಾಗಿದೆ. ಇದೀಗ ಈ ವರ್ಷವೂ ಸುಂಟಿಕೊಪ್ಪ ವಾಹನ ಚಾಲಕರ ಸಂಘದಿAದ ೫೪ನೇ ವರ್ಷದ ಅದ್ದೂರಿ ಆಯುಧಪೂಜಾ ಸಮಾರಂಭವು ಅ.೧೧ ರ ಶುಕ್ರವಾರದಂದು ಸಂಘದ ಸಾರ್ವಜನಿಕ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ವಹಿಸಲಿದ್ದು ಉದ್ಘಾಟನೆಯನ್ನು ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ವಿಟ್ಲದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಸುಂಟಿಕೊಪ್ಪ ಕರ್ನಾಟಕ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಸುಂಟಿಕೊಪ್ಪ ಎವರ್‌ಗ್ರೀನ್ ಗ್ರೂಪ್ ಮಾಲೀಕ ಎ.ಬಿ. ಅಜೀಜ್, ೭ನೇ ಹೊಸಕೋಟೆ ಉದ್ಯಮಿ ಕಿರಣ್‌ಗೌಡ, ಬೆಂಗಳೂರಿನ ಹಿರಿಯ ವಕೀಲರು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ, ಕಾಫಿ ಬೆಳೆಗಾರರಾದ ಜಗನ್ನಾಥ ಶೆಣೈ, ಜಿ.ಪಂ. ಮಾಜಿ ಸದಸ್ಯರಾದ ಪಿ.ಎಂ. ಲತೀಫ್, ಭಾರತೀಶ್, ಕಾಫಿ ಬೆಳೆಗಾರರಾದ ಡಿ. ವಿನೋದ್ ಶಿವಪ್ಪ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಎನ್. ರವೀಂದ್ರ, ತಾ.ಪಂ. ಮಾಜಿ ಉಪಾಧ್ಯಕ್ಷ ಜರ್ಮಿ ಡಿಸೋಜ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಸ್ಯಾಂಡಲ್‌ವುಡ್ ತೋಟದ ಮಾಲೀಕರಾದ ಎಸ್.ಯು. ಜಾಹೀದ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕ್ಲಾಡಿಯಸ್‌ಲೋಬೋ, ಉದ್ಯಮಿಗಳಾದ ಮೊÊದು, ಸಿದ್ಧಲಿಂಗಪುರ ಕೃಷಿಕ ಎ.ಎಸ್. ರಾಮಣ್ಣ, ಎಸ್‌ಡಿಎಂ ಟ್ರಸ್ಟ್ ಸುಂಟಿಕೊಪ್ಪ ಅಧ್ಯಕ್ಷ ಮುಕುಲ್ ಮಹೇಂದ್ರ, ಸುಂಟಿಕೊಪ್ಪ ಯುವ ಮುಖಂಡ ಪಿ.ಎಲ್. ಹರ್ಶದ್, ಸುಂಟಿಕೊಪ್ಪ ಯುವ ಕಾಂಗ್ರೆಸ್ ಮುಖಂಡ ಅನೂಪ್ ಕುಮಾರ್ ಮತ್ತು ಗ್ರೇಡ್-೧ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಆಗಮಿಸಲಿದ್ದಾರೆ.

ಈ ಬಾರಿ ಸ್ಥಳೀಯ ಡ್ಯಾನ್ಸ್ ಶಾಲಾ ತಂಡದ ಮಕ್ಕಳು ಹಾಗೂ ಸಾರ್ವಜನಿಕರಿಗೆ ಡ್ಯಾನ್ಸ್ ಮೇಳ ಆಯೋಜಿಸಲಾಗಿದೆ.

ಹಿರಿಯ ಚಾಲಕರಾದ ಹೆಚ್. ಉಸ್ಮಾನ್, ನಿವೃತ್ತ ಯೋಧರು ವಿಲಿಯಂ ಮೆನೇಜೆಸ್, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶೂಶ್ರಷಕಿ ಚಿತ್ರಕುಮಾರಿ ಅವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ದೊಡ್ಡ ವಾಹನಗಳ ಮತ್ತು ಚಿಕ್ಕ ವಾಹನಗಳ ಅಲಂಕಾರ, ಅಂಗಡಿ ಮಳಿಗೆ ಅಲಂಕಾರ ಸ್ಪರ್ಧೆ, ವರ್ಕ್ಶಾಪ್, ಸರ್ಕಾರಿ ಕಛೇರಿ ಮತ್ತು ಸಂಘ ಸಂಸ್ಥೆ ಅಲಂಕಾರ, ಆಟೋರಿಕ್ಷಾ ಅಲಂಕಾರ ಸ್ಪರ್ಧೆಗಳು ನಡೆಯಲಿದೆ.